ಸಾರಾಂಶ
18 ಅಡಿ ಎತ್ತರವಿರುವ ಹನುಮನ ವಿಗ್ರಹ । ಹಾಲಿ, ಮಾಜಿ ಶಾಸಕರು, ವಿವಿಧ ಇಲಾಖೆಗಳ ಅನುದಾನದಲ್ಲಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನ ಬೈರಾಪುರದಲ್ಲಿ ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅನುದಾನದ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದ ದೇವರಕೆರೆಯಲ್ಲಿ ನಿರ್ಮಿಸಿರುವ 18 ಅಡಿ ಎತ್ತರದ ವಿಜಯ ಆಂಜನೇಯ ಸ್ವಾಮಿ ಭವ್ಯ ಮೂರ್ತಿಯ ಲೋಕಾರ್ಪಣೆ ಕಾರ್ಯಕ್ರಮವು ಭಾನುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಯಶಸ್ವಿಯಾಗಿ ನಡೆಯಿತು.
ಮುಂಜಾನೆಯಿಂದಲೇ ಬ್ರಾಹ್ಮಿ ಮುಹೂರ್ತದಲ್ಲಿ ಇಸ್ಕಾನ್ ದೇವಾಲಯದ ವೈಕುಂಠ ಗೌರವರಾದಾಸ್ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳನ್ನು ಜವಾಬ್ದಾರಿ, ಶ್ರದ್ಧಾಭಕ್ತಿಯಿಂದ ನೆರವೇರಿಸಿದರುನಂತರ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ನೆರವೇರಿಸಿದರು. ನಂತರ ಮಾತನಾಡಿ, ಈ ಸುಂದರವಾದ ಭವ್ಯ ಮೂರ್ತಿಯು ಅಮೋಘವಾಗಿ ಮೂಡಿ ಬಂದಿದ್ದು ಗ್ರಾಮಸ್ಥರು, ಸಾರ್ವಜನಿಕರು ಮತ್ತು ಯುವಕರು ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರಲು ಶ್ರಮಿಸಿದ್ದಾರೆ. ಈ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಈ ಕ್ಷೇತ್ರವನ್ನು ಒಂದು ಯಾತ್ರಾಸ್ಥಳವಾಗಿ ರೂಪಿಸುವ ಸಂಕಲ್ಪವನ್ನು ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮೂರ್ತಿ ಎದ್ದು ನಿಂತಿದ್ದು ರಾಮನ ಪರಮ ಭಕ್ತನಾದ ಶ್ರೀ ಆಂಜನೇಯ ಸ್ವಾಮಿಯು ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಗಳ ರಾಷ್ಟ್ರೀಯ ಹೆದ್ದಾರಿ 75ರ ದೇವರ ಕಟ್ಟೆಯಲ್ಲಿ ಸೌಮ್ಯ ಮೂರ್ತಿಯಾಗಿ ಪ್ರತಿಷ್ಠಾಪನೆಗೊಂಡಿರುವುದು ಇತಿಹಾಸವಾಗಿದೆ. ಇದು ಭಾರತ ದೇಶದ ಹಿಂದೂ ಧಾರ್ಮಿಕ ಸಂಕೇತವಾಗಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಪರಿಸರವಾದಿ ಎಚ್.ಪಿ.ಮೋಹನ್, ಜಿ.ಪಂ.ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ಗ್ರಾಪಂ ಅಧ್ಯಕ್ಷೆ ಹೇಮಾ ಮಂಜೇಗೌಡ, ಹಾಲು ಒಕ್ಕೂಟ ನಿರ್ದೇಶಕ ಪಿ.ಎಲ್.ನಿಂಗರಾಜು, ತಾಲೂಕು ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಂ, ಮುಖಂಡರಾದ ಜೈ ಮಾರುತಿ ದೇವರಾಜ್, ಬಿ.ಸಿ.ಶಂಕರಾಚಾರ್, ಎಸ್.ದೇವರಾಜ್, ಲೋಕೇಶ್ ಕಣಗಾಲು, ಗ್ರಾಪಂ ಸದಸ್ಯರಾದ ನಂಜುಂಡಪ್ಪ, ಸ್ನೇಹಜೀವಿ ಗಣೇಶ್, ಅಜ್ಜೇಗೌಡ, ಸಿ.ಡಿ.ಅಶೋಕ್, ವೀರಭದ್ರಸ್ವಾಮಿ, ಬಿ.ಕೆ ಗಿರೀಶ್, ಮಲ್ಲೇಶ್, ನಂದೀಶ್ ಗೌಡ, ಮಂಜೇಗೌಡ, ಬಾಲಕೃಷ್ಣ, ಕೃಷ್ಣೆಗೌಡ, ಶಶಿಧರ್, ನಂಜುಂಡೇಗೌಡ ಇದ್ದರು.
ಫೋಟೋ1: ಭೈರಾಪುರ ಸಮೀಪದ ದೇವರಕಟ್ಟೆ ಕೆರೆಯಲ್ಲಿ ನಿರ್ಮಿಸಲಾಗಿರುವ ಆಂಜನೇಯಸ್ವಾಮಿ ಮೂರ್ತಿ ಉದ್ಘಾಟನಾ ಕಾರ್ಯಕ್ರಮದ ವೇಳೆ ನಡೆದ ವೇದಿಕೆ ಕಾರ್ಯಕ್ರಮವನ್ನು ಃಅಳೀ, ಮಾಜಿ ಶಾಸಕರು ಉದ್ಘಾಟಿಸಿದರು.