22 ರಂದು ನಾಡಹಬ್ಬ ದಸರೆಗೆ ಬಾನು ಮುಷ್ತಾಕ್‌ ಚಾಲನೆ

| Published : Sep 05 2025, 01:00 AM IST

22 ರಂದು ನಾಡಹಬ್ಬ ದಸರೆಗೆ ಬಾನು ಮುಷ್ತಾಕ್‌ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.22 ರಂದು ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.

ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೆ.22 ರಂದು ಬೆಳಗ್ಗೆ 10.10 ರಿಂದ 10.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಚಾಲನೆ ನೀಡುವರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಶಿವರಾಜ್‌ ತಂಗಡಗಿ, ಎಚ್‌.ಕೆ. ಪಾಟೀಲ್‌, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ಈಶ್ವರ ಖಂಡ್ರೆ, ಭೈರತಿ ಸುರೇಶ್‌ ಭಾಗವಹಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.ಅದೇ ದಿನ ಸಂಜೆ 5ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀವತ್ಸ ಅಧ್ಯಕ್ಷತೆ ವಹಿಸುವರು. ಮೊದಲ ದಿನದ ಕಾರ್ಯಕ್ರಮಗಳುಸೆ.22 ರಂದು ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಮಧ್ಯಾಹ್ನ 1ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸುವರು. ಸಂಜೆ 4ಕ್ಕೆ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆ 4ಕ್ಕೆ ಸಿದ್ದಾರ್ಥನಗರದ ಕಾವಾದಲ್ಲಿ ಚಿತ್ರಕಲಾ ಶಿಬಿರ, ಸಂಜೆ 5ಕ್ಕೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಪುಸ್ತಕಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಂಜೆ 5ಕ್ಕೆ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಯೋಗ ದಸರಾವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸಂಜೆ 6.30ಕ್ಕೆ ಸಯ್ಯಾಜಿರಾವ್‌ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌. ಸಂಜೆ 7.30ಕ್ಕೆ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಇತರೆ ಕಾರ್ಯಕ್ರಮಗಳುಸೆ.23 ರಂದು ಬೆಳಗ್ಗೆ 7.30ಕ್ಕೆ ಅರಮನೆ ಒಳಾವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, 10.30ಕ್ಕೆ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಪ್ರಭಾತ ಕವಿಗೋಷ್ಠಿಯನ್ನು ಪ್ರೊ. ಅರವಿಂದ ಮಾಲಗತ್ತಿ, ಬೆಳಗ್ಗೆ 11ಕ್ಕೆ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉದ್ಘಾಟಿಸುವರು.ಸೆ.24 ರಂದು ಬೆಳಗ್ಗೆ 10.30ಕ್ಕೆ ಬಿಎಂಶ್ರೀ ಸಭಾಂಗಣದಲ್ಲಿ ಪ್ರಚುರ ಕವಿಗೋಷ್ಠಿಯನ್ನು ಚಿತ್ರ ನಿರ್ದೇಶಕ ಜೋಗಿ ಪ್ರೇಮ್‌ ಉದ್ಘಾಟಿಸುವರು.ಸೆ.25 ರಂದು ಬೆಳಗ್ಗೆ 7ಕ್ಕೆ ಪುರಭವನದ ಬಳಿ ಪಾರಂಪರಿಕ ಸೈಕಲ್‌ ಸವಾರಿಯನ್ನು ಸೈಕಲಿಸ್ಟ್‌ ನವೀನ್‌ ಡಿ.ಎಸ್‌. ಸೋಲಂಕಿ, ಬೆಳಗ್ಗೆ 10.30ಕ್ಕೆ ಬಿಎಂಶ್ರೀ ಸಭಾಂಗಣದಲ್ಲಿ ಪ್ರಜ್ವಲ ಕವಿಗೋಷ್ಠಿಯನ್ನು ಗೀತ ರಚನೆಕಾರ ಪ್ರಮೋದ್‌ ಮರವಂತೆ ಉದ್ಘಾಟಿಸುವರು.ಸೆ.26 ರಂದು ಬೆಳಗ್ಗೆ 7ಕ್ಕೆ ಪುರಭವನದಲ್ಲಿ ಪಾರಂಪರಿಕ ನಡಿಗೆಯನ್ನು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌, 9.30ಕ್ಕೆ ಅರಮನೆ ಉತ್ತರ ದ್ವಾರದಲ್ಲಿ ರೈತ ದಸರಾ ಮೆರವಣಿಗೆಯನ್ನು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, 10.30ಕ್ಕೆ ಪ್ರತಿಭಾ ಕವಿಗೋಷ್ಠಿಯನ್ನು ಪ್ರೊ.ನಂಜಯ್ಯ ಹೊಂಗನೂರು, ಬೆಳಗ್ಗೆ 11ಕ್ಕೆಜೆ.ಕೆ.ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌, ರೈತ ದಸರಾ ವೇದಿಕೆ ಕಾರ್ಯಕ್ರಮ, ಸಂಜೆ 4ಕ್ಕೆ ಕಾವಾದಲ್ಲಿ ರಾಷ್ಟ್ರೀಯ ಕರಕುಶಲ ವಸ್ತು ಮತ್ತು ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಉದ್ಘಾಟಿಸುವರು.ಸೆ.27 ರಂದು ಬೆಳಗ್ಗೆ 6.30ಕ್ಕೆ ಜೆ.ಕೆ. ಮೈದಾನದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌, ಬೆಳಗ್ಗೆ 7ಕ್ಕೆ ಪುರಭವನ ಬಳಿ ಪಾರಂಪರಿಕ ಟಾಂಗಾ ಸವಾರಿಯನ್ನು ನಟ ಮಂಡ್ಯ ರಮೇಶ್‌, 9ಕ್ಕೆ ವಸ್ತು ಪ್ರದರ್ಶನ ಆವರಣದ ಪಿ. ಕಾಳಿಂಗರಾವ್‌ ಸಭಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಶಾಸಕ ಟಿ.ಎಸ್. ಶ್ರೀವತ್ಸ, ಬಿಎಂಶ್ರೀ ಸಭಾಂಗಣದಲ್ಲಿ ಪ್ರಬುದ್ಧ ಕವಿಗೋಷ್ಠಿಯನ್ನು ಹಿರಿಯ ಕವಿ ಡಾ.ಸಿಪಿಕೆ, ಸಂಜೆ 5ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಏರ್‌ ಶೋವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಉದ್ಘಾಟಿಸುವರು. ಸಂಜೆ 6.30ಕ್ಕೆ ಜೆ.ಕೆ. ಮೈದಾನದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌ ಬಹುಮಾನ ವಿತರಿಸುವರು.ಸೆ.28 ರಂದು ಬೆಳಗ್ಗೆ 10ಕ್ಕೆ ಜೆ.ಕೆ. ಮೈದಾನದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನವನ್ನು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌, 10ಕ್ಕೆ ಕಾವಾದಲ್ಲಿ ಕಲಾ ಜಾತ್ರೆಯನ್ನು ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಉದ್ಘಾಟಿಸುವರು. ಸಂಜೆ 5.30ಕ್ಕೆ ಜೆ.ಕೆ. ಮೈದಾನದಲ್ಲಿ ಮುದ್ದು ಪ್ರಾಣಿಗಳ ಸ್ಪರ್ಧೆಯ ವಿಜೇತರಿಗೆ ಎಚ್.ಸಿ. ಮಹದೇವಪ್ಪ ಬಹುಮಾನ ವಿತರಿಸುವರು. ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಡ್ರೋಣ್‌ ಪ್ರದರ್ಶನಕ್ಕೂ ಅವರು ಚಾಲನೆ ನೀಡುವರು.