ಕನ್ನಡಪ್ರಭ ವಾರ್ತೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಭಾನುವಾರ ಸಂಜೆ ಛತ್ರಪತಿ ಶಿವಾಜಿ ಮಹಾರಾಜ ಅವರ ಭವ್ಯಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಗಳನ್ನು ಅಲಂಕರಿಸಿ, ಧ್ವಜ-ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಜನರ ಹರ್ಷೋದ್ಘಾರ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಭಾನುವಾರ ಸಂಜೆ ಛತ್ರಪತಿ ಶಿವಾಜಿ ಮಹಾರಾಜ ಅವರ ಭವ್ಯಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಗಳನ್ನು ಅಲಂಕರಿಸಿ, ಧ್ವಜ-ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಜನರ ಹರ್ಷೋದ್ಘಾರ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ವಂತ ಖರ್ಚಿನಲ್ಲಿ ಮೂರ್ತಿಯನ್ನು ಕೊಡುಗೆ ನೀಡಿದ್ದು, ಗ್ರಾಮಕ್ಕೆ ಆಗಮಿಸಿದ ಸಚಿವೆಯನ್ನು ಗ್ರಾಮ ಪ್ರವೇಶದಿಂದಲೇ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಡೊಳ್ಳು-ತಾಶೆಗಳ ಘೋಷ, ಹೂವಿನ ಮಳೆಯ ಸ್ವಾಗತ ಮತ್ತು ಘೋಷಣೆಗಳ ನಡುವೆ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಬಾರಾಮತಿಯಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನನ್ನ ಕನಸು ಈಗ ಸಾಕಾರವಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಗೆ ನಿಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದರು.ಸುವರ್ಣ ವಿಧಾನಸೌಧವಿದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಅಷ್ಟಾಗಿ ಪರಿಚಿತವಾಗಿರಲಿಲ್ಲ. ಆದರೆ,ಈಗ ರಾಜ್ಯದ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗಿದೆ. ಕಳೆದ ವರ್ಷಗಳಲ್ಲಿ ಕ್ಷೇತ್ರದ 154 ಮಂದಿರಗಳ ಜೀರ್ಣೋದ್ಧಾರ ಹಾಗೂ ಎಲ್ಲ ಗ್ರಾಮಗಳಲ್ಲಿ ಮಹಾತ್ಮರ ಪುತ್ಥಳಿ ಸ್ಥಾಪನೆ ಮಾಡಲಾಗಿದೆ. ಚುನಾವಣೆ ಹೊರತಾಗಿಯೂ ವರ್ಷಪೂರ್ತಿ ನಿಮ್ಮ ಜೊತೆಯಲ್ಲೇ ಕೆಲಸ ಮಾಡುತ್ತೇನೆ. ಕಳೆದ 15 ವರ್ಷಗಳಿಂದ ಕ್ಷೇತ್ರದ ಸೇವೆಯಲ್ಲಿದ್ದೇನೆ. ನನ್ನ ಶರೀರ ಗಟ್ಟಿ ಇರುವವರೆಗೆ ನಿಮ್ಮ ಸೇವೆಯೇ ನನ್ನ ಧ್ಯೇಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರ್ಜುನಗೌಡ ಪಾಟೀಲ, ಮಡಿವಾಲ ಪಾಟೀಲ, ದೇವೇಂದ್ರ ದೇವತಕಟ್ಟಿ, ಜ್ಯೋತಿಬಾ ಕುದರೆಮನಿ, ಶಿವಾಜಿ ವಾಳಕಿ, ಲಕ್ಷ್ಮಣ ಪಾಟೀಲ, ಕೇಶವ ಚೌಗುಲೆ, ಜಯವಂತ ಪಾಟೀಲ, ಗಂಗಾರಾಮ ಪಾಟೀಲ, ಸುರೇಶ ಕರಗುಪ್ಪಿಕರ, ಬಾಳಕೃಷ್ಣ ಪಾಟೀಲ, ಗಂಗಾರಾಮ ಹುದಲಿ, ಕೃಷ್ಣಾ ಸನದಿ, ಕಲ್ಲಪ್ಪ ದೇಸಾಯಿ, ವಿಠ್ಠಲ ಸಾಂಬ್ರೆಕರ, ದುರ್ಗಾ ತಿಪ್ಪವಗೋಳ, ಕಲ್ಲಪ್ಪ ಕುದರಿಮನಿ ಸೇರಿ ಇತರರು ಇದ್ದರು.