ಸಾರಾಂಶ
- ಅಕ್ರಮಕ್ಕೆ ಕಡಿವಾಣ ಹಾಕೋದು ಕಷ್ಟ, ಬೇಸಿಗೆಯಲ್ಲಿ ಮರಳು ಚೋರರ ಕಾರುಬಾರು, ಜಿಲ್ಲೆಯಲ್ಲಿ 14 ಬ್ಲಾಕ್‌ಗಳು ಮಾತ್ರ ಅಧಿಕೃತ,
ಆರ್. ತಾರಾನಾಥ್ ಅಟೋಕರ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ, ಮಂಗನ ಕಾಯಿಲೆ ಉಲ್ಭಣ, ಬಿಸಿಲಿನ ಝಳಕ್ಕೆ ಆರೋಗ್ಯದಲ್ಲಿ ಏರುಪೇರಾಗಿ ಮನುಷ್ಯನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳ ಕಾಲವಾದರೂ ಮರಳು ಚೋರರಿಗೆ ಇದೊಂದು ಸುಗ್ಗಿ ಕಾಲ.ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿ, ಹಳ್ಳಗಳು ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಿರುವ ಪ್ರದೇಶಗಳಲ್ಲಿ ಸಿಗುವ ಮರಳನ್ನು ರಾತ್ರೋ ರಾತ್ರಿ ಸಾಗಣೆ ಮಾಡಿ ಯಾರ ಕಣ್ಣಿಗೂ ಕಾಣದಂತೆ ದಾಸ್ತಾನು ಮಾಡಿ ಅಧಿಕ ಬೆಲೆಯಲ್ಲಿ ಮಾರಾಟ ಮಾಡುವ ದಂಧೆ ಪ್ರತಿ ವರ್ಷ ನಡೆಯುತ್ತಲೆ ಇರುತ್ತದೆ. ಇದಕ್ಕೆ ಕಣಿವಾಣ ಹಾಕುವ ಕೆಲಸ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಕಳೆದ ವರ್ಷ ಅಕ್ರಮ ಮರಳು ಸಾಗಾಣಿಕೆ ಮತ್ತು ದಾಸ್ತಾನು ಮಾಡಿದ 19 ಪ್ರಕರಣಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ₹15.75 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದು ವರಿದಿದೆ. ಆದರೂ ಅಕ್ರಮ ಮರಳು ಸಾಗಾಣಿಕೆ, ದಾಸ್ತಾನು ನಿಂತಿಲ್ಲ. ಮಲೆನಾಡಿನಲ್ಲಿ ಈ ದಂಧೆ ಮುಂದುವರಿದಿದೆ. ಆದರೆ, ಸ್ಥಳೀಯ ಜನರು ಮಾಹಿತಿ ನೀಡುವುದಾಗಲೀ, ಅಥವಾ ಲಿಖಿತ ದೂರು ನೀಡಲು ಮುಂದೆ ಬರುತ್ತಿಲ್ಲ. ಕಾರಣ, ಜೀವ ಭಯ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ. ಆದ್ದರಿಂದ ಅಕ್ರಮಕ್ಕೆ ಕಡಿ ವಾಣ ಹಾಕಲು ಇಲಾಖೆಯೊಂದಿಗೆ ಸ್ಥಳೀಯರು ಕೈ ಜೋಡಿಸುತ್ತಿಲ್ಲ. ಹಾಗಾಗಿ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.ನದಿಗಳ ಸೇತುವೆ ಬಳಿ ಅಂದರೆ, 500 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಪರಿಣಗಿಸಲಾಗಿದೆ. ಇಂತಹ ಪ್ರದೇಶದಲ್ಲಿ ಮರಳು ಇದ್ದರೂ ಕೂಡ ಅದನ್ನು ತೆಗೆಯುವಂತಿಲ್ಲ. ಕಾರಣ, ಇಲ್ಲಿನ ಮರಳು ತೆಗೆದರೆ ಸೇತುವೆಗೆ ಹಾನಿ ಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅಂತಹ ಪ್ರದೇಶಗಳನ್ನು ಇಲಾಖೆ ಕೈ ಬಿಟ್ಟಿದೆ. ಆ ಸ್ಥಳಗಳಲ್ಲಿ ಸ್ಥಳೀಯರ ಸಹಕಾರ ದಿಂದ ಚೋರರು ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ.-- ಬಾಕ್ಸ್ --14 ಬ್ಲಾಕ್‌ಗಳು
ಮರಳು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲೆಯಲ್ಲಿ 14 ಬ್ಲಾಕ್‌ಗಳನ್ನು ಗುರುತು ಮಾಡಿದೆ. ಅವುಗಳಲ್ಲಿ ಶೃಂಗೇರಿಯ ಎರಡು ಬ್ಲಾಕ್‌ಗಳನ್ನು ಸರ್ಕಾರಿ ಯೋಜನೆ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಇನ್ನುಳಿದ 12 ಬ್ಲಾಕ್ ಗಳನ್ನು ಹರಾಜು ಮಾಡುವ ಪ್ರಸ್ತಾವನೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಮುಂದಿದೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗಳು ಸದಸ್ಯ ಕಾರ್ಯದರ್ಶಿಗಳು.----ಜಿಲ್ಲೆಯಲ್ಲಿರುವ ಮರಳಿನ ಬ್ಲಾಕ್‌ಗಳ ವಿವರ------------------------------------------------------------
ತಾಲೂಕುಗ್ರಾಮಗಳು--------------------------------------------------------------------------------------
ಶೃಂಗೇರಿಹಾಲಂದೂರು, ಅಡ್ಡಗದ್ದೆ-----------------------------------------------------------------------------------------
ಕೊಪ್ಪಚಾವಲ್ಮನೆ, ಬೊಮ್ಮಲಾಪುರ-----------------------------------------------------------------------------------
ಮೂಡಿಗೆರೆ ಉದುಸೆ, ಜಿ. ಅಗ್ರಹಾರ, ಅಂಗಡಿ, ಕಣಚೂರು, ಜೋಗಣ್ಣನಕೆರೆ, ಹಿರೇಶಿಗರ-------------------------------------------------------------------------
ತರೀಕೆರೆಸಿದ್ಲಿಪುರ- ಗೋಪಾಲ-------------------------------------------------------------------------ಹರಿಹರಪುರ ಬಳಿ ಅಕ್ರಮ ಮರಳು ದಂಧೆತುಂಗಾ ನದಿ ತಟದಲ್ಲಿರುವ ಹರಿಹರಪುರ ಬಳಿ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಚೋರರು ಮಾಡಿಕೊಂಡಿರುವ ಉಪಾಯ ಸ್ಥಳೀಯ ಯುವಕರ ಬಳಕೆ.
ಪ್ರತಿನಿತ್ಯ ಲಾರಿ, ಟಿಪ್ಪರ್, ಟ್ರ್ಯಾಕ್ಟರ್‌ಗಳಲ್ಲಿ ರಾತ್ರಿ ಇಡೀ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಹೊರಗಿನವರು ಯಾರಾದರೂ ಬಂದರೆ, ಅಥವಾ ಇಲಾಖೆಯವರು ಬಂದರೆ ಮಾಹಿತಿ ನೀಡಲು ಸ್ಥಳೀಯ ಯುವಕರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಅಕ್ರಮ ಮರಳು ದಂಧೆ ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರಾತ್ರಿ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟವಾಗಿದ್ದರಿಂದ ಪೊಲೀಸ್ ಇಲಾಖೆ ಅಕ್ರಮ ಮರಳು ಸಾಗಾಣಿಕೆ ಮಾರ್ಗದಲ್ಲಿ ಜೆಸಿಬಿಯಿಂದ ಟ್ರಂಚ್ ನಿರ್ಮಿಸಿದ್ದಾರೆ. 19 ಕೆಸಿಕೆಎಂ 2, 3ಕೊಪ್ಪ ತಾಲೂಕಿನ ಹರಿಹರಪುರ ಬಳಿ ತುಂಗಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಆಗುವುದನ್ನು ತಡೆಗಟ್ಟಲು ಪೊಲೀಸರು ರಸ್ತೆಗೆ ಜೆಸಿಬಿಯಿಂದ ಟ್ರಂಚ್ ಹೊಡೆಯುತ್ತಿರುವುದು.
----ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಅಕ್ರಮ ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡಬೇಕು. ಕಳೆದ ವರ್ಷ ₹15.75 ಲಕ್ಷ ದಂಡ ವಿಧಿಸಲಾಗಿತ್ತು. ಈ ಬಾರಿ 14 ಬ್ಲಾಕ್‌ಗಳ ಪೈಕಿ 12 ಬ್ಲಾಕ್‌ಗಳಲ್ಲಿನ ಮರಳು ಹರಾಜು ಹಾಕಲಾಗುವುದು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸ್ಥಳೀಯವಾಗಿ ಜನರಿಗೆ ಮರಳು ಸಿಗ ಬೇಕೆಂಬ ಉದ್ದೇಶದಿಂದ 90 ಕಡೆಗಳಲ್ಲಿ ಮರಳು ಇರುವುದು ಗುರುತು ಮಾಡಲಾಗಿದೆ. ಈ ಪೈಕಿ 48 ಕಡೆಗಳಲ್ಲಿ ಸದ್ಯ ಮರಳು ಲಭ್ಯವಿದ್ದು, ಗ್ರಾಪಂ ಮಟ್ಟದಲ್ಲೇ ಅನುಮತಿ ಪಡೆದು ಮರಳು ಪಡೆಯಬಹುದು.- ಎನ್.ಎಂ. ವಿಂಧ್ಯಾಹಿರಿಯ ಭೂ ವಿಜ್ಞಾನಿಗಳು,
ಗಣಿ ಮತ್ತು ಭೂ ವಿಜ್ಞಾನ ಇಲಾಖೆಪೋಟೋ ಫೈಲ್ ನೇಮ್ 19 ಕೆಸಿಕೆಎಂ 4