ದರ್ಶನ್ ಆಪ್ತನ ಮೊಬೈಲ್‌ನಲ್ಲಿ ಪ್ರಮುಖ ಸಾಕ್ಷ್ಯ?

| Published : Jun 21 2024, 01:08 AM IST / Updated: Jun 21 2024, 09:49 AM IST

Darshan Case - Chikkanna

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್‌ ಮೊಬೈಲ್‌ನಲ್ಲಿ ಬಹುಮುಖ್ಯ ಸಾಕ್ಷ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್‌ ಮೊಬೈಲ್‌ನಲ್ಲಿ ಬಹುಮುಖ್ಯ ಸಾಕ್ಷ್ಯವನ್ನು ಪೊಲೀಸರು ಜಪ್ತಿ ಮಾಡಿದ್ದು, ಇದು ಕೂಡ ದರ್ಶನ್ ಗ್ಯಾಂಗ್‌ಗೆ ಕಂಟಕವಾಗಿದೆ ಎನ್ನಲಾಗಿದೆ.

ಪಟ್ಟಣಗೆರೆ ವಿನಯ್‌ ಮೊಬೈಲ್ ಪತ್ತೆಯಾದ ಪುರಾವೆ ಕುರಿತು ಎಂದು ಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಈ ಪುರಾವೆ ಕುರಿತು ವಿನಯ್‌ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಟಣಗೆರೆ ವಿನಯ್‌ ಮೊಬೈಲ್‌ನಲ್ಲಿ ಅತಿ ಮುಖ್ಯವಾದ ಸಾಕ್ಷ್ಯಾಧಾರ ದೊರೆತಿದ್ದು, ಅದನ್ನು ಕಳುಹಿಸಿದ ವ್ಯಕ್ತಿ ಯಾರೆಂಬ ಬಗ್ಗೆ ವಿನಯ್ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಿದೆ. ಹೀಗಾಗಿ ವಿನಯ್‌ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಕೃತ್ಯದ ವಿಡಿಯೋ?

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲಿನ ದೈಹಿಕ ಹಲ್ಲೆ ಅಥವಾ ಹಲ್ಲೆ ಬಳಿಕ ರೇಣುಕಾಸ್ವಾಮಿ ಮೃತಟ್ಟಿರುವ ವಿಡಿಯೋವನ್ನು ವಿನಯ್‌ಗೆ ದರ್ಶನ್‌ ಸಹಚರರು ಕಳುಹಿಸಿದ್ದರು ಎನ್ನಲಾಗುತ್ತದೆ. ಆದರೆ ಹಲ್ಲೆ ವಿಡಿಯೋ ಪತ್ತೆಯಾಗಿಲ್ಲವೆಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವಿನಯ್‌ ಮೊಬೈಲ್‌ನಲ್ಲಿ ಪತ್ತೆಯಾದ ಅತ್ಯಂತ ಪ್ರಮುಖ ಸಾಕ್ಷ್ಯದ ಕುರಿತು ಕುತೂಹಲ ಮೂಡಿದೆ.