ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ.
ಜಿಲ್ಲಾಡಳಿತದಿಂದ ನಡೆದ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಎಸಿ ಡಿ.ಎಚ್.ಅಶ್ವಿನ್ ಅಭಿಮತ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರತಾಯ ಗರ್ಭದಿಂದ ಜನಿಸಿ ಭೂಮಂಡಲಕ್ಕೆ ಬರುವಾಗ ಕೇವಲ ಉಸಿರು ಇರುತ್ತದೆ. ಭೂಮಿ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಅದರ ಮಧ್ಯೆ ಈ ಮಾನವ ಕುಲಕ್ಕೆ ನೀನು ಕೊಡುಗೆ ನೀಡಿದ್ದರೆ ಮಾತ್ರ ನಿನ್ನ ಹೆಸರಿರುತ್ತದೆ. ಇಲ್ಲದಿದ್ದರೆ ಬದುಕಿದ್ದು ವ್ಯರ್ಥ ಎಂದು ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಹೇಳಿದರು.
ತಾಲೂಕಿನ ಗುವ್ವಲಕಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 44ರ ಸೇಟ್ ದಿನ್ನೆಯಲ್ಲಿರುವ ಶ್ರೀನಿವಾಸ ಸಪ್ಲೆ ಚೈನ್ ಸಲ್ಯೂಷನ್ಸ್ ಪ್ರೈ.ಲಿ.ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಶ್ರೀನಿವಾಸ ಸಪ್ಲೆ ಚೈನ್ ಸಲ್ಯೂಷನ್ಸ್ ಪ್ರೈ.ಲಿ., ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮು.ನಿ.ಪ್ರ.ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರೂ ಸಹಿತ ಅದರಿಂದ ಯುವಜನತೆ ದೂರವಾಗದಿರುವುದು ವಿಷಾದನೀಯ ಸಂಗತಿ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಸುಂದರ ಸ್ವಚ್ಛಂದ ಸಮಾಜ ನಿರ್ಮಾಣಕ್ಕೆ ಯುವಕರು ಸನ್ನದ್ಧರಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿ, ಒಂದು ಸಾರಿ ಒಬ್ಬ ವ್ಯಕ್ತಿ ಮಾದಕ ವ್ಯೆಸನಕ್ಕೆ ದಾಸನಾದರೆ ಅದರಿಂದ ಆನೇಕ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಅದು ದೈಹಿಕವಾಗಿಯು ಮತ್ತು ಮಾನಸಿಕವಾಗಿಯು ಇರಬಹುದು. ಮುಖ್ಯವಾಗಿ ಒಬ್ಬ ಸಾಮಾನ್ಯ ಮನುಷ್ಯ ಚಿಂತಿಸುವ ಹಾಗೆ ಮಾದಕ ವ್ಯಸನಿಗೆ ಆಗದು. ದೈಹಿಕ ಸಾಮರ್ಥ್ಯವು ಕುಂಠಿತವಾಗುತ್ತಾ ಹೋಗುತ್ತದೆ. ಕುಡಿತದಿಂದಾಗಿ ನಮ್ಮ ಆಯ್ಕೆಯ ಸಾಮರ್ಥ್ಯ ಆಕೆ ಕನಸುಗಳಿಗೆ ಭಂಗ ಬರುತ್ತದೆ, ನಿದ್ರಾಭಂಗ ಭ್ರಮಾಧೀನತೆ ಒತ್ತಡದಿಂದಾಗಿ ಅನಾರೋಗ್ಯಕರ ಜೀವನ ಶೈಲಿ ಶುರುವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಆಕಾಲ ಮೃತ್ಯುವು ಎದುರಾಗುತ್ತದೆ. ಕುಡಿತದ ಚಟದಿಂದಾಗಿ ಸಮಾಜದ ಮೇಲೆ ಆಗುವ ಪರಿಣಾಮಗಳು ಒತ್ತಟ್ಟಿಗೆ ಇರಲಿ ಮೊದಲು ಬಿಸಿ ತಟ್ಟುವುದು ನಿಮ್ಮ ಪತ್ನಿಗೆ ಮತ್ತು ಮಕ್ಕಳಿಗೆ, ಸ್ನೇಹಿತರು, ಜೊತೆ ಕೆಲಸಗಾರರು ನಿಮ್ಮನ್ನು ದೂರ ಇಡಲು ಆರಂಭಿಸುತ್ತಾರೆ.ಒಟ್ಟಾರೆ ಜನ ನಿಮ್ಮನ್ನು ಕೀಳು ಭಾವನೆಯಿಂದ ಕಾಣಲು ಪ್ರಾರಂಭಿಸುತ್ತಾರೆ. ಆದರೆ ಕುಡಿತದ ಚಟದ ವ್ಯಕ್ತಿಗೆ ಮತ್ತು ಆತನ ಮನೆಯವರಿಗೆ ಸಾಮಾಜಿಕ ಸಂಪರ್ಕ ಕಷ್ಟದಾಗುತ್ತಾ ಹೋಗುತ್ತದೆ. ಮರ್ಯಾದೆ ಉಳಿಸಿಕೊಳ್ಳಲು ಇತರ ಜನರಿಂದ ದೂರ ಉಳಿಯಬೇಕಾಗುತ್ತದೆ. ಪತ್ನಿ ಅನಿರ್ವಾಯವಾಗಿ ಸಹಿಸಿಕೊಂಡರು, ಕುಡಿದು ಮನೆಗೆ ಬರುವ ತಂದೆ ಅವಮಾನಕರ ಎಂದು ಮಕ್ಕಳು ಭಾವಿಸತೊಡಗುತ್ತಾರೆ. ತಂದೆಯಿಂದ ದೂರವಾಗುತ್ತಾರೆ ಆತನ ಜೊತೆಗೆ ಮಾತು ಬಿಡುತ್ತಾರೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮನೋವೈದ್ಯ ಡಾ. ಲಾವಣ್ಯ ಎ. ವಿಶೇಷ ಉಪನ್ಯಾಸವನ್ನು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಸಿ.ಚೇತನ್ ಪ್ರತಿಜ್ಞಾವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಮಂಜುನಾಥ, ಆರೋಗ್ಯ ಇಲಾಖೆಯ ಡಾ.ಸಂತೋಷ್ ಬಾಬು,ಡಾ. ಪ್ರಕಾಶ್, ಡಾ.ಕೃಷ್ಣಪ್ರಸಾದ್, ಜಿ,ಹರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಶ್ರೀನಿವಾಸ ಸಪ್ಲೆ ಚೈನ್ ಸಲ್ಯೂಷನ್ಸ್ ಪ್ರೈ.ಲಿ, ಪ್ರಧಾನ ವ್ಯವಸ್ಥಾಪಕ ಲೋಕೇಶ್ ಕೆ., ಉಪ ವ್ಯವಸ್ಥಾಪಕ ವೀರೇಂದ್ರ ರೆಡ್ಡಿ, ಮತ್ತಿತರರು ಇದ್ದರು.
ಸಿಕೆಬಿ-1 ತಾಲೂಕಿನ ಗುವ್ವಲಕಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 44 ರ ಸೇಟ್ ದಿನ್ನೆಯಲ್ಲಿರುವ ಶ್ರೀನಿವಾಸ ಸಪ್ಲೆ ಚೈನ್ ಸಲ್ಯೂಷನ್ಸ್ ಪ್ರೈ.ಲಿ.ನ ಆವರಣದಲ್ಲಿ ವ್ಯಸನಮುಕ್ತ ದಿನಾಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಉದ್ಘಾಟಿಸಿದರು.