ಇಳಕಲ್ಲ ನಗರದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಐಪಿಎಲ್ ಸೀಜನ್ -೮ ಕ್ರಿಕೆಟ್ ಪಂದ್ಯಾವಳಿ ನಿಮಿತ್ತ ಕೂಡಲಸಂಗಮದಿಂದ ಆಗಮಿಸಿದ ಕ್ರಿಡಾ ಜ್ಯೋತಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿಕೊಂಡರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಐಪಿಎಲ್ ಸೀಜನ್ -೮ ಕ್ರಿಕೆಟ್ ಪಂದ್ಯಾವಳಿ ನಿಮಿತ್ತ ಕೂಡಲಸಂಗಮದಿಂದ ಆಗಮಿಸಿದ ಕ್ರಿಡಾ ಜ್ಯೋತಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿಕೊಂಡರು.ಹುನಗುಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಇಳಕಲ್ಲ ಹಾಗೂ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಬೆಂಗಳೂರು ಸಹಯೋಗದಲ್ಲಿ ನಡೆಯಲಿರುವ ಇಳಕಲ್ಲ ಪ್ರೀಮಿಯರ್ ಲೀಗ್-೨೦೨೫ ಸೀಜನ್ -೮ರ ಕ್ರೀಡಾಕೂಟದ ಕ್ರೀಡಾಜ್ಯೋತಿಗೆ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಶನಿವಾರ ಶಾಸಕ ಕಾಶಪ್ಪನವರ ವಿಶೇಷ ಪೂಜೆ ಸಲ್ಲಿಸಿ ಹುನಗುಂದ ಮಾರ್ಗವಾಗಿ ಇಳಕಲ್ಲ ನಗರಕ್ಕೆ ತೆಗೆದುಕೊಂಡು ಹೋಗಲು ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು.
ಕ್ರೀಡಾಜ್ಯೋತಿ ಹುನಗುಂದ ಮಾರ್ಗವಾಗಿ ಇಳಕಲ್ಲ ನಗರಕ್ಕೆ ಆಗಮಿಸಿತು. ನಗರದ ಬಸವೇಶ್ವರ ವೃತ್ತದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಕ್ರೀಡಾಜ್ಯೋತಿಯನ್ನು ಸ್ವಾಗತಿಕೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆರ್.ವೀರಮಣಿ ಕ್ರಿಡಾಂಗಣಕ್ಕೆ ತೆಗೆದುಕೊಂಡು ಹೋಗಲಾಯಿತು.ಕ್ರೀಡಾ ಜ್ಯೋತಿ ಮೆರಣಿಗೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಚಲನಚಿತ್ರ ನಟರಾದ ಡಾಲಿ ಧನಂಜಯ, ನಟಿಯರಾದ ರಜಿತಾರಾಮ್, ರಾಗಿಣಿ ತ್ರಿವೇದಿ, ಸಪ್ತಮಿಗೌಡ ಇತರರು ಉಪಸ್ಥಿತರಿದ್ದರು. ನಟ, ನಟಿಯರನ್ನು ನೋಡಲು ದಾರಿಯುದ್ದಕ್ಕೂ ಜನರು ಸೇರಿದ್ದರು.