ಸೆ.29 ರಂದು ಸಂಜೆ 7ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆಯುವ ಡ್ರೋನ್‌ ಪ್ರದರ್ಶನಕ್ಕೆ ಸೆಸ್ಕ್‌ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಚಾಲನೆ ನೀಡುವರು. ಸೆ.30 ರಂದು ಬೆಳಗ್ಗೆ6ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡುವರು. ಅ.1 ರಂದು ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಪೂರ್ವಾಭ್ಯಾಸಕ್ಕೆ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡುವರು. ಅ.2 ರಂದು ಜಂಬೂಸವಾರಿ- ಪಂಜಿನ ಕವಾಯತುದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಅ.2 ರಂದು ನಡೆಯಲಿದೆ. ಅಂದು ಮಧ್ಯಾಹ್ನ 1 ರಿಂದ 1.18 ರವರೆಗೆ ಸಲ್ಲುವ ಶುಭ ಧನುರ್‌ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4.42 ರಿಂದ 5.06 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸುವರು.ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಗೌರವ ವಂದನೆ ಸ್ವೀಕರಿಸುವರು. ಸಿಎಂ, ಡಿಸಿಎಂ ಮತ್ತಿತರರು ಭಾಗವಹಿಸುವರು. ಶಾಸಕ ತನ್ವೀರ್ ಸೇಠ್‌ ಅಧ್ಯಕ್ಷತೆ ವಹಿಸುವರು.---ಬಾಕ್ಸ್‌... ಈ ಬಾರಿ ಮುಂಚಿತವಾಗಿ ಚಲನಚಿತ್ರೋತ್ಸವ ಸಾಮಾನ್ಯವಾಗಿ ದಸರೆಯ ಉದ್ಘಾಟನೆಯ ದಿನವೇ ಚಲನಚಿತ್ರೋತ್ಸವ ಕೂಡ ಉದ್ಘಾಟನೆಯಾಗುತ್ತಿತ್ತು. ಈ ಬಾರಿ ಸೆ.13 ರಂದೇ ಬೆಳಗ್ಗೆ 11ಕ್ಕೆ ಮಾಲ್‌ ಆಪ್‌ ಮೈಸೂರು ನೆಲಮಹಡಿ ಆವರಣದಲ್ಲಿ ಚಲನಚಿತ್ರೋತ್ಸವಕ್ಕೆ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡುವರು.ಎಂದಿನಂತೆ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮವು ಸೆ.10 ರಂದು ಸಂಜೆ 4ಕ್ಕೆ ಉದ್ಘಾಟನೆಯಾಗಲಿದೆ.--- ಬಾಕ್ಸ್‌ ಈ ಬಾರಿ ಬಿಎಂಶ್ರೀ ಸಭಾಂಗಣದಲ್ಲಿ ಕವಿಗೋಷ್ಠಿಸಾಮಾನ್ಯವಾಗಿ ಕವಿಗೋಷ್ಠಿ ಜಗನ್ಮೋಹನ ಅರಮನೆ, ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಕಲಾಮಂದಿರ, ರಾಣಿ ಬಹದ್ದೂರ್‌ ಸಭಾಂಗಣ- ಹೀಗೆ ಬೇರೆ ಬೇರೆ ಕಡೆ ನಡೆಯುತ್ತಿದ್ದವು. ಈ ಬಾರಿ ಪಂಚ ಕಾವ್ಯದೌತಣ ಶೀರ್ಷಿಕೆಯಡಿ ಪ್ರಭಾತ, ಪ್ರಚುರ, ಪ್ರಜ್ವಲ, ಪ್ರತಿಭಾ, ಪ್ರಬುದ್ಧ- ಕವಿಗೋಷ್ಠಿಗಳು ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ನಡೆಯಲಿವೆ. ಬಾಕ್ಸ್‌ ಬನ್ನಿಮಂಟಪದಲ್ಲಿ ಏರ್ ಶೋ, ಎರಡು ದಿನ ಡ್ರೋನ್‌ ಪ್ರದರ್ಶನಬನ್ನಿಮಂಟಪದ ಪಂಜಿನ ಕವಾಯು ಮೈದಾನದಲ್ಲಿ ಸೆ.27 ರಂದು ಏರ್‌ ಶೋ- ಸಾರಂಗ, 28 ಹಾಗೂ 29 ರಂದು ಸಂಜೆ 7ಕ್ಕೆ ಡ್ರೋನ್‌ ಪ್ರದರ್ಶನ ನಡೆಯಲಿದೆ.