ಭಾರಿ ಬೆಲೆಬಾಳುವ ಕಪ್ಪು ಕಲ್ಲು ಅಕ್ರಮ ಸಾಗಣೆ?

| Published : Feb 16 2024, 01:53 AM IST

ಭಾರಿ ಬೆಲೆಬಾಳುವ ಕಪ್ಪು ಕಲ್ಲು ಅಕ್ರಮ ಸಾಗಣೆ?
Share this Article
  • FB
  • TW
  • Linkdin
  • Email

ಸಾರಾಂಶ

ಜಮೀನಿನಲ್ಲಿದ್ದ ಕೋಟ್ಯಂತರ ರು.ಗಳ ಬೆಲೆಬಾಳುವ ಕಪ್ಪುಕಲ್ಲುಗಳನ್ನು ಗಣಿಗಾರಿಕೆ ಮಾಡಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದವರು ರಾತ್ರೋರಾತ್ರಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಲೋಕಾಯುಕ್ತಕ್ಕೆ ದೂರು

ಕನ್ನಡಪ್ರಭ ವಾರ್ತೆ ಕೆಜಿಎಫ್ಸರ್ಕಾರಕ್ಕೆ ಸೇರಿದ ಕೋಟ್ಯತರ ರು.ಗಳ ಮೌಲ್ಯದ ಕಪ್ಪು ಕಲ್ಲು ಬಂಡೆಗಳನ್ನು ಯಾವುದೇ ಅನುಮತಿ ಇಲ್ಲದೆ ರಾತ್ರೋರಾತ್ರಿ ಹೊರರಾಜ್ಯಗಳಿಗೆ ಸಾಗಾಣಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ೨೫ ಎಕರೆ ಭೂಮಿ ಸಮತಟ್ಟು ಮಾಡಲು ಪರವಾನಗಿ ನೀಡಿದ್ದರು. ಇದೇ ಜಮೀನಿನಲ್ಲಿ ಖನಿಜ ಸಂಪತ್ತನ್ನು ದಾಸ್ತನು ಮಾಡುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡಿರುವ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಭಾವಿ ರಾಜಕಾರಣಿ ಕೈವಾಡದ ಶಂಕೆ

ಆದರೆ ಜಮೀನಿನಲ್ಲಿದ್ದ ಕೋಟ್ಯಂತರ ರು.ಗಳ ಬೆಲೆಬಾಳುವ ಕಪ್ಪುಕಲ್ಲುಗಳನ್ನು ಗಣಿಗಾರಿಕೆ ಮಾಡಿ ತಮಿಳುನಾಡು ಮತ್ತು ಆಂಧ್ರ ಪ್ರದೇಶದವರು ರಾತ್ರೋರಾತ್ರಿ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಪ್ಪು ಕಲ್ಲು ಅಕ್ರಮ ಸಾಗಾಣಿಕೆಯ ಹಿಂದೆ ತಾಲೂಕಿನ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ ಎಂಬ ವದಂತಿ ದಟ್ಟವಾಗಿದೆ.

ಏನಿದು ಪ್ರಕರಣ?ಸಾರ್ವಜನಿಕರ ಆಸ್ತಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಹೋಬಳಿಯ ಕದರಿಗಾನಕುಪ್ಪ ಸರ್ವೇ ನಂ.೩ರಲ್ಲಿ ೨೦ ಎಕರೆ, ಸರ್ವೇ ನಂ.೭೧ರಲ್ಲಿ ೫ ಎಕರೆ ಜಾಗದಲ್ಲಿ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಕಪ್ಪು ಕಲ್ಲು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಕೆಜಿಎಫ್‌ನ ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ, ಜೆಡಿಎಸ್‌ನ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಇತ್ತೀಚೆಗೆ ಲೋಕಾಯುಕ್ತ ಎಸ್ಪಿ ಉಮೇಶ್‌ರವರಿಗೆ ದೂರು ನೀಡಿದ್ದರು. ಕೆಜಿಎಫ್ ತಾಲೂಕಿನ ಬಹುತೇಕ ಕೆರೆಗಳಲ್ಲಿ ಸಾವಿರಾರು ಟನ್ ಕೆರೆಯ ಮಣ್ಣನ್ನು ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗೆ ಬಳಸಿಕೊಂಡಿದ್ದರಿಂದ ಕೆರೆಗಳು ತನ್ನ ಅಸ್ತಿತ್ವ ಕಳೆದುಕೊಂಡಾಗಲೂ ಮೌನವಾಗಿದ್ದ ಜಿಲ್ಲಾಡಳಿತ, ಈಗ ಕೋಟ್ಯತರ ರು.ಗಳ ಬೆಲೆ ಬಾಳುವ ಕಪ್ಪು ಕಲ್ಲುಗಳನ್ನು ಹೊರ ರಾಜ್ಯದವರು ಲೂಟಿ ಮಾಡುತ್ತಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.ಕೆಜಿಎಫ್ ತಾಲೂಕಿನಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆಂದು ಈ ಜಮೀನು ನೀಡಲಾಗಿದೆ. ೨೫ ಎಕರೆ ಜಾಗ ಸ್ವಚ್ಛ ಮಾಡಲು ಎಪಿಎಂಸಿ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರವಾನಗಿ ಪಡೆದು ಅಲ್ಲಿ ಲಭ್ಯವಿರುವ ಕೋಟ್ಯತರ ರು.ಗಳ ಮೌಲ್ಯದ ಕಪ್ಪು ಕಲ್ಲಿನ ಖನಿಜ ಸಂಪತ್ತು ಪ್ರಭಾವಿಗಳ ಪಾಲಾಗಲು ಬಿಡಬಾರದಿ ಎಂದು ನಗರಸಭೆ ಮಾಜಿ ಸದಸ್ಯ ಕುಮಾರ್ ಒತ್ತಾಯಿಸಿದ್ದಾರೆ.