ಜುಲೈ 2ನೇ ವಾರದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಉದ್ಘಾಟನೆ

| Published : May 25 2024, 12:53 AM IST

ಜುಲೈ 2ನೇ ವಾರದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಹಂತದ ಯೋಜನೆಗೆ ಸಿಎಂ ರಿಂದ ಚಾಲನೆ: ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ ಮಾಹಿತಿ

ಕನ್ನಡಪ್ರಭ ವಾರ್ತೆ ಕಾಗವಾಡ

ಈ ಭಾಗದ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಜುಲೈ 2ನೇ ವಾರದಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿನಾಯಕ ಬಾಗಡಿ ಹೇಳಿದರು.

ಮದಬಾವಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ವಿಶೇಷ ಪ್ರಯತ್ನದಿಂದ ಈ ಯೋಜನೆ ಶೇ.95 ರಷ್ಟು ಪೂರ್ಣಗೊಂಡಿದ್ದು, ಬರುವ ಜುಲೈ ತಿಂಗಳಲ್ಲಿ ಮೊದಲ ಹಂತದ ಯೋಜನೆ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಜುಲೈ 2ನೇ ವಾರದಲ್ಲಿ ಶಾಸಕದ್ವಯರಾದ ರಾಜು ಕಾಗೆ ಹಾಗೂ ಲಕ್ಷ್ಮಣ ಸವದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಂ.ಬಿ.ಪಾಟೀಲ ಸೇರಿದಂತೆ ಹಲವಾರು ಸಚಿವ ಶಾಸಕರನ್ನು ಆಹ್ವಾನಿಸಿ ಸಿಎಂ ಅವರ ಹಸ್ತದಿಂದ ಮೊದಲ ಹಂತದ ಯೋಜನೆಗೆ ಚಾಲನೆ ನೀಡುವ ಮೂಲಕ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಈ ವೇಳೆ ಪಿಕೆಪಿಎಸ್ ಅರ್ಧಯಕ್ಷ ನಿಜಗುಣಿ ಮಗದುಮ್, ಉಪಾಧ್ಯಕ್ಷ ಅಶೋಕ ಪುಜಾರಿ, ಎಪಿಎಂಸಿ ಉಪಾಧ್ಯಕ್ಷ ಶಿವಾನಂದ ಮಗದುಮ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್,ಪಾಟೀಲ, ಅಪ್ಪಾಸಾಬ್‌ ಚೌಗುಲಾ, ಬಾಹುಬಲಿ ಉಮದೆ, ಮನೋಹರ ಪುಜಾರಿ, ಭರತೇಶ ಹಿಪ್ಪರಗಿ, ಪ್ರಮೋದ ಭಂಡಾರೆ, ಸಂಜಯ ಅದಾಟೆ, ಸಂಜಯ ಬಾಡಗೆ, ಅಜೀತ ಹಿರೇಕುರುಬರ, ಉದಯ ಪವಾರ, ಪರುಶರಾಮ ರಾಜಮಾನೆ, ವಿಠ್ಠಲ ಶಿಂಧೆ, ವಿಠ್ಠಲ ಅವಳೆ, ಗಿರಮಲ್ಲಾ ಇಬ್ರಾಹಿಂಪುರ, ಅರ್ಜುನ ಇಬ್ರಾಹಿಂಪೂರ, ಅಶೋಕ ಕುಂಬಾರೆ ಇದ್ದರು.

------------

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮದಬಾವಿ ಹಾಗೂ ಅನಂತಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸುಮಾರು 22ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಯೋಜನೆಯ ಲಾಭ ದೊರಕಲಿದೆ. ಬರಗಾಲದ ಛಾಯೆಯನ್ನು ಹೊಂದಿರುವ 23 ಗ್ರಾಮಗಳ ಸುಮಾರು 27,462 ಹೆಕ್ಟೇರ್ ಭೂ ಪ್ರದೇಶಕ್ಕೆ ಈ ಬೃಹತ್ ಯೋಜನೆಯಿಂದ ನೀರೊದಗಲಿದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು ₹1363.48 ಕೋಟಿ ವೆಚ್ಚದ ಯೋಜನೆ ಇದಾಗಿದೆ.

-ವಿನಾಯಕ ಬಾಗಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ.