ಸಾರಾಂಶ
ಮನೆ ಮನೆಗೆ ತೆರಳಿ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಪಲ್ಯೇಟಿವ್ ಹೋಮ್ ಕೇರ್ ಕಚೇರಿಯ ಉದ್ಘಾಟನೆ ಕುಶಾಲನಗರದಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಶಿಹಾಬ್ ತಂಙಳ್ ಸೆಂಟರ್ ಫಾರ್ ಹುಮ್ಯಾನಿಟಿ ಸಂಸ್ಥೆಯ ಆಶ್ರಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಪಲ್ಯೇಟಿವ್ ಹೋಮ್ ಕೇರ್ ಕಚೇರಿಯ ಉದ್ಘಾಟನೆ ಕುಶಾಲನಗರದಲ್ಲಿ ನೆರವೇರಿತು.ಪಾಣಕ್ಕಾಡ್ ಸೈಯದ್ ರಶೀದ್ ಅಲಿ ತಂಙಳ್ ಕಚೇರಿ ಉದ್ಘಾಟನೆ ನೆರವೇರಿಸಿದರು.
ಕುಶಾಲನಗರ ಮತ್ತು ಮಡಿಕೇರಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗಳೊಂದಿಗೆ ಈ ಕಚೇರಿ ತೆರೆಯಲಾಗಿದೆ ಎಂದು ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯುಮಾನಿಟಿ ಹೋಂ ಕೇರ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಎನ್ ಕೆ ನೌಶಾದ್ ತಿಳಿಸಿದ್ದಾರೆ.ಸರಳ ಕಾರ್ಯಕ್ರಮದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್, ಸಂಸ್ಥೆಯ ಉಪಾಧ್ಯಕ್ಷರಾದ ಸಜೀರ್ ಶಾಂತಿ, ನಿರ್ದೇಶಕರಾದ ಎಂ ಎ ಅಮೀರ್ ಆಲಿ, ಟಿ. ಉಸ್ಮಾನ್, ಸೈಫುಧ್ಧೀನ್, ಅಬ್ದುಲ್ ರಶೀದ್, ಜಿಲ್ಲಾ ಸಂಚಾಲಕರಾದ ಅಬ್ದುಲ್ ಗಪೂರ್, ಮತ್ತಿತರರು ಇದ್ದರು.
ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ ಕರುಂಬಯ್ಯ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.