- ಹಿರೇಕಲ್ಮಠ ಶ್ರೀ, ಶಾಂತನಗೌಡ, ರೇಣುಕಾಚಾರ್ಯ ಭಾಗಿ: ಅಧ್ಯಕ್ಷ ಡಾ.ರಾಜಕುಮಾರ್

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದಲ್ಲಿ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಮತ್ತು ನ್ಯಾಮತಿ ಶಾಖೆಯ ರಜತ ಮಹೋತ್ಸವ ಭವನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ 2025-26ನೇ ಸಾಲಿನ 27ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಡಾ. ಎಚ್.ಪಿ. ರಾಜಕುಮಾರ್ ತಿಳಿಸಿದ್ದಾರೆ.

ನ್ಯಾಮತಿ ಪಟ್ಟಣದ ಶಾಖೆಯಲ್ಲಿ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಆಚರಣೆ ಮತ್ತು ರಜತ ಮಹೋತ್ಸವ ಭವನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಜು.26ರ ಭಾನುವಾರ ನಡೆಯಲಿರುವ 27ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮ ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೋಸೈಟಿಯ ರಜತ ಮಹೋತ್ಸವ ನೂತನ ಕಟ್ಟಡವನ್ನು ಶಾಸಕ ಡಿ.ಜಿ.ಶಾಂತನಗೌಡ, ರಜತ ಮಹೋತ್ಸವ ಸಮಾರಂಭವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅ.ಕ್ರೆ.ಕೋ.ಆ. ಸೊಸೈಟಿಯ ಅಧ್ಯಕ್ಷ ಡಾ. ಎಚ್‌.ಪಿ.ರಾಜಕುಮಾರ್‌ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವಳಿ ತಾಲೂಕಿನ ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಸೊಸೈಟಿಯ ಉಪಾದ್ಯಕ್ಷ ಎಚ್.ವಿರೇಶ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಜಿ.ಆರ್.ಪ್ರಕಾಶ್, ಹೊನ್ನಾಳಿ ಮತ್ತು ತಾ.ಸಲಹೆಗಾರ ಎ.ಆನಂದಕುಮಾರ್, ದಾವಣಗೆರೆ ಸ.ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೆಶಕ ಡಾ. ಕೆ.ಮಹೇಶ್ವರಪ್ಪ, ಹೊನ್ನಾಳಿ ನ್ಯಾಮತಿ ತಾಲೂಕು ಸ.ಅಭಿವೃದ್ಧಿ ಅಧಿಕಾರಿ ಕೆ.ಜಿ.ನವೀನ ಕುಮಾರ್, ನ್ಯಾಮತಿ ಪ.ಪಂ. ಮುಖ್ಯಾಧಿಕಾರಿ ಪಿ.ಗಣೇಶ ರಾವ್ ಆಗಮಿಸಲಿದ್ದಾರೆ ಎಂದು ಹೇಳಿದರು.

ರಜತ ಮಹೋತ್ಸವ ಸಮಾರಂಭದಲ್ಲಿ ಸೊಸೈಟಿ ಸದಸ್ಯರ ಮಕ್ಕಳು 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್‌ಸಿ, ಪಿಯುಸಿ, ಅಂತಿಮ ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸೊಸೈಟಿಯ ಸದಸ್ಯರು ನಿಧನ ಹೊಂದಿದರೆ ಅವರ ವಾರಸುದಾರರಿಗೆ ಪರಿಹಾರವಾಗಿ ಸೊಸೈಟಿಯಿಂದ ₹5 ಸಾವಿರ ಧನಸಹಾಯ, ಅಪಘಾತದಿಂದ ನಿಧನರಾದರೆ ₹1 ಲಕ್ಷ ಮೃತರ ವಾರಸುದಾರರಿಗೆ ಕೊಡಿಸಲಾಗುತ್ತಿದೆ ಎಂದರು.

ಈಗಾಗಲೇ ಸೊಸೈಟಿ ಪ್ರಾರಂಭಿಸಿ 27 ವರ್ಷಗಳು ಕಳೆದಿವೆ. ಕೇಂದ್ರ ಕಚೇರಿ ಮತ್ತು 2 ಶಾಖೆಗಳನ್ನು ಗಣಕೀಕರಣ ಮಾಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದಕ್ಕೆ ಕಾರಣರಾದ ಎಲ್ಲ ಸದಸ್ಯರಿಗೂ ಆಡಳಿತ ಮಂಡಳಿ ಸದಸ್ಯರಿಗೂ ಮತ್ತು ಸಿಬ್ಬಂದಿ ವೃಂದದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜಕುