ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಅತ್ಯಗತ್ಯ

| Published : Feb 11 2024, 01:48 AM IST

ಸಾರಾಂಶ

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸುವ ಕೆಲಸಗಳನ್ನು ಮಾಡುತ್ತಾರೆ. ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದರಿಂದ ಸಾಂಸ್ಕೃತಿವಾಗಿ ಬೆಳೆಯುವುದನ್ನು ತಿಳಿಸಿಕೊಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಜೀವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಂದೆ-ತಾಯಿ ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸುವ ಕೆಲಸಗಳನ್ನು ಮಾಡುತ್ತಾರೆ. ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದರಿಂದ ಸಾಂಸ್ಕೃತಿವಾಗಿ ಬೆಳೆಯುವುದನ್ನು ತಿಳಿಸಿಕೊಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಜೀವ್ ತಿಳಿಸಿದರು.ನಗರದ ಜೆಎಚ್‌ಪಟೇಲ್ ಸಭಾಂಗಣದಲ್ಲಿ ಸಿದ್ಧಾರ್ಥ ಹಿಪ್ಪೋಕ್ಯಾಂಪಸ್‌ ಅಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಒಂದು ತಪ್ಪು ಭಾವನೆ ಇದೆ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಿದರೆ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ ಎಂಬ ಭಾವನೆಯಿದೆ. ಚಿಕ್ಕ ಶಾಲೆಗಳೂ ಉತ್ತಮ ಶಿಕ್ಷಣವನ್ನು ನೀಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿಪಂ ಅಧ್ಯಕ್ಷ ಹಾಗೂ ನಾಗಸೇನಾ ಸೋಷಿಯಲ್ ಟ್ರಸ್ಟ್ ಕಾರ್ಯದರ್ಶಿ ಎಸ್,ಮಹದೇವಯ್ಯ ಮಾತನಾಡಿ ಮಕ್ಕಳಿಗೆ ಮಾತೃಭಾಷೆಯ ಜೊತೆಯಲ್ಲಿ ಅಂಗ್ಲ ಭಾಷೆಯನ್ನು ಕಲಿಸುವುದರಿಂದ ಜ್ಞಾನವು ಬೆಳೆಯುತ್ತದೆ. ಪೋಷಕರು ಮಕ್ಕಳಿಗೆ ಸಮಾಜಕ್ಕೆ ಅನುಕೂಲವಾಗುವ ಮಾರ್ಗಗಳನ್ನು ತಿಳಿಸಿಕೊಡಬೇಕು. ಮೊಬೈಲ್ ಫೋನ್‌ನಿಂದ ದೂರವಿರಲು ಎಚ್ಚರವಹಿಸಬೇಕು. ಚಿಕ್ಕ ಮಕ್ಕಳಿಗೆ ಕಲಿಸುವ ಸಂಸ್ಕಾರ ಅವರ ಮುಂದಿನ ಜೀವನಕ್ಕೆ ಹಾದಿಯಾಗಲಿದೆ. ಹಿಪ್ಪೋ ಕ್ಯಾಂಪಸ್ ಅಂಗ್ಲ ಮಾಧ್ಯಮ ಶಾಲೆಯು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸುವ ಜೊತೆಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಹೇಳಿಕೊಡುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ಧಾರ್ಥ ಪದವಿ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆಗಳಿಗೆ ಹೋಗುವವರು ಹೆಚ್ಚಾಗಿದ್ದಾರೆ ಅವರಿಗೆ ನಮ್ಮ ಜಿಲ್ಲೆ ಎನ್ನುವ ಮನೋಭಾವ ಬೆಳೆಯಬೇಕು. ಎಲ್ಲಾ ಕಾಲೇಜುಗಳಲ್ಲಿಯೂ ಶಿಕ್ಷಣ ಒಂದೇ ಇರುತ್ತದೆ. ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಶಿಕ್ಷಣ ಕಲಿತರೆ ನಿಮ್ಮ ಕುಟುಂಬದ ಸದಸ್ಯರು ಸಂತೋಷ ಪಡುತ್ತಾರೆ ಎಂದು ಹೇಳಿದರು. ಸಿದ್ಧಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ, ಸಿದ್ಧಾರ್ಥ ಹಿಪ್ಪೋ ಕ್ಯಾಂಪಸ್ ಮುಖ್ಯ ಶಿಕ್ಷಕಿ ಶೃತಿ.ಪಿ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎನ್.ಶಿವಕುಮಾರ್‌, ಸಿ.ಆರ್.ಪಿ ಮಹೇಶ್, ಮಹೇಶ್‌ಕುದರ್, ಸಿ.ಕೆ.ಮಂಜುನಾಥ್, ಉದ್ಯಮಿ ಮಹದೇವು, ಶ್ರೀರಾಮಚಂದ್ರ ವಿದ್ಯಾಸಂಸ್ಥೆ ಮಹೇಶ್, ಹಿಪ್ಪೋ ಕ್ಯಾಂಪಸ್ ಶಿಕ್ಷಕರಾದ ಮಂಜು, ಶಶಿಕಲಾ, ಸುಪ್ರಿಯ, ಶೋಭ, ಪವಿತ್ರ ಹಾಜರಿದ್ದರು.