ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳು ಜನಸಾಮಾನ್ಯರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುತ್ತಿವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಗಳು ಜನಸಾಮಾನ್ಯರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುತ್ತಿವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ನೂತನ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ, ಅದರಲ್ಲೂ ಶೇಕಡಾ 80ರಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ವಿಶಾಲ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಭಾಗ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ ಸ್ವಾತಂತ್ರ‍್ಯದ ನಂತರ ಇಂತಹ ಸವಾಲುಗಳನ್ನು ಮೆಟ್ಟಿ ನಿಂತು, ಪ್ರಧಾನಿ ಮೋದಿಯವರು ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ''''''''ಆಯುಷ್ಮಾನ್ ಭಾರತ'''''''' ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಉಚಿತ ಆರೋಗ್ಯ ಸೇವೆ: ಈ ಯೋಜನೆಯ ಮೂಲಕ ಬಡವರು ಆಸ್ಪತ್ರೆಗೆ ಹೋದರೆ 5 ಲಕ್ಷ ರು.ವರೆಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ 60 ಕೋಟಿ ಜನ ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಎರಡು ಕೋಟಿ ಜನರಿಗೆ ಈಗಾಗಲೇ ಆಯುಷ್ಮಾನ್ ಕಾರ್ಡ್ ಇದೆ. ಸುಮಾರು 90 ಲಕ್ಷ ಜನ ಈಗಾಗಲೇ ಇದರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.

ಇದಕ್ಕೆ ಹೊಸ ಹೊಸ ಯಾವ ಯಾವ ರೋಗಗಳು ಇದಕ್ಕೆ ಸೇರಿದ್ದಿಲ್ಲವೋ ಅದನ್ನು ಸೇರಿಸುವಂತದ್ದು, ಯಾವ ಯಾವ ಪ್ರೊಸೀಜರ್ ಅವುಗಳನ್ನು ಸೇರಿಸುವಂತದ್ದು ನಮ್ಮ ಡಾಕ್ಟರ್‌ಗಳಿಗೆಲ್ಲ ಗೊತ್ತಿರುತ್ತದೆ. ಆ ಕೆಲಸ ಕಾರ್ಯಗಳನ್ನು ಕಾಲಕಾಲಕ್ಕೆ ಮಾಡುತ್ತಾರೆ. ಉದಾಹರಣೆಗೆ ಈಗ ಹಾರ್ಟ್ ಆದರೆ, ಕಿಡ್ನಿ ಪ್ರಾಬ್ಲಮ್ ಆದರೆ, ಕ್ಯಾನ್ಸರ್ ಆದರೆ, ಮೊದಲು ಇದು ಈ ಯೋಜನೆಯಲ್ಲಿ ಇರಲಿಲ್ಲ, ಈಗ ಅದನ್ನು ಸೇರಿಸಿದ್ದಾರೆ.

ಮತ್ತು 60 ವರ್ಷ ಮೇಲ್ಪಟ್ಟವರಿಗೆ ಯಾವುದೇ ರೀತಿಯ ಕಾರ್ಡ್ ಅಥವಾ ಇನ್ನೊಂದು ಇಲ್ಲದೆನು ಕೂಡ ಟ್ರೀಟ್ಮೆಂಟ್ ಮಾಡಬೇಕು ಅನ್ನುವಂತದ್ದು ಕೂಡ ಬಂದಿದೆ ಮತ್ತು ಅದನ್ನು 5 ಲಕ್ಷಕ್ಕಿಂತ ಹೆಚ್ಚು ಟ್ರೀಟ್ಮೆಂಟ್ ಇದ್ದರೂ ಕೂಡ ಅದನ್ನ ವಯಸ್ಸಾದವರಿಗೆ ಮಾಡಬೇಕು ಅಂತ ಕೂಡ ಇದೆ. ಆದರೆ ಕರ್ನಾಟಕ ರಾಜ್ಯ ಇನ್ನು ಅದನ್ನು ಜಾರಿ ಮಾಡಿಕೊಂಡಿಲ್ಲ. ಜಾರಿ ಮಾಡಿದರೆ ಅದು ಹಿರಿಯ ನಾಗರಿಕರಿಗೆ ಅನುಕೂಲ ಕೂಡ ಆಗುತ್ತದೆ ಎಂದು ಹೇಳಿದರು.

ತುರ್ತು ಸೇವೆಗೆ ಸಹಕಾರಿ:ಈ ಕಟ್ಟಡ ತುರ್ತು ಚಿಕಿತ್ಸೆಗಾಗಿ ನಿಮ್ಮ ಗ್ರಾಮದಲ್ಲಿ ಏನಾದರೂ ಆದರೆ ಕೂಡಲೇ ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಬೇರೆ ಆಸ್ಪತ್ರೆಗೆ ಕಳಿಸಬೇಕು. ನಿಮ್ಮ ಗ್ರಾಮದಲ್ಲಿ ಈ ವ್ಯವಸ್ಥೆ ಇದ್ದರೆ ಅದು ಏನಾದ್ರೂನು ಸಣ್ಣಪುಟ್ಟ ಗಾಯ ಆದರೆ ಅದಕ್ಕೆ ಚಿಕಿತ್ಸೆ ಕೊಡಲಾಗುತ್ತದೆ. ಇಲ್ಲ ಬ್ಲಡ್ ಟೆಸ್ಟ್ ಮಾಡಿ ಶುಗರ್ ಮತ್ತು ಬಿಪಿ ಬಂದ್ರೆ ಅದನ್ನು ಕೂಡ ಟೆಸ್ಟ್ ಮಾಡುವುದಕ್ಕೆ ಲ್ಯಾಬ್ ಇದೆ. ಇಲ್ಲಿಯ ಆರೋಗ್ಯ ಅಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಸಿಎಚ್‌ಒ ಅದೇ ಸಮುದಾಯ ಆರೋಗ್ಯ ಅಧಿಕಾರಿ ಇಲ್ಲೇ ಇರೋದಕ್ಕೆ ಮನೆ ಕೂಡ ಮಾಡಿದೆ. 24/7 ಇನ್ ಸರ್ವಿಸ್ ಮಾಡಿದ್ದೇವೆ. ಹೆಚ್ಚಿನ ಟ್ರೀಟ್ಮೆಂಟ್ ಬೇಕಾದಾಗ ನಾವು ತಾಲೂಕು ಆಸ್ಪತ್ರೆಗೆ ಹೋಗಬೇಕು ಇಲ್ಲ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇವತ್ತು ಈ ಒಂದು ಆಯುಷ್ಮಾನ್ ಆರೋಗ್ಯ ಕೇಂದ್ರ ನಾವು ಉದ್ಘಾಟನೆ ಮಾಡಿದ್ದೇವೆ. ಇದಕ್ಕೆ ಎಲ್ಲಾ ರೀತಿಯ ಒಳ್ಳೆಯ ಸೇವೆ ಗ್ರಾಮಸ್ಥರಿಗೆ ಸಿಗಲಿ ಎಂದರು.

ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ನಾಗಪ್ಪ ಕುಮ್ಮೂರ, ಭರಮಪ್ಪ ಜಾಲವಾಡಗಿ, ಎಂ.ಎಸ್. ಪಾಟೀಲ್, ಶಂಭಣ್ಣ ಪಾಟೀಲ್, ಡಾ. ರಾಜಶೇಖರ, ಶಂಕ್ರಪ್ಪ ಸಣ್ಣಮನಿ, ರುದ್ರೇಶ ಚಿನ್ನಣ್ಣನವರ, ಪರಮೇಶಪ್ಪ ಮಣ್ಣನ್ನವರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.