ಗೋಪಾಲಕೃಷ್ಣಸ್ವಾಮಿ ದೇವಸ್ಥಾನ, ಯಾದವ ಸಮುದಾಯ ಭವನ ಉದ್ಘಾಟನೆ

| Published : Apr 01 2024, 12:49 AM IST

ಸಾರಾಂಶ

ದೇವಸ್ಥಾನ ಉದ್ಘಾಟನೆ ಅಂಗವಾಗಿ ಶುಕ್ರವಾರ ಸಂಜೆ ಶ್ರೀ ಮಹಾಗಣಪತಿ ಪೂಜೆ, ವಾಸುವೇದ ಪುಣ್ಯಾಹ, ರಾಕ್ಷಾ ಬಂಧನ ಮತ್ತು ಧ್ವಜಾರೋಹಣ, ವಾಸ್ತು ಹೋಮ, ರಾಹೋಘನ ಹೋಮ ಜರುಗಿತು. ಹಾಗೆಯೇ, ಶನಿವಾರ ಬೆಳಗ್ಗೆ ಶ್ರೀ ಮಹಾಗಣಪತಿ ಪೂಜೆ, ಅಂಕುರಾರ್ಪಣ, ನವಗ್ರಹ ಹೋಮ ಮತ್ತು ಲಕ್ಷ್ಮೀನಾರಾಯಣ ಹೋಮ, ಸಂಜೆ ಮಹಾ ಸುದರ್ಶನ ಮತ್ತು ನರಸಿಂಹ ಹೋಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆಯಲ್ಲಿ ಯಾದವ (ಗೊಲ್ಲರ) ಸಂಘವು ನಿರ್ಮಿಸಿರುವ ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಯಾದವ ಸಮುದಾಯ ಭವನವನ್ನು ಚಿತ್ರದುರ್ಗದ ಗೊಲ್ಲಗಿರಿ ಕ್ಷೇತ್ರದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಶ್ರೀ ಕೃಷ್ಣ ಯಾದವನಾಂದ ಸ್ವಾಮೀಜಿ ಭಾನುವಾರ ಉದ್ಘಾಟಿಸಿದರು.

ದೇವಸ್ಥಾನ ಉದ್ಘಾಟನೆ ಅಂಗವಾಗಿ ಶುಕ್ರವಾರ ಸಂಜೆ ಶ್ರೀ ಮಹಾಗಣಪತಿ ಪೂಜೆ, ವಾಸುವೇದ ಪುಣ್ಯಾಹ, ರಾಕ್ಷಾ ಬಂಧನ ಮತ್ತು ಧ್ವಜಾರೋಹಣ, ವಾಸ್ತು ಹೋಮ, ರಾಹೋಘನ ಹೋಮ ಜರುಗಿತು. ಹಾಗೆಯೇ, ಶನಿವಾರ ಬೆಳಗ್ಗೆ ಶ್ರೀ ಮಹಾಗಣಪತಿ ಪೂಜೆ, ಅಂಕುರಾರ್ಪಣ, ನವಗ್ರಹ ಹೋಮ ಮತ್ತು ಲಕ್ಷ್ಮೀನಾರಾಯಣ ಹೋಮ, ಸಂಜೆ ಮಹಾ ಸುದರ್ಶನ ಮತ್ತು ನರಸಿಂಹ ಹೋಮ ನಡೆಯಿತು.

ಭಾನುವಾರ ಮುಂಜಾನೆ ದೇವಸ್ಥಾನದ ಗೋಪುರದ ಕಳಸ ಪ್ರತಿಷ್ಠಾಪನೆ, ಶ್ರೀ ಗೋಪಾಲಕೃಷ್ಣ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ನಂತರ ಗಂಗೆ ಮತ್ತು ಗೋಪೂಜೆ, ಕದಲಿ ಛೇದನ ನಂತರ ಮಹಾ ಮಂಗಳಾರತಿ ಜರುಗಿತು.

ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣದ ಮಹಾದಾನಿಗಳಾದ ದೊಡ್ಡನಾಗಯ್ಯ, ಎಂ. ವೆಂಕಟಾಚಲ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ಯಾದವ ಸಂಘದ ಅಧ್ಯಕ್ಷ ಡಿ. ಧ್ರುವಕುಮಾರ್, ಕಾರ್ಯದರ್ಶಿ ಜವರೇಗೌಡ, ಉಪಾಧ್ಯಕ್ಷರಾದ ವೆಂಕಟಾಚಲ, ನಾರಾಯಣಸ್ವಾಮಿ, ಖಜಾಂಚಿ ವಾಸುದೇವ್, ಸಂಚಾಲಕ ವಿ. ಸತ್ಯನಾರಾಯಣ, ಸದಸ್ಯರಾದ ಡಿ. ರಂಗಸ್ವಾಮಿ, ಎಂ.ಆರ್. ಜಗನ್ನಾಥ್, ಪುಷ್ಪವಲ್ಲಿ, ತುಕಾರಾಮ್ ಯಾದವ್, ಯೋಗಾನಂದ, ನಾಗೇಶ್ ಯಾದವ್, ಬಲರಾಮ್ ಮೊದಲಾದವರು ಇದ್ದರು.