ಜಿ.ಶಂಕರ್‌ ಕಾಲೇಜ್‌ ವಾಣಿಜ್ಯ, ವ್ಯವಹಾರ ನಿರ್ವಹಣಾ ಸಂಘ ಉದ್ಘಾಟನೆ

| Published : Oct 09 2024, 01:32 AM IST

ಜಿ.ಶಂಕರ್‌ ಕಾಲೇಜ್‌ ವಾಣಿಜ್ಯ, ವ್ಯವಹಾರ ನಿರ್ವಹಣಾ ಸಂಘ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಗರದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಸಂಘದ ೨೦೨೪-೨೫ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಸಂಘದ ೨೦೨೪-೨೫ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್ ಅವರು ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ತಾವು ಕಲಿಯುವ ವಿದ್ಯಾ ಸಂಸ್ಥೆ ಮತ್ತು ಕಲಿಯುತ್ತಿರುವ ವಿಷಯವನ್ನು ಪ್ರೀತಿಸಬೇಕು, ಅಧ್ಯಾಪಕರು ಮಾಡುವ ಪಾಠವನು ಗಮನವಿಟ್ಟು ಆಲಿಸಬೇಕು, ಇದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಮುಖ್ಯ ಅತಿಥಿಯಾಗಿದ್ದ ಗಿನ್ನಿಸ್ ದಾಖಲೆಯ ಅಂಚೆಚೀಟಿ ಸಂಗ್ರಾಹಕ ಡೇನಿಯಲ್ ಮೊಂತೆರೊ ಮಾತನಾಡಿ, ಜೀವನದಲ್ಲಿ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮರ್‍ಪಣಾಭಾವದಿಂದ ಕೆಲಸ ಮಾಡಿದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬ ಮಾತನ್ನು ಉದಾಹರಣೆಯ ಮೂಲಕ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ವಹಿಸಿದ್ದರು. ಸಂಘದ ಸಂಚಾಲಕ ಕೃಷ್ಣ ಭಟ್‌ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಮುಖ್ಯಸ್ಥೆ ಗೌರಿ ಎಸ್. ಭಟ್ ಸ್ವಾಗತಿಸಿದರು. ಸಂಘದ ಕಾರ್‍ಯದರ್ಶಿ ಕು. ದಿಶಾ ಕೆ. ಕೋಟ್ಯಾನ್ ವಂದಿಸಿದರು.ತೃತೀಯ ಬಿ.ಬಿ.ಎ. ತರಗತಿಯ ಕು ತನ್ವಿ ನಿರೂಪಿಸಿದರು.