ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಂತೆ ತಿಪಟೂರು ತಾಲೂಕಿನ ಪಟ್ರೇಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ) ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಕೃಷಿ ಭೂಮಿ ಉಳಿಸಿ ಮತ್ತು ರಕ್ಷಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭವಾರ್ತೆ ತಿಪಟೂರು
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಂತೆ ತಿಪಟೂರು ತಾಲೂಕಿನ ಪಟ್ರೇಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ) ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಕೃಷಿ ಭೂಮಿ ಉಳಿಸಿ ಮತ್ತು ರಕ್ಷಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ರಾಸಾಯನಿಕ ರಸಗೊಬ್ಬರಗಳ, ಕೀಟನಾಶಕಗಳ ಅತಿಯಾದ ಮತ್ತು ಅಸಮತೋಲಿತ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ ಹಾಗೂ ಹವಾಮಾನ ವೈಪರಿತ್ಯದಿಂದ ಕೃಷಿಯ ಮೇಲೆ ಗಂಭೀರ ಸವಾಲುಗಳಾಗಿದ್ದು ಅದನ್ನು ಎದುರಿಸಿ ನಿಲ್ಲಬೇಕಿದೆ. ಈ ಹಿಂತದಲ್ಲಿ ಕೃಷಿ ಇಲಾಖೆ ಹಾಗೂ ಕೆವಿಕೆ ಸದಾ ರೈತರ ಸಮಸ್ಯೆಗಳನ್ನು ಪರಿಹರಿಸಲು ಇರುತ್ತವೆ ಎಂಬುದನ್ನು ರೈತರು ಮರೆಯಬಾರದು. ಬೆಳೆಗಳು ಸರಿಯಾಗಿ ಬೆಳೆಯುವುದರಿಂದ ಹಿಡಿದು ಸಂಪೂರ್ಣ ಕಟಾವು ಆಗುವವರೆಗೂ ಇಲಾಖೆಗಳು ರೈತರ ಬೆನ್ನಿಗೆ ನಿಲ್ಲಲಿವೆ ಎಂದರು. ಖೇತ್ ಬಚಾವೋ ಅಭಿಯಾನ ಪ್ರಮುಖ ಉದ್ದೇಶ ರೈತರಲ್ಲಿ ಮಣ್ಣನ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸುವುದು, ಮಣ್ಣು ಪರೀಕ್ಷೆ ಆಧಾರಿತ ಸಮತೋಲಿತ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವುದು ಜೊತೆಗೆ ಸಮಗ್ರ ಪೋಷಕಾಂಶ ನಿರ್ವಹಣೆ ಹಸಿರು ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಮತ್ತು ನೈಸರ್ಗಿಕ ಕೃಷಿಯ ಮಹತ್ವದ ಕುರಿತು ತಿಳಿಸಿದರು. ಅಲ್ಲದೆ ಜಿಲ್ಲೆಯ ಮುಂಗಾರು ಹಂಗಾಮಿಯ ಪ್ರಮುಖ ಬೆಳೆಗಳಾದ ರಾಗಿ, ತೊಗರಿ ಬೆಳೆಯ ತಳಿಗಳ ಬಗ್ಗೆ ಹಾಗೂ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.