ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ವಿವಿಧ ಕಾಮಗಾರಿಗೆ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದರು. ಮುಂದಿನ ವರ್ಷದಿಂದ ತೋಟಗಾರಿಕೆ ಕಾಲೇಜು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಡಂಬಳ: ಸಮಾಜದಲ್ಲಿ ಆರ್ಥಿಕ ಸಮಾನತೆ ಬರಬೇಕು ಎಂಬುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಆಶಯವಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಡಂಬಳ ಹೋಬಳಿಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಮುಂಡರಗಿ ತಾಲೂಕಿನಲ್ಲಿ 5 ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೆ 34,640 ಫಲಾನುಭವಿಗಳಿಗೆ ₹2 ಸಾವಿರ ನೀಡಲಾಗುತ್ತಿದ್ದು, ಶೇ. 98.5ರಷ್ಟು ಸಾಧನೆ ಮಾಡಿದೆ. 34,334 ಫಲಾನುಭವಿಗಳ ವಿದ್ಯುತ್ ಬಿಲ್‌ನ್ನು ಸರ್ಕಾರ ಭರಿಸುತ್ತಿದೆ. ಅನ್ನಭಾಗ್ಯದಡಿ 36,640 ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದು, ಶಕ್ತಿ ಯೋಜನೆಯಡಿ 5 ಕೋಟಿ 55 ಲಕ್ಷ ಮಹಿಳೆಯರು ಬಸ್ ಪ್ರಯಾಣ ಮಾಡಿದ್ದಾರೆ. 212 ಯುವಕರಿಗೆ ಯುವ ನಿಧಿ ಯೋಜನೆಗಳನ್ನು ಕೊಡುವ ಮೂಲಕ ಶೇ. 100 ಯೋಜನೆ ತಲುಪಿಸಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ₹154 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತೆರಯಲಾಗುವುದು. ₹200.08 ಕೋಟಿಯಡಿ ಜಾಲವಾಡಗಿ ಕೆಲಸ ಪ್ರಾರಂಭವಾಗಲಿದೆ. ಡೋಣಿಯ 99 ಕುಟುಂಬಗಳಿಗೆ, ಅತ್ತಿಕಟ್ಟಿ, ಮುರಡಿ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳನ್ನು ಉಪಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಪಂ ಕಟ್ಟಡದ ಉದ್ಘಾಟನೆ, ₹14 ಲಕ್ಷದ ಗೋದಾಮು, ಮೇವುಂಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ₹5 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗೆ ಕೊಠಡಿ ನಿರ್ಮಾಣ, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ ₹15 ಲಕ್ಷಗಳ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ, ₹10 ಲಕ್ಷ ವೆಚ್ಚದಲ್ಲಿ ಶ್ರೀ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ, ₹5 ಲಕ್ಷ ಶ್ರೀ ಕೃಪೇಶ್ವರ ದೇವಸ್ಥಾನದ ಮುಂದುವರಿದ ಕಾಮಗಾರಿ, ಮೂಲಸೌಕರ್ಯ ಅಭಿವೃದ್ಧಿ ₹5 ಲಕ್ಷ, ಡೋಣಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಡೋಣೆಯಿಂದ ಹಿರೇವಡ್ಡಟ್ಟಿ ರಸ್ತೆ ಸುಧಾರಣೆ, ₹50 ಲಕ್ಷಗಳ ವೆಚ್ಚದಲ್ಲಿ ಗೂಳಿ ಬಸವೇಶ್ವರ ದೇವಸ್ಥಾನದ ಹತ್ತಿರ ಹಾಗೂ ಡಿಪಿಇಪಿ ಶಾಲೆಯ ಹತ್ತಿರ ಇರುವ ವಿದ್ಯಾನಗರದಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ₹61 ಲಕ್ಷಗಳ ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣ, ₹27 ಲಕ್ಷ ವೆಚ್ಚದಲ್ಲಿ ಕೆ.ಜಿ.ಎಸ್. ಶಾಲೆಯ 2 ಹೊಸ ಕೊಠಡಿಗಳು, ₹7.80 ಲಕ್ಷಗಳ ವೆಚ್ಚದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನವೀಕರಣ ದುರಸ್ತಿ ಕಾಮಗಾರಿಗೆ, ₹10 ಲಕ್ಷ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಕೊಠಡಿ ದುರಸ್ತಿ ₹6 ಲಕ್ಷದಲ್ಲಿ ಜಿಎಚ್‌ಪಿಎಸ್ ಶಾಲೆಯ 2 ಕೊಠಡಿಗಳ ರೂಪ ಬದಲಾವಣೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಜಂತ್ಲಿ ಶಿರೂರ ಗ್ರಾಪಂ ಅಧ್ಯಕ್ಷೆ ಜೈತುನಬಿ ಬಳ್ಳಾರಿ, ಉಪಾಧ್ಯಕ್ಷ ರವಿ ದೊಡ್ಡಮನಿ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಅಳವಂಡಿ, ದುರಗವ್ವ ಯಮನೂರಪ್ಪ ತಳಗೇರಿ, ಡಿ.ಡಿ. ಮೋರನಾಳ, ಗ್ರಾಪಂ ಕಟ್ಟಡದ ಭೂದಾನಿ ಹೇಮಣ್ಣ ಪೂಜಾರ, ಇಒ ವಿಶ್ವನಾಥ ಹೊಸಮನಿ, ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್., ಡಿ.ಡಿ. ಮೋರನಾಳ, ಅಬ್ದುಲಸಾಬ ಕಲಕೇರಿ, ಮಳ್ಳಪ್ಪ ಜೋಂಡಿ, ಮಹೇಶ ಗಡಗಿ, ಕಾಶಪ್ಪ ಹೊನ್ನೂರ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಯಮನಪ್ಪ ಚುಂಗಿನ, ಬಸುರಾಜ ಶಿರೋಳ, ಶರಣು ಬಂಡಿಹಾಳ, ಬಸುರಾಜ ಮೇವುಂಡಿ, ಈಶಪ್ಪ ಓಲಿ, ಸೋಮು ಹೈತಾಪುರ, ರಾಚಪ್ಪ ಗಾಳಪ್ಪನವರ, ಪಿಡಿಒ ವಸಂತ ಕೋಕಾಕ, ವೀರೇಶ ಅವಾರಿ, ಈರಣ್ಣ ಯಳವತ್ತಿ, ಸೋಮಣ್ಣ ಹಳ್ಳಿಕೇರಿ, ಹೇಮಂತ ಹಾರೂಗೇರಿ, ಜಗದೀಶ ಮೇನಳ್ಳಿ, ಬಸುರಾಜ ನಾರಾಯಣಪುರ, ಶರಣಬಸಪ್ಪ ಮುದಿಯಜ್ಜನವರ, ಕಾಶಪ್ಪ ಅಳವಂಡಿ, ವೀರೇಶ ಸಿದ್ನೆಕೊಪ್ಪ, ಈರಣ್ಣ ಯಳವತ್ತಿ, ಯಮನಪ್ಪ ಇಳಗೇರ, ಮಹೇಶ ಕೊರ್ಲಹಳ್ಳಿ, ಮಹಾದೇವಪ್ಪ ಗುಂಜಿ, ಬಸು ಬೇಟಗೇರಿ, ಹನುಮಂತಪ್ಪ ಗೋಡಿ, ಯಮನೂರಪ್ಪ ಅರೂಣಸಿ, ಶಿವಕುಮಾರ ಉದಂಡಿ, ಕೋಟ್ರಪ್ಪ ಸ್ವಾಗಿ, ಬಸವರಡ್ಡಿ ಬಂಡಿಹಾಳ ಇದ್ದರು.