ಸಾರಾಂಶ
ಬೆಳ್ತಂಗಡಿ ತಾಲೂಕು ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಮಾತನಾಡಿ, ಮಾತೃ ಭಾಷೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಜೀವನ ಮೌಲ್ಯಗಳು ಮಾತೃ ಭಾಷೆಯಿಂದಲೇ ಬರುವುದು. ಮಾತೃ ಭಾಷೆಯಲ್ಲಿ ಮೂಡಿಬಂದ ಸಾಹಿತ್ಯ, ಸಮಾಜಕ್ಕೆ ನೀಡುವ ಕೊಡುಗೆ ಅಪಾರ. ಉದಾತ್ತವಾದ ಸಮಾಜ ನಿರ್ಮಾಣವೇ ಸಾಹಿತ್ಯದ ಮುಖ್ಯ ಕಾರ್ಯವಾಗಬೇಕು ಎಂದು ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಭಾನುವಾರ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ - ಸಾಹಿತ್ಯ - ಸಂಸ್ಕೃತಿ ಆಶಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.ಕನ್ನಡ ಬೇರೂರಲು ನಮ್ಮೊಳಗೆ ಇಚ್ಛಾಶಕ್ತಿ ಇರಬೇಕು. ಕನ್ನಡ ಭಾಷೆ ಬೆಳೆದಾಗ ಕನ್ನಡಿಗರು ಬೆಳೆಯುತ್ತೇವೆ. ನಾಡೂ ಬೆಳೆಯಲು ಸಾಧ್ಯವಾಗುತ್ತದೆ. ನಮ್ಮ ಮಾತೃ ಭಾಷೆ ವಿಸ್ತಾರವಾಗಿ ಇಂಗ್ಲಿಷ್ ಭಾಷೆಯ ಮಟ್ಟಕ್ಕೆ ಬೆಳೆಯಬೇಕು. ಕನ್ನಡ ಭಾಷೆಯಲ್ಲಿ ಮಾತನಾಡಲು ನಾವು ಹೆಮ್ಮೆ ಪಡಬೇಕಲ್ಲದೆ ಅದು ನಮ್ಮ ಅನ್ನದ ಭಾಷೆಯಾಗಬೇಕು ಎಂದರು.ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ, ಭಾಷೆ ಎಂಬುದು ಜ್ಞಾನದ ವಾಹಿನಿಯೇ ಹೊರತು, ಭಾಷೆಯೇ ಜ್ಞಾನ ಅಲ್ಲ. ಇಂಗ್ಲಿಷ್ ನಮಗೆ ವಿದ್ಯೆಯ ಮಾಧ್ಯಮವಾಗಿರಲಿ ಹೊರತು ನಮ್ಮ ಸಂಸ್ಕೃತಿಯಾಗಿ ಇರಬಾರದು ಎಂದು ಹೇಳಿದರು. ಸಾಹಿತ್ಯ ನಮ್ಮೊಳಗೆ ಇರುವ ಋಣಾತ್ಮಕ ಯೋಚನೆಗಳನ್ನು ನಾಶ ಮಾಡಬೇಕು. ಯಾರಿಗೆ ವಿಶಾಲ ಹೃದಯ ಇಲ್ಲವೋ ಆತ ಉತ್ತಮ ಸಾಹಿತಿ, ಕವಿಯಾಗಳು ಸಾಧ್ಯವಿಲ್ಲ. ಸಾಹಿತಿ ತಾನು ಬೆಳೆಯುವ ಜೊತೆ ಇನ್ನೊಬ್ಬ ಸಾಹಿತಿಯನ್ನು ಬೇಳೆಸುವಂತಿರಬೇಕು ಎಂದರು.ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ‘ಚಾರುಮುಡಿ’ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಕನ್ನಡ ಸಾಹಿತ್ಯಗಳ ಮೂಲಕ ಕರ್ನಾಟಕ ಒಂದಾಗಿದೆಯೇ ಹೊರತು ರಾಜಕಾರಣದಿಂದಲ್ಲ. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಕೆಲಸವನ್ನು ಸಾಹಿತಿಗಳು ಮಾಡುತ್ತಾ ಬಂದಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಶುಭಹಾರೈಸಿದರು.ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ, ಬೆಳ್ತಂಗಡಿ ಚಿಕಿತ್ಸಾ ಫಾರ್ಮ್‌ನ ಶ್ರೀಶ ಮುಚ್ಚಿನ್ನಾಯ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಡಾ.ಎಂ.ಕೆ.ಮಾಧವ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಜೇಶ್ವರಿ, ತಾಲೂಕು ಘಟಕ ಗೌರವ ಕಾರ್ಯದರ್ಶಿ ಪ್ರಮೀಳಾ, ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಮಂಗಳೂರು ಘಟಕದ ಮಂಜುನಾಥ್ ಎಸ್. ರೇವಣ್ಕರ್, ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ಕೋಶಾಧಿಕಾರಿ ಮೀನಾಕ್ಷಿ ಎನ್. ಗುರುವಾಯನಕೆರೆ ಇದ್ದರು.ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಡಿ. ಯದುಪತಿ ಗೌಡ ಪ್ರಸ್ತಾವಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ಶಿಕ್ಷಕ ದೇವುದಾಸ್ ನಾಯಕ್ ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಮಹಾವೀರ ಜೈನ್ ಇಚ್ಲಾಂಪಾಡಿ ಮತ್ತು ವಸಂತಿ ಮುಂಡಾಜೆ ನಿರೂಪಿಸಿದರು.ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರತರಲಾದ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ ‘ಚಾರುಮುಡಿ’ಯನ್ನು ಶಾಸಕ ಹರೀಶ ಪೂಂಜ ಭಾನುವಾರ ಬಿಡುಗಡೆಗೊಳಿಸಿದರು.ಕ್ ಅವರು ಪುರಸ್ಕೃತರ ಚಿತ್ರಗಳನ್ನು ಮೂಡಿಸಿದ್ದು ಗಮನಸೆಳೆಯಿತು.