ಇಂದಿನಿಂದ ಐಐಎಚ್‌ಆರಲ್ಲಿ ತ್ರಿಫಲ ವೈವಿಧ್ಯ ಪ್ರದರ್ಶನ

| Published : May 31 2024, 02:15 AM IST

ಇಂದಿನಿಂದ ಐಐಎಚ್‌ಆರಲ್ಲಿ ತ್ರಿಫಲ ವೈವಿಧ್ಯ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಐಐಎಚ್‌ಆರ್‌ನಲ್ಲಿ ಇಂದಿನಿಂದ ತ್ರಿವಿಧ ವೈವಿಧ್ಯ ಫಲ ಪ್ರದರ್ಶನ ನಡೆಯಲಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಆವರಣದಲ್ಲಿ ಮೇ 31ರಿಂದ ಜೂನ್‌ 2ರವರೆಗೆ 11ನೇ ಆವೃತ್ತಿಯ ಮಾವು, ಹಲಸು, ಬಾಳೆ (ತ್ರಿಫಲ) ವೈವಿಧ್ಯ ಪ್ರದರ್ಶನ ಮೇಳ ನಡೆಯಲಿದೆ.

ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಮೇಳ ನಡೆಯಲಿದ್ದು, ವಿವಿಧ ತಳಿಯ ಮಾವು, ಹಲಸು, ಬಾಳೆಯ ಹಣ್ಣುಗಳು, ಸಸಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಜೊತೆಗೆ 300 ವಿಶಿಷ್ಟ ಮಾವಿನ ತಳಿ, 100 ಹಲಸಿನ ತಳಿ. 100 ವಿವಿಧ ತಳಿಯ ಬಾಳೆ ಹಣ್ಣುಗಳು ಪ್ರದರ್ಶನಗೊಳ್ಳಲಿವೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಗ್ರಾಹಕರಿಗೆ, ಮಾವು ಬೆಳೆಗಾರರಿಗೆ ಅಗತ್ಯ ಮಾಹಿತಿ ಇಲ್ಲಿ ದೊರೆಯಲಿದೆ.

ದೇಶ, ವಿದೇಶಗಳ ಮಾವು, ಹಲಸು ಮತ್ತು ಜಿಐ ಮಾನ್ಯತೆ ಹೊಂದಿರುವ ಬಾಳೆ ಹಣ್ಣಿನ ದೇಶಿ-ವಿದೇಶಿ ಪ್ರಬೇಧಗಳನ್ನು ಇಡೀ ದಕ್ಷಿಣ ಭಾರತದ ರೈತರು ಅನ್ವೇಷಿಸಿ ಮತ್ತು ಅದರ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸುವುದು ಮೇಳದ ವಿಶೇಷ. ಅಲ್ಲದೇ ರಸಪ್ರಶ್ನೆ, ಗೋಷ್ಠಿಗಳು, ಪ್ರಯೋಗಾಲಯದ ಪ್ರದರ್ಶನ, ರೈತ ಪ್ರಶಸ್ತಿ ಪ್ರದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಬೆಳೆಗಾರರು, ವ್ಯಾಪಾರಿಗಳು, ರಫ್ತುದಾರರ ಸೇರಿದಂತೆ ವಿವಿಧ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಸಂಸ್ಥೆಗಳ ಸಂಪರ್ಕವೂ ದೊರೆಯಲಿದೆ ಎಂದು ಐಐಎಚ್‌ಆರ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.