ಇಫ್ತಾರ್ ಕೂಟದಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಎಲ್ಲರನ್ನೂ ಒಂದೆಡೆ ಸೇರಿಸಿ ಪ್ರೀತಿ, ವಿಶ್ವಾಸ ಹರಡಲಿ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸರ್ವ ಜನಾಂಗಕ್ಕೂ ಅನುಕೂಲವಾಗುವಂತೆ ಶಿಕ್ಷಣ, ಅರೋಗ್ಯ, ನೀರಾವರಿಗೆ ವಿಶೇಷ ಆದ್ಯತೆ ನೀಡುವ ಜೊತೆಗೆ ತಾಲೂಕಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕಲಿ .
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ವ ಧರ್ಮೀಯರ ನಡುವೆ ಭಾವೈಕ್ಯತೆ, ಪ್ರೀತಿ, ಸಾಮರಸ್ಯ ಮತ್ತು ಸಹೋದರತೆ ಬೆಳೆಸಲು ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ತಿಳಿಸಿದರು.ತಾಲೂಕಿನ ಕಿರುಗಾವಲು ಗ್ರಾಮದ ಅಂಜ್ ಮಲ್ ಶಾದಿಮಹಲ್ ಆವರಣದಲ್ಲಿ ರಂಜಾನ್ ಹಬ್ಬದ ವಿಶೇಷವಾಗಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಉಪವಾಸದಲ್ಲಿದ್ದು, ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದರು. ಪ್ರಾರ್ಥನೆ, ಉಪವಾಸ ಮುಗಿದ ಹಿನ್ನೆಲೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಲಹೆ ಮೇರೆಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ ಎಂದರು.
ಇಫ್ತಾರ್ ಕೂಟದಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಎಲ್ಲರನ್ನೂ ಒಂದೆಡೆ ಸೇರಿಸಿ ಪ್ರೀತಿ, ವಿಶ್ವಾಸ ಹರಡಲಿ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸರ್ವ ಜನಾಂಗಕ್ಕೂ ಅನುಕೂಲವಾಗುವಂತೆ ಶಿಕ್ಷಣ, ಅರೋಗ್ಯ, ನೀರಾವರಿಗೆ ವಿಶೇಷ ಆದ್ಯತೆ ನೀಡುವ ಜೊತೆಗೆ ತಾಲೂಕಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.ಮುಖಂಡ ಜೆನ್ ಮುಲ್ಲಾ ಮಾತನಾಡಿ, ಶಾಸಕ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಮುಖಂಡರಿಗೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ರಂಜಾನ್ ವಿಶೇಷ ಹಬ್ಬದಲ್ಲಿ ಶಾಸಕರು ಸೇರಿದಂತೆ ಸರ್ವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಭೋಜನ ಮಾಡಿದರು. ಈ ವೇಳೆ ಕಾಲಿದ್, ಅಲ್ತಾಫ್, ಮಸೂದ್ ಅಲಿ, ಅಜ್ಮತ್, ಟಿಎಪಿಸಿಎಂಎಸ್ ನಿರ್ದೇಶಕ ದೇವರಾಜ್, ದಿಲೀಪ್ ಸೇರಿ ಹಲವು ಮುಖಂಡರು ಇದ್ದರು.