ಕೈ ತೋರಿಸಿದಲ್ಲಿ ವಕ್ಫ್ ಆಸ್ತಿಯೇ ಕಾಣಿಸುತ್ತಿದೆ: ಶಶಿಕಲಾ ಜೊಲ್ಲೆ

| Published : Nov 23 2024, 01:17 AM IST

ಕೈ ತೋರಿಸಿದಲ್ಲಿ ವಕ್ಫ್ ಆಸ್ತಿಯೇ ಕಾಣಿಸುತ್ತಿದೆ: ಶಶಿಕಲಾ ಜೊಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೈ ತೋರಿಸಿದಲ್ಲಿ ವಕ್ಫ್ ಆಸ್ತಿ ಕಂಡು ಬರುತ್ತಿದೆ. ಸುಮಾರು 15 ರಿಂದ 16 ಸಾವಿರ ರೈತರಿಗೆ ಸೇರಿದ ಜಮೀನಿನ ಮೇಲೆ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ತಿಳಿದುಬಂದಿದೆ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೈ ತೋರಿಸಿದಲ್ಲಿ ವಕ್ಫ್ ಆಸ್ತಿ ಕಂಡು ಬರುತ್ತಿದೆ. ಸುಮಾರು 15 ರಿಂದ 16 ಸಾವಿರ ರೈತರಿಗೆ ಸೇರಿದ ಜಮೀನಿನ ಮೇಲೆ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ತಿಳಿದುಬಂದಿದೆ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಚಿಕ್ಕೋಡಿ ಜಿಲ್ಲಾ ಬಿಜೆಪಿ ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ಚಿಕ್ಕೋಡಿಯಲ್ಲಿ ನಡೆದ ಧರಣ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿ, ಕಳೆದ ಸರ್ಕಾರದಲ್ಲಿ ನಾನು ಮುಜರಾಯಿ ಹಾಗೂ ವಕ್ಫ್‌ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ನನ್ನ ಅಸ್ತಿಯಲ್ಲೂ ವಕ್ಫ್ ಎಂದು ನಮೂದಾಗಿದೆ.ಹೀಗೆ ಮುಂದುವರೆದರೆ ಭಾರತೀಯ ಜನತಾ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುವುದೆಂದು ತಿಳಿಸಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ರೈತರ, ದೇವಸ್ಥಾನ ಮಠ, ರೈತರ ಜಮೀನಿನ ಮೇಲೆ ಆಸ್ತಿಗಳ ಮೇಲೆ ವಕ್ಫ್ ಎಂದು ನೋಟಿಸ್ ನೀಡಲಾಗುತ್ತಿದೆ. ಇದು ನಿಜಕ್ಕೂ ಖಂಡನೀಯ ಈ ವಕ್ಫ್ ವಿರುದ್ಧ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಸಂದರ್ಭದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಮಠ ದೇವಸ್ಥಾನದ ಆಸ್ತಿಗಳು ವಕ್ಫ್ ಆಸ್ತಿಗಳಾಗುತ್ತಿವೆ. ಹೀಗೆ ಮುಂದುವರಿದರೆ ಕೆರೆ,ಗುಡ್ಡ, ಗಾಂವಠಾಣ ಪ್ರದೇಶಗಳು ವಕ್ಫ್ ಆಸ್ತಿಗಳಾಗುತ್ತವೆ. ಈ ವಕ್ಪ್ ಸಮಸ್ಯೆ ಇತ್ಯರ್ಥ ಆಗುವವರೆಗೂ ಪ್ರತಿಭಟನೆ ಮುಂದುವರೆಯಲಿ ಎಂದರು.

ಪಹಣಿ ಮೇಲೆ ವಕ್ಫ್‌ ಎಂದು ಹೆಸರು ಬಂದಿರುವ ರೈತರು, ಸಾರ್ವಜನಿಕರಿಂದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಅಹವಾಲು ಸ್ವೀಕರಿಸಿದರು. ಬಳಿಕ ಉಪವಿಭಾಗಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪುರಸಭೆ ಅಧ್ಯಕ್ಷೆ ವೀಣಾ ಜಗದೀಶ ಕವಟಗಿಮಠ, ನಿಪ್ಪಾಣಿ ನಗರಸಭೆ ಅಧ್ಯಕ್ಷೆ ಸೋನಾಲಿ ಕೋಟಾಡಿಯಾ, ಮಾಜಿ ಎಂಎಲ್ಸಿ ವೀವೆಕರಾವ ಪಾಟೀಲ, ಮಾಜಿ ಶಾಸಕ ಬಾಳಾಸಾಹೇಬ ಪಾಟೀಲ, ಮಹೇಶ ಭಾತೆ, ಅಪ್ಪಾಸಾಹೇಬ ಚೌಗಲಾ, ಸಂಜಯ ಪಾಟೀಲ, ಶಾಂಭವಿ ಅಶ್ವತಪೂರ, ದುಂಡಪ್ಪ ಬೆಂಡವಾಡೆ, ಬಂಡಾ ಘೋರ್ಪಡೆ, ಸಂಜಯ ಕವಟಗಿಮಠ, ನಾಗರಾಜ ಮೇದಾರ, ರಮೇಶ ಕಾಳನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.