ಇಷ್ಟಲಿಂಗ ಧ್ಯಾನ ಸಹಜ ಶಿವಯೋಗ

| Published : Mar 10 2024, 01:31 AM IST

ಸಾರಾಂಶ

ಶರಣರ ದೃಷ್ಟಿಯಲ್ಲಿ ಅರಿವೇ ಗುರು, ಆಚಾರವೇ ಲಿಂಗ ಅನುಭಾವವೇ ಜಂಗಮ. ಇವುಗಳು ಶರಣರು ಬೋಧಿಸಿದ ಸರಳ ಸೂತ್ರ

ಚಿತ್ರದುರ್ಗ: ಶರಣರ ದೃಷ್ಟಿಯಲ್ಲಿ ಅರಿವೇ ಗುರು, ಆಚಾರವೇ ಲಿಂಗ ಅನುಭಾವವೇ ಜಂಗಮ. ಇವುಗಳು ಶರಣರು ಬೋಧಿಸಿದ ಸರಳ ಸೂತ್ರ ಎಂದು ವಿಜಯಪುರ ವನಶ್ರೀ ಸಂಸ್ಥಾನಮಠ ಪೀಠಾಧ್ಯಕ್ಷ ಹಾಗೂ ಚಿತ್ರದುರ್ಗ ಯೋಗವನ ಬೆಟ್ಟದ ಜಯ ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಗಾಣಿಗ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಸಾಮೂಹಿಕ ಇಷ್ಟಲಿಂಗ ಧ್ಯಾನ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಇಷ್ಟಲಿಂಗದ ಮಹತ್ವ ಕುರಿತು ಮಾತನಾಡಿದರು.

ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲಗಳ ಸೂಕ್ಷ್ಮ ಪರಿಚಯ ಅವುಗಳ ಬಗ್ಗೆ ವಿಶ್ಲೇಷಣೆ ಶ್ರೀಗಳು ಶಿವಯೋಗ ಸಾಧನೆಗೆ ಸಾರ್ವಜನಿಕರು ಒಂದಷ್ಟು ಸಮಯ ಕೊಡಬೇಕು ಎಂದರು. ಶಿವಯೋಗ ಧ್ಯಾನ ಮನುಷ್ಯರ ಬದುಕಿನಲ್ಲಿ ಇಡೀ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತಿ, ಸಹನೆ ಸೃಜಿಸಲು ಪ್ರೇರಣೆ ನೀಡುತ್ತದೆ. ಅಂತಹ ಸಾಧನೆ ಮಾಡಿದ ಬಸವಾದಿ ಶಿವಶರಣರು ಮತ್ತು ಇತರೆ ಸ್ವಾಮೀಜಿಗಳು, ಶಿವಯೋಗಿಗಳು ಜೀವನದಲ್ಲಿ ಯಶಸ್ವನ್ನು ಕಂಡು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಗುರು, ಲಿಂಗ ಮತ್ತು ಜಂಗಮ ಎನ್ನುವುದು ತತ್ವವೇ ಹೊರತು ಜಾತಿ ಸೂಚಕ ಅಲ್ಲ ಎನ್ನುವುದನ್ನು ಅರಿತು ಆಚರಿಸಿದಾಗ ಅದರ ಮಹತ್ವ ಅರ್ಥವಾಗುತ್ತದೆ ಎಂದು ಮನನ ಮಾಡಿದರು.

ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ಎಂ.ತೋಟಪ್ಪ ಉತ್ತಂಗಿ, ಕೋಕಿಲಾ ರುದ್ರಮೂರ್ತಿ ಸಂಗಡಿಗರಿಂದ ವಚನ ಗಾಯನ ನಡೆಯಿತು.