ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರಿಗೆ ಹೊಸ ವರ್ಗಾವಣೆ ನಿಯಮಗಳ ಹೇರಿಕೆ ಸಲ್ಲದು

| Published : Sep 15 2024, 01:45 AM IST

ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರಿಗೆ ಹೊಸ ವರ್ಗಾವಣೆ ನಿಯಮಗಳ ಹೇರಿಕೆ ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ವರ್ಗಾವಣೆಗಾಗಿ ಸರ್ಕಾರ ಮಾಡಬೇಕೆಂದಿರುವ ಹೊಸ ನಿಯಮಗಳು ನೌಕರರ ಮನೋಬಲ ಕುಗ್ಗಿಸುವ ಜೊತೆಗೆ ಕರ್ತವ್ಯದ ಮೇಲೂ ದುಷ್ಪರಿಣಾಮ ಉಂಟಾಗಲು ಕಾರಣವಾಗಲಿವೆ. ಇಂತಹ ವರ್ಗಾವಣೆ ನಿಯಮ ಜಾರಿಗೊಳಿಸುವ ವಿಚಾರ ಕೈ ಬಿಡುವಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಒತ್ತಾಯಿಸಿದೆ.

- ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹೇಳಿಕೆ

- - - ದಾವಣಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ವರ್ಗಾವಣೆಗಾಗಿ ಸರ್ಕಾರ ಮಾಡಬೇಕೆಂದಿರುವ ಹೊಸ ನಿಯಮಗಳು ನೌಕರರ ಮನೋಬಲ ಕುಗ್ಗಿಸುವ ಜೊತೆಗೆ ಕರ್ತವ್ಯದ ಮೇಲೂ ದುಷ್ಪರಿಣಾಮ ಉಂಟಾಗಲು ಕಾರಣವಾಗಲಿವೆ. ಇಂತಹ ವರ್ಗಾವಣೆ ನಿಯಮ ಜಾರಿಗೊಳಿಸುವ ವಿಚಾರ ಕೈ ಬಿಡುವಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾ ಘಟಕ ಸರ್ಕಾರಕ್ಕೆ ಒತ್ತಾಯಿಸಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ನಿಯಮಗಳು-2024ರ ಕರಡು ನಿಯಮಾವಳಿಗಳ ನಿಯಮ-4ರ ವರ್ಗ-1ರಲ್ಲಿ ಒಂದೇ ತಾಲೂಕಿನಲ್ಲಿ ನಿರಂತರ 7 ವರ್ಷ ಸೇವೆ ಸಲ್ಲಿಸಿರುವ ವರ್ಗ-1ರ ನೌಕರರನ್ನು ಅದೇ ತಾಲೂಕಿನ ಗ್ರಾ.ಪಂ.ಗೆ ಸ್ಥಳ ನಿಯುಕ್ತಿಗೊಳಿಸಲು ಆಗುವುದಿಲ್ಲ ಎಂಬುದನ್ನು ಸೇರ್ಪಡೆಗೊಳಿಸಲು ಸರ್ಕಾರ ಉದ್ದೇಶಿಸಿದೆ. ಈ ಕರಡು ಅಧಿಸೂಚನೆಗೆ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಸಂಗಮೇಶ ಇತರೇ ಪದಾಧಿಕಾರಿಗಳು, ಸದಸ್ಯರು ಆಕ್ಷೇಪಿಸಿದ್ದಾರೆ.

ಹೊಸ ವರ್ಗಾವಣೆ ನಿಯಮ ಜಾರಿಗೊಂಡರೆ ಗ್ರಾಪಂ ಅಧಿಕಾರಿ, ನೌಕರರು ಕುಟುಂಬದಿಂದ ದೂರ ಉಳಿಯುವ ಜೊತೆಗೆ ವೃದ್ಧ ತಂದೆ-ತಾಯಿ ಯೋಗಕ್ಷೇಮ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಡೆತಡೆಯಾಗಿ, ಕುಟುಂಬ ಸದಸ್ಯರು ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ನೌಕರರ ಮನೋಬಲ ಕುಗ್ಗಿ, ಕರ್ತವ್ಯದ ಮೇಲೂ ದುಷ್ಪರಿಣಾಮ ಉಂಟಾಗಲು ಅದು ಕಾರಣವಾಗುತ್ತದೆ. ಇಂತಹ ವರ್ಗಾವಣೆ ನಿಯಮ ಸರ್ಕಾರ ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಸಂಘ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರ್ಗಾವಣೆ ನಿಯಮಗಳಲ್ಲಿ ನೌಕರಸ್ನೇಹಿ ಬದಲಾವಣೆ ಮಾಡುತ್ತಿರುವುದು ಒಂದೆಡೆಯಾದರೆ, ಇದಕ್ಕೆ ತದ್ವಿರುದ್ಧವೆಂಬಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ಕುಟುಂಬದಿಂದ ಬೇರ್ಪಡಿಸುವ ನೌಕರ ವಿರೋಧಿ ವರ್ಗಾವಣೆ ನಿಯಮ ತರಲು ಹೊರಟಿರುವುದು ಶೋಚನೀಯ ಸಂಗತಿ ಎಂದಿದ್ದಾರೆ.