ಅಮರಶಿಲ್ಪಿ ಜಕಣಾಚಾರಿ, ವಿಶ್ವಮಾನವ ಕುವೆಂಪು ಜನ್ಮದಿನ ಆಚರಣೆ: ಪರಶುರಾಮ್ ಸತ್ತೀಗೇರಿ

| Published : Dec 26 2024, 01:04 AM IST

ಅಮರಶಿಲ್ಪಿ ಜಕಣಾಚಾರಿ, ವಿಶ್ವಮಾನವ ಕುವೆಂಪು ಜನ್ಮದಿನ ಆಚರಣೆ: ಪರಶುರಾಮ್ ಸತ್ತೀಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.29ರಂದು ವಿಶ್ವ ಮಾನವ ಕುವೆಂಪು ಹಾಗೂ ಜ.1ರಂದು ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆಯನ್ನು ಪ್ರತ್ಯೇಕವಾಗಿ ಎರಡು ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರು, ಸಾರ್ವಜನಿಕರು ಈ ದಿನಾಚರಣೆಯಲ್ಲಿ ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಹಾಗೂ ವಿಶ್ವ ಮಾನವ ಸಂಸ್ಕರಣಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಹಾಗೂ ವಿಶ್ವ ಮಾನವ ಸಂಸ್ಕರಣಾ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವವಿ ಸಭೆಯಲ್ಲಿ ಮಾತನಾಡಿ, ಡಿ.29ರಂದು ವಿಶ್ವ ಮಾನವ ಕುವೆಂಪು ಹಾಗೂ ಜ.1ರಂದು ವಿಶ್ವ ಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆಯನ್ನು ಪ್ರತ್ಯೇಕವಾಗಿ ಎರಡು ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ ಎಂದರು.

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರು, ಸಾರ್ವಜನಿಕರು ಈ ದಿನಾಚರಣೆಯಲ್ಲಿ ಭಾಗವಹಿಸುವಂತೆ ಕೋರಿದರು.

ಸಭೆಯಲ್ಲಿ ಒಕ್ಕಲಿಗರ ಸಂಘದ ದೇವರಾಜು ಗೌಡಹಳ್ಳಿ, ರಾಂಪುರ ಪುಟ್ಟು, ಕರವೇ ಸ್ವಾಮೀಗೌಡ, ಕಸಾಪ ಹೋಬಳಿ ಅಧ್ಯಕ್ಷ ಕೆ.ಜೆ. ಲೋಕೇಶ್ ಸೇರಿದಂತೆ ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು ಹಾಜರಿದ್ದರು.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮಂಡ್ಯ: ಜಿಲ್ಲಾ ಗಂಗಾಮತಸ್ಥರ (ಬೆಸ್ತರ್ /ನಾಯಕ) ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 15 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ವಾನುಮತದಿಂದ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾಗಿ ಡಿ.ಎಸ್.ರಾಮಕೃಷ್ಣ, ಕಾರ್ಯಾಧ್ಯಕ್ಷರಾಗಿ ರಾಮ ಲಿಂಗಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಲಿಂಗರಾಜು, ಖಜಾಂಚಿಯಾಗಿ ಎಚ್.ಗಿರೀಶ್ ಅವರನ್ನು ಆಯ್ಕೆಮಾಡಲಾಯಿತು. ಸಹ ಕಾರ್ಯದರ್ಶಿಗಳಾಗಿ ಕೇಶವ ಕೃಷ್ಣ, ಉಪಾಧ್ಯಕ್ಷರನ್ನಾಗಿ ಕನ್ನಂಬಾಡಿ ಕುಮಾರ್, ಪುಷ್ಪಲತಾ, ಸಂಘಟನಾ ಕಾರ್ಯದರ್ಶಿಗಳಾಗಿ ಉಮಾವತಿ, ಎಸ್.ಮಧು, ಜಿ.ಕೆ.ಶ್ರೀನಿವಾಸ್, ಕುಮಾರ್ ಸಿ.ಎಂ, ನಿರ್ದೇಶಕರಾಗಿ ಧನಂಜಯ, ನಾಗೇಶ್, ಸುಧಾಕರ್, ಗೌರವಾಧ್ಯಕ್ಷರಾಗಿ ಟಿ.ಕೃಷ್ಣಯ್ಯ, ಗೌರವ ಸಲಹೆಗಾರರಾಗಿ ಡಾ.ಎಂ.ಪಿ. ಚಂದ್ರಶೇಖರ್, ಎಂ.ಸಿ.ಶ್ರೀನಿವಾಸ್, ಅವರುಗಳನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ತಿಳಿಸಿದರು.

ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಡಿ.ಎಸ್.ರಾಮಕೃಷ್ಣ, ಜಿಲ್ಲಾ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಾರ್ಯಾಧ್ಯಕ್ಷ ರಾಮಲಿಂಗಯ್ಯ ಮಾತನಾಡಿದರು.