ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡದ ಕಾರ್ಯಗಳನ್ನು ರಾಜ್ಯದಲ್ಲಿ ಮಠಗಳು ಮಾಡುತ್ತಿವೆ. ಇದೊಂದು ದೊಡ್ಡ ಇತಿಹಾಸ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕವಿ ಡಾ.ಸಿದ್ದಪ್ಪ ಬಿದರಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡದ ಕಾರ್ಯಗಳನ್ನು ರಾಜ್ಯದಲ್ಲಿ ಮಠಗಳು ಮಾಡುತ್ತಿವೆ. ಇದೊಂದು ದೊಡ್ಡ ಇತಿಹಾಸ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕವಿ ಡಾ.ಸಿದ್ದಪ್ಪ ಬಿದರಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ, ಸಾರಂಗಮಠದ ಆರ್.ಡಿ.ಪಾಟೀಲ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಇಂದಿನ ಯುವಕರಿಗೆ ಸಂಸ್ಕಾರ ಸಿಗುತ್ತಿಲ್ಲ, ಮುಂದೊಂದು ದಿನ ಇದು ದೊಡ್ಡ ದುರಂತವಾಗಿ ಮೂಡುತ್ತದೆ. ಮೊದಲಿನ ಕಾಲದಲ್ಲಿ ಕಿತ್ತು ತಿನ್ನುವಂತಹ ಬಡತನ. ಅದರ ಮಧ್ಯದಲ್ಲಿಯೂ ಅನೇಕರು ಕಷ್ಟ ಪಟ್ಟು ಓದಿ ಸಾಧಕರಾಗಿದ್ದಾರೆ. ಇಂದು ಸರ್ಕಾರ, ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡುತಿದ್ದರು ಇಂದಿನ ಯುವ ಜನಾಂಗ ಗುಣಮಟ್ಟದಲ್ಲಿ ಕಲಿಯುತ್ತಿಲ್ಲ. ನಾವೇಲ್ಲ ಧರ್ಮದ ಹಾದಿಯಲ್ಲಿ, ನಂಬಿಕೆ ಮತ್ತು ಗಟ್ಟಿತನದ ಹಾದಿಯಲ್ಲಿ ನಡೆಯಬೇಕಿದೆ ಎಂದ ಅವರು, ವಿದ್ಯಾರ್ಥಿಗಳು ಯಾವತ್ತು ನಿಮಗೆ ಕಲಿಸಿದ ಗುರುಗಳನ್ನು, ಹೆತ್ತ ತಂದೆ ತಾಯಿಗಳನ್ನು ಯಾವತ್ತು ಕಡೆಗಣಿಸಬಾರದು. ಇಂದು ಹೆಚ್ಚಾಗಿ ವಿದ್ಯಾವಂತರೆ ತಮ್ಮ ಪಾಲಕರನ್ನು ವೃದ್ದಾಶ್ರಮದಲ್ಲಿ ಇಡುತ್ತಿರುವುದು ಯಾವ ಸಂಸ್ಕೃತಿ. ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಜಗತ್ತನ್ನೇ ಮೀರಿಸಿದಂತ ದೇಶ. ಈ ಮಣ್ಣಿನಲ್ಲಿ ಹುಟ್ಟಿದ ನಾವೇಲ್ಲ ಪುಣ್ಯವಂತರು, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿತು ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಜಾನಪದ ಹಾಡುಗಳ ಮೂಲಕವೇ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.ಈ ವೇಳೆ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ವಿವಿಧ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು ಮತ್ತು ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪಿ.ಎಸ್.ಸರನಾಡಗೌಡ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳ ಬದುಕು ಹಸನವಾಗಲು ಶಿಕ್ಷಣ ಮತ್ತು ಸಂಸ್ಕಾರಗಳು ಅತ್ಯಂತ ಮುಖ್ಯವಾಗಿವೆ. ಹಿರಿಯರ ಅನುಭವಗಳನ್ನು ಕ್ರೋಡಿಕರಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಹೇಳಿದರು.ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಅಧ್ಯಕ್ಷತೆ ವಹಸಿ ಮಾತನಾಡಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಎನ್.ಬಿ.ಪೂಜಾರಿ ವರದಿ ವಾಚನ ಮಾಡಿದರು. ವೇದಿಕೆ ಮೇಲೆ ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪ್ರಧಾನ ಕಾರ್ಯದರ್ಶಿ ರೇಖಾ ಕೊಣ್ಣೂರ ಸರಿದಂತೆ ಇನ್ನು ಹಲವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅಶೋಕ ವಾರದ, ಎಂ.ಎಸ್.ಹೈಯಾಳಕರ, ಎ.ಆರ್.ಹೆಗ್ಗಣದೊಡ್ಡಿ, ಬಸವರಾಜ ಗೋಡಕಿಂಡಿ, ಸಂಗಣ್ಣ ಶಹಾಪೂರ, ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇತರರು ಇದ್ದರು.