ಯೋಜನೆಗಳನ್ನು ಅಧಿಕಾರಿಗಳು ಹೆಚ್ಚು ಗಮನ ಹರಿಸಿ ಕಾಮಗಾರಿ ಮಾಡಬೇಕು.
ಹೂವಿನಹಡಗಲಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿ ಮಾಡುವ, ಯೋಜನೆಗಳನ್ನು ಸಮರ್ಪಕವಾಗಿ ಅಧಿಕಾರಿಗಳು ಅನುಷ್ಠಾನ ಮಾಡಬೇಕೆಂದು, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ, ಯೋಜನೆಗಳ ಕಾಮಗಾರಿ ಮತ್ತು ಮಕರಬ್ಬಿ ಗ್ರಾಮದಲ್ಲಿ ಕಾಯಕ ಗ್ರಾಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಚರಂಡಿ ಮೂಲಕ ಹರಿಯುತ್ತಿರುವ ಕಲುಷಿತ ನೀರನ್ನು ನೇರವಾಗಿ ನದಿಗೆ ಹರಿಸದೇ, ಅದನ್ನು ಬೂದು ನೀರು ನಿರ್ವಹಣೆ ಕಾಮಗಾರಿ ಮಾಡಿ ಸಾಧ್ಯವಾದಷ್ಟು ನೀರನ್ನು ಶುದ್ಧೀಕರಣವಾಗುವಂತೆ ಮಾಡಿದರೇ, ಜನರಿಗೆ ಯಾವುದೇ ಆರೋಗ್ಯದ ತೊಂದರೆಗಳು ಆಗುವುದಿಲ್ಲ, ಆದರಿಂದ ಇಂತಹ ಯೋಜನೆಗಳನ್ನು ಅಧಿಕಾರಿಗಳು ಹೆಚ್ಚು ಗಮನ ಹರಿಸಿ ಕಾಮಗಾರಿ ಮಾಡಬೇಕು, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕೆಂದು ಹೇಳಿದರು.
ನಂತರದಲ್ಲಿ ಹೊಳಲು ಗ್ರಾಪಂಗೆ ಭೇಟಿ ನೀಡಿದ್ದು, ಗ್ರಾಮದ ಸಂಜೀವಿನ ಮಹಿಳಾ ಒಕ್ಕೂಟದಿಂದ ಸಿದ್ಧವಾಗಿರುವ ಕಿಸಾನ್ ಪರಿಕರಗಳ ಮಾರಾಟ ಮಾಡಲು ಸ್ಥಳಾವಕಾಶ ಮಾಡಿಕೊಡಲು, ಗ್ರಾಪಂ ಹಾಗೂ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವರಿಗೆ ಸೂಕ್ತ ಕಟ್ಟಡ ಒದಗಿಸಿದಾಗ, ಮಹಿಳೆಯರು ಆರ್ಥಿಕವಾಗಿ ಶಕ್ತರಾಗುತ್ತಾರೆ. ಹಗರನೂರು ಗ್ರಾಮದಲ್ಲಿ ತಂತ್ರಜ್ಞಾನದ ಬಳಕೆಯಿಂದ, ತೆರಿಗೆ ವಸೂಲಿ ರಸೀದಿಯ್ನು ಸಾರ್ವಜನಿಕರಿಗೆ ವಿತರಿಸಿದರು. ಇದಕ್ಕೂ ಮೊದಲು ಇಟ್ಟಿಗಿ, ಹೊಳಗುಂದಿ, ದಾಸರಹಳ್ಳಿ ತಾಂಡ ಸೇರಿದಂತೆ ಇತರೆ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಬೂದು ನೀರು ನಿರ್ವಹಣಾ ಕಾಮಗಾರಿ, ಹಾಗೂ ಹಗರನೂರು ಗ್ರಾಮದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿದರು.ಜಿಪಂ ಜಿಲ್ಲಾ ಸಹಾಯಕ ಯೋಜನಾಧಿಕಾರಿ ಉಮೇಶ್ ಮೈನಹಳ್ಳಿ, ತಾಪಂ ಇಒ ಪರಮೇಶ್ವರ, ಪಿಆರ್‌ಡಿ ಎಇಇ ಕುಬೇಂದ್ರನಾಯ್ಕ, ತಾಪಂ ನರೇಗಾ ಸಹಾಯಕ ನಿರ್ದೇಶಕ ವೀರಣ್ಣನಾಯ್ಕ, ಇಟ್ಟಿಗಿ ಗ್ರಾಪಂ ಪಿಡಿಒ ಉಮೇಶ್ ಜಹಗೀರದಾರ್, ಶರಣಪ್ಪ, ಶ್ರೀಶೈಲಗೌಡ, ಆನಂದನಾಯ್ಕ ಸೇರಿದಂತೆ ಆಯಾ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.