ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗಣೇಶ ಹಬ್ಬ ಸ್ವಾತಂತ್ರ್ಯದ ಸಂಕೇತ. ಯುವಕರು ಆರೋಗ್ಯಕರ ಸಮಾಜಕ್ಕೆ ಹಬ್ಬವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಇನ್ಸ್ ಪೆಕ್ಟರ್ ರೇವತಿ ತಿಳಿಸಿದರು.ಆರಕ್ಷಕ ಠಾಣೆಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪರಿಸರಸ್ನೇಹಿ ಗಣಪತಿ ಪರಿಚಯ ಹಾಗೂ ಗಣಪತಿ ವಿಸರ್ಜನಾ ಮಹೋತ್ಸವ ಮೆರವಣಿಯಲ್ಲಿ ಭಾಗವಹಿಸಿ ಮಾತನಾಡಿ, ಗಣಪತಿ ಹಬ್ಬ ಆಚರಣೆ ಪರಿಸರ, ಸಾರ್ವಜನಿಕರಲ್ಲಿ ಒಳಿತು ಮಾಡುವ ವಾತಾವರಣದಂತೆ ಇರಬೇಕು. ಈ ದೃಷ್ಟಿಯಿಂದ ತಮ್ಮ ಠಾಣೆಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.
ಯಾವುದೇ ಕಾರಣಕ್ಕೂ ಡಿಜೆ ಬಳಸದಿರಿ. ಡಿಜೆ ಶಬ್ಧದಿಂದ ಸಾಕಷ್ಟು ಹೃದ್ರೋಗಿಗಳು, ವಯೋವೃದ್ಧರು, ಮಕ್ಕಳು, ಗರ್ಭಿಣಿಯರು, ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಪಟಾಕಿ ಸಿಡಿಸುವುದರಿಂದ ಪರಿಸರ ಹಾನಿಯಾಗಲಿದೆ. ಸರಳವಾಗಿ ಭಕ್ತಿಯಿಂದ ಗಣಪತಿ ಪ್ರತಿಷ್ಠಾಪಿಸಿ, ವಿಸರ್ಜಿಸಿ ಎಂದರು.ಈ ವೇಳೆ ಎಎಸ್‌ಐ ರಮೇಶ್, ಸಿಬ್ಬಂದಿ ಅಶೋಕ್, ಅವಿನಾಶ್, ಪ್ರದೀಪ್, ಸುಭಾಷ್, ಮನುಕುಮಾರ್ ಭಾಗವಹಿಸಿದ್ದರು.
ಹಿಮಾಲಯದ ಮಾದರಿಯ ಮಧ್ಯೆ ಗಣಪತಿ ಪ್ರತಿಷ್ಠಾಪನೆಮೇಲುಕೋಟೆ:
ಮೇಗಲಕೇರಿ ಮಗ್ಗದ ಬೀದಿಯ ಬಜನೆಮನೆ ಸರ್ವಾತ್ಮ ಮಿತ್ರ ಬಳಗದಿಂದ ಹಿಮಾಲಯದ ಮಾದರಿಯ ಮಧ್ಯೆ ಗಣಪತಿ ಪ್ರತಿಷ್ಠಾಪನೆ ಮಾಡಿರುವುದು ಭಕ್ತರ ಮನಸೂರೆಗೊಂಡಿದೆ.ಪ್ರತಿವರ್ಷ ಒಂದೊಂದು ಮಾದರಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವುದು ಮಿತ್ರ ಬಳಗದ ವಿಶೇಷವಾಗಿದೆ. ಕಳೆದ ಜಲಪಾತದ ಮಧ್ಯೆ ಗಣಪತಿ ಪ್ರತಿಷ್ಠಾಪನೆ ಮಾಡಿ ಗಮನ ಸೆಳೆದಿದ್ದರು. ಈ ವರ್ಷ ಶಿವ ಹಿಮಾಲಯದ ಮಧ್ಯೆ ಇರುವಂತೆ ಮಾಡಿ ಅದರ ಮಧ್ಯೆ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದಕ್ಕೆ ಮಾಡಿರುವ ಲೈಂಟಿಂಗ್ ಗಮನ ಸೆಳೆಯುತ್ತಿದೆ. ಶನಿವಾರ ರಾತ್ರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಣಪತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಬಳಗ ತಿಳಿಸಿದೆ.