ಸಾರಾಂಶ
ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚೆಗೆ ತೆಂಕಿಲದಲ್ಲಿರುವ ದರ್ಶನ ಕಲಾ ಮಂದಿರದಲ್ಲಿ ನಡೆಯಿತು.
ಪುತ್ತೂರು: ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇತ್ತೀಚೆಗೆ ತೆಂಕಿಲದಲ್ಲಿರುವ ದರ್ಶನ ಕಲಾ ಮಂದಿರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ನಾಗ ವಿ., ಉಪಾಧ್ಯಕ್ಷರಾಗಿ ಪ್ರಶಾಂತ್ ಕೆ ಪೂಜಾರಿ, ಕಾರ್ಯದರ್ಶಿಯಾಗಿ ಬಸವಲಿಂಗೇಗೌಡ ಹೆಚ್.ಜೆ., ಖಜಾಂಜಿಯಾಗಿ ಮಣಿಪ್ರಸಾದ್ ಅವರು ಪದ ಪ್ರದಾನ ಸ್ವೀಕರಿಸಿದರು.
ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಪೂರ್ಣೇಶ್ ಡಿ.ಎಂ. ಹಾಗೂ ಕಾರ್ಯದರ್ಶಿಯಾಗಿ ಮಧು ಬಿ.ಎಂ. ಅಧಿಕಾರ ಸ್ವೀಕರಿಸಿದರೆ, ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಗಣೇಶ್ ಬಿ.ಜೆ, ಕಾರ್ಯದರ್ಶಿಯಾಗಿ ದಿವಾಕರ್ ರೆಡ್ಡಿ, ಉಳ್ಳಾಲ ತಾಲೂಕು ಸಮಿಯ ಅಧ್ಯಕ್ಷರಾಗಿ ಲೋಹಿತ್ ಎನ್., ಕಾರ್ಯದರ್ಶಿಯಾಗಿ ರಕ್ಷಿತ್ ಎಂ.ಕೆ., ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ಲೋಕೇಶಪ್ಪ ಆರ್., ಕಾರ್ಯದರ್ಶಿಯಾಗಿ ಯಶವಂತ, ಮುಲ್ಕಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ, ಕಾರ್ಯದರ್ಶಿಯಾಗಿ ಮನೋಹರ್ ದೇವಾಡಿಗ, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಪುಟ್ಟೇಗೌಡ, ಕಾರ್ಯದರ್ಶಿಯಾಗಿ ಮಾನಸ ಎಸ್., ಕಡಬ ತಾಲೂಕು ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಡಿ.ಬಿ., ಕಾರ್ಯದರ್ಶಿಯಾಗಿ ಪ್ರಭಾಕರ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ವಿಜ್ರಾಂತ್ ಶಿರಾಜೆ, ಕಾರ್ಯದರ್ಶಿಯಾಗಿ ತೇಜಸ್, ಮೂಡುಬಿದಿರೆ ತಾಲೂಕು ಸಮಿತಿ ಅಧ್ಯಕ್ಷರಾಗಿ ವಾಸುದೇವ್ ಹಾಗೂ ಕಾರ್ಯದರ್ಶಿಯಾಗಿ ಲೋಕೇಶ್ ಬಿ.ಎನ್. ಅವರು ಪದಪ್ರದಾನ ಸ್ವೀಕರಿಸಿದರು.ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕಿ ಪ್ರಸಾದಿನಿ ಕೆ, ಸಂಘದ ರಾಜ್ಯಾಧ್ಯಕ್ಷ ತಿರುಮಲೇ ಗೌಡ, ಸಂಘದ ಜಿಲ್ಲಾಧ್ಯಕ್ಷ ನಾಗ ವಿ. ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೋದಂಡರಾಮ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಜು ಕೆ., ಬಂಟ್ವಾಳ ಭೂ ದಾಖಲೆಗಳ ಅಧೀಕ್ಷಕ ಮಹೇಶ್ ಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಿಸಾರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಗೌರವ ಸಲಹೆಗಾರ ಮೋಹನ್ ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಬಸವಲಿಂಗೇಗೌಡ ಹೆಚ್.ಜೆ. ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.