ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಕೇಂದ್ರ ಸರ್ಕಾರದ ಅನುದಾನವನ್ನು ಬಳಕೆ ಮಾಡುತ್ತಿರುವ ಕುಣಿಗಲ್ ಶಾಸಕರು ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ.ಸಿ ಮಂಜುನಾಥ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ಆ ರೋಪ ಮಾಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದರ ಕಡೆಗಣಿಸುತ್ತಿರುವ ಶಾಸಕ ಎಂದು ಹೇಳುವ ಮುಖಾಂತರ ತೆಗೆದುಕೊಂಡರು. ಗ್ರಾಮ ಪಂಚಾಯಿತಿಗೆ ಹಲವಾರು ಕಾರ್ಯಕ್ರಮಗಳನ್ನು ಶಾಸಕರು ರೂಪಿಸುತ್ತಿದ್ದಾರೆ. ಆದರೆ ಯಾವುದೇ ಶಿಷ್ಟಾಚಾರಗಳನ್ನು ಬಳಸದೆ ಗಾಳಿಗೆ ತೂರಿ ಮನಸ್ಸು ಬಂದಂತೆ ಕಾರ್ಯಕ್ರಮ ರೂಪಿಸುತ್ತಿದ್ದು ಸಂವಿಧಾನ ವಿರೋಧಿ ಚಟುವಟಿಕೆ ಎಂದರು. ಕುಣಿಗಲ್ ತಾಲೂಕಿನಲ್ಲಿ ಮನೆ ಮಂಜೂರಾತಿ ಸೇರಿದಂತೆ ಹಲವಾರು ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಕುಣಿಗಲ್ ಶಾಸಕರು ನಡೆಸುತ್ತಿದ್ದು ಅಧಿಕಾರಿಗಳು ಕೂಡ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.
ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಿಂಗೋನಹಳ್ಳಿ ಬಳಿ ಹೆದ್ದಾರಿಯಲ್ಲಿ ಆಗುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾದಿಕಾರ ಅಂಡರ್ ಪಾಸ್ ನಿರ್ಮಾಣ ಮಾಡಲು ಮುಂದಾಗಿದೆ ಆದರೆ ಶಾಸಕರು ತಮ್ಮ ಹಿಂಬಾಲಕರ ಹೋಟೆಲ್‌ಗೆ ತೊಂದರೆ ಆಗಬಾರದೆಂದು ಅದನ್ನು ಅವೈಜ್ಞಾನಿಕವಾದ ರೀತಿ ಮಾಡುತ್ತಿರುವುದು ಸರಿಯಲ್ಲ ಜನರ ಸಾವಿಗೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ನ ಮಾಜಿ ಅಧ್ಯಕ್ಷ ಕೆ ಎಲ್ ಹರೀಶ್, ರಂಗಸ್ವಾಮಿ, ಯಡಿಯೂರು ದೀಪು, ಪ್ರಕಾಶ್, ವಸಂತ್ ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಇದ್ದರು.