ಖರ್ಗೆ ಅಣ್ಣ ಚಿತ್ತಾಪುರನ ಚಿಕಾಗೋ ಮಾಡಿದ್ದಿರಾ? ಚಿತ್ತಾಪುರದಲ್ಲಿ ಇರೋದು ಹಳ್ಳಿಗುಗ್ಗುಗಳು, ಅದಕ್ಕೆ ನೀವು ಬೆಂಗಳೂರು ನಗರದಲ್ಲೇ ಚುನಾವಣೆಗೆ ನಿಲ್ಲಿ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸಚಿವ ಎಚ್.ಡಿ, ಕುಮಾರಸ್ವಾಮಿ ಹಳ್ಳಿ ಗುಗ್ಗೂನೆ, ಇದರಲ್ಲಿ ಯಾವುದೇ ಅನುಮಾನ ಬೇಡ. ರೈತರ ಪರ ಕೆಲಸ ಮಾಡಿದ ಎಚ್.ಡಿ. ದೇವೇಗೌಡರ ಮಗ ಕುಮಾರಸ್ವಾಮಿ. ಕುಮಾರಸ್ವಾಮಿ ಕೂಡ ರೈತರ ಸಾಲ ಮನ್ನಾ ಮಾಡಿದ್ದರು. ಅವರು ಹಳ್ಳಿಗುಗ್ಗೂನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸರಿಯಾಗಿಯೇ ಸಂಬೋಧನೆ ಮಾಡಿದ್ದಾರೆ. ಗುರುಮಿಠಕಲ್ ಕ್ಷೇತ್ರದಲ್ಲಿ ನಿಮ್ಮ ಅಪ್ಪನನ್ನು ಗೆಲ್ಲಿಸಿದ್ದು ಕೂಡ ಹಳ್ಳಿ ಗುಗ್ಗುಗಳೆ. ಚಿತ್ತಾಪುರದಲ್ಲಿ ನಿಮಗೆ ಮತ ಹಾಕಿದವರು ಹಳ್ಳಿ ಗುಗ್ಗುಗಳೆ ಎಂದು ಕುಟುಕಿದರು.ಖರ್ಗೆ ಅಣ್ಣ ಚಿತ್ತಾಪುರನ ಚಿಕಾಗೋ ಮಾಡಿದ್ದಿರಾ? ಚಿತ್ತಾಪುರದಲ್ಲಿ ಇರೋದು ಹಳ್ಳಿಗುಗ್ಗುಗಳು, ಅದಕ್ಕೆ ನೀವು ಬೆಂಗಳೂರು ನಗರದಲ್ಲೇ ಚುನಾವಣೆಗೆ ನಿಲ್ಲಿ. ಪಿಯುಸಿ ಫೇಲಾದ ನೀವು ಈ ರಾಜ್ಯದ ಗೃಹ ಮಂತ್ರಿ. ನಿಮ್ಮ ಮ್ಯಾಜಿಕ್ ನಮಗೆ ಗೊತ್ತಾಗುತ್ತಿಲ್ಲ. ನಿಮಗೆ ಸಿಕ್ಕ ಸಿರಿವಂತ ಅಪ್ಪ ಹಳ್ಳಿಗುಗ್ಗುಗಳಿಗೆ ಸಿಕ್ಕಿಲ್ಲ. ನಿಮ್ಮ ಮಾತಿನ ಛಾಳಿ ನಿಮ್ಮ ಅಪ್ಪನಿಗೂ ಬಂದಿದೆ. ಕಾಂಗ್ರೆಸ್ ನಲ್ಲಿ ಬರೀ ಕೂಗು ಮಾರಿಗಳೇ ತುಂಬಿದ್ದಾರೆ. ಪ್ರಿಯಾಂಕ್ ಖರ್ಗೆ ಅದರ ಮುಂಚೂಣಿಯಲ್ಲಿದ್ದಾರೆ. ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ, ಚಿಕ್ಕಬಳ್ಳಾಪುರದ ಶಾಸಕ, ಕಲಘಟಗಿ ಶಾಸಕ, ಸಚಿವ ಎಲ್ಲರೂ ಕೂಗು ಮಾರಿಗಳು ಎಂದು ಅವರು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞಸಿದ್ದರಾಮಯ್ಯ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ. ಶಕ್ತಿ ಯೋಜನೆಯಿಂದ ಸಾರಿಗೆ ವಿಭಾಗಗಳು ಲಾಭ ಮಾಡುತ್ತಿವೆ ಎಂದು ಸಿದ್ದರಾಮಯ್ಯ ಪ್ರಚಾರ ತೆಗೆದುಕೊಂಡರು. ಈಗ ಸಾರಿಗೆ ಸಚಿವ ಭೈರತಿ ಸುರೇಶ್ ಸಾರಿಗೆ ವಿಭಾಗಗಳು 9 ಸಾವಿರ ಕೋಟಿ ರೂ. ಹೆಚ್ಚಿನ ಸಾಲದಲ್ಲಿವೆ ಎಂದು ಹೇಳುತ್ತಿದ್ದಾರೆ. ರಾಜ್ಯದ ಅರ್ಥ ವ್ಯವಸ್ಥೆ ಏನಾಗಿದೆ? ಒಂಬತ್ತೂವರೆ ಲಕ್ಷ ಕೋಟಿ ರೂ. ಸಾಲದಲ್ಲಿ ರಾಜ್ಯ ಇದೆ ಎಂದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಲಾದರೂ ಜನರಿಗೆ ನಾವು ಸುಳ್ಳು ಹೇಳಿದ್ದೇವೆ. ನಾವು ನಿಮಗೆ ಟೋಪಿ ಹಾಕಿ ಮತ ಪಡೆದವು ಎಂದು ಸತ್ಯ ಹೇಳಲಿ. ಮುಂದಿನ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಅನ್ನು ಒದ್ದು ಓಡಿಸುತ್ತಾರೆ. ಡಿ.ಕೆ. ಶಿವಕುಮಾರ್ ಸಾಹುಕಾರ್ ಆಗುತ್ತಲೇ ಇದ್ದಾರೆ‌. ಅವರ ಸಂಪುಟದಲ್ಲೂ ಹಲವರು ಸಾಹುಕಾರ್ ಗಳಾಗಿದ್ದಾರೆ. ಸರ್ಕಾರ ಮಾತ್ರ ಬಡವಾಗುತ್ತಿದೆ. ಡೆತ್, ಬರ್ತ್ ಸರ್ಟಿಫಿಕೇಟ್ ಗೂ ಹಣ ಜಾಸ್ತಿ ಮಾಡಿದ್ದಾರೆ. ಇದು ಜನರ ಸುಲಿಗೆ ಮಾಡುವ ಸರ್ಕಾರ. ಸಿಎಂ ಡಿಕೆಶಿ ಅವರದ್ದು ದಗಾಕೋರ ಸರ್ಕಾರ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗೆ ಚೆನ್ನಾಗಿ ಟೋಪಿ ಇಟ್ಟು ತಾವು ಸೇಫ್ಹ್ ಆದರು ಎಂದು ಅವರು ಆರೋಪಿಸಿದರು.ಮಧು ಬಂಗಾರಪ್ಪ ಬಹಳ ಮಾತನಾಡುತ್ತಾರೆ. ಶಾಲೆಯ ಮುಖ್ಯ ಶಿಕ್ಷಕರಿಗೆ 6 ತಿಂಗಳಿಂದ ಶಾಲಾ ಖರ್ಚು ವೆಚ್ಚದ ಹಣ ಕೊಟ್ಟಿಲ್ಲ. ವಿದ್ಯಾರ್ಥಿಗಳಿಗೆ ಶೂ ಕೊಟ್ಟಿಲ್ಲ‌. ಡಿ.ಕೆ. ಶಿವಕುಮಾರ್ ಅವರ ಕುಟುಂಬ ಮೃಷ್ಠಾನ ಭೋಜ‌ನ‌ ಮಾಡುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ರಾಜೀನಾಮೆ ಕೊಡಿ ಚುನಾವಣೆಗೆ ಹೋಗೋಣ. ಕಾಂಗ್ರೆಸ್ ಈ ರಾಜ್ಯವನ್ನು ಸಾಲ‌ಪೀಡಿತ, ದಿವಾಳಿ ರಾಜ್ಯವನ್ನಾಗಿ ಮಾಡಿದೆ ಎಂದು ಅವರು ಕಿಡಿಕಾರಿದರು.