ರೈತ ಚಳವಳಿ ಹೋರಾಟಗಳಲ್ಲಿಸಕ್ರಿಯರಾಗಿದ್ದ ಎಸ್‌.ಶಿವಮೂರ್ತಿ

| Published : Jan 24 2024, 02:00 AM IST

ರೈತ ಚಳವಳಿ ಹೋರಾಟಗಳಲ್ಲಿಸಕ್ರಿಯರಾಗಿದ್ದ ಎಸ್‌.ಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಚಳವಳಿ ಹೋರಾಟಗಾರ ಎಸ್.ಶಿವಮೂರ್ತಿರವರ ನಿಧನ ಹಿನ್ನೆಲೆ ನಗರದ ರೈತ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ರೈತ ಚಳವಳಿಯ ಎಲ್ಲಾ ಹೋರಾಟಗಳಲ್ಲಿ ಎಸ್.ಶಿವಮೂರ್ತಿ ಸಕ್ರಿಯವಾಗಿ ಭಾಗವಹಿಸಿ ರೈತರಿಗೆ, ಜನಸಾಮಾನ್ಯರಿಗೆ ಸ್ಪಂದಿಸಿದ ಸೇವೆಗಳು ಪ್ರಶಂಸನೀಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಹೇಳಿದರು. ಇಲ್ಲಿನ ಮಂಗಳವಾರ ನಗರದ ರೈತ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಿಧನರಾದ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿರವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿರವರು 30 ವರ್ಷಗಳಿಂದ ರೈತ ಸಂಘಟನೆಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪದಾಧಿಕಾರಿಯಾಗಿ ಈಗ ಹಾಲಿ ಜಿಲ್ಲಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ರೈತ ಚಳುವಳಿಯ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತರಿಗೆ, ಜನಸಾಮಾನ್ಯರಿಗೆ ಸ್ಪಂದಿಸುವಂತ ಸೇವೆಗಳು ಪ್ರಶಂಸನೀಯ. ಅವರ ಅಕಾಲಿಕ ಮರಣ ರೈತ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.ಈಗಿನ ಸಂದರ್ಭದಲ್ಲಿ ರೈತರ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ದಾವಿಸಬೇಕು. ಇವತ್ತಿನ ಸಂದರ್ಭದಲ್ಲಿ ಯುವಕರು ರಾಜಕಾರಣದಲ್ಲಿ ಸೇವೆ ಮಾಡುವುದಕ್ಕಿಂತ ಗ್ರಾಮೀಣ ಪ್ರದೇಶದ ರೈತರ, ಬಡವರ, ಕೃಷಿ ಕೂಲಿಕಾರ್ಮಿಕರ ಸಮಸ್ಯೆಗಳನ್ನ ಕೈಗೆತ್ತಿಕೊಂಡು ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ, ಪ್ರಮುಖರಾದ ಡಾ.ಬಿ.ಎಂ ಚಿಕ್ಕಸ್ವಾಮಿ, ಟಿ.ಎಂ.ಚಂದ್ರಪ್ಪ, ಈಶಣ್ಣ, ಇ.ಬಿ.ಜಗದೀಶ್, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಎಂ.ಮಹೇಶ್ವರಪ್ಪ, ಜಯಣ್ಣ, ಎಂ.ಮಂಜಪ್ಪ, ಪಿ.ಶೇಖರಪ್ಪ, ಗುರುಶಾಂತ, ಎಂ.ಡಿ.ನಾಗರಾಜ್ ಮತ್ತಿತರರು ಇದ್ದರು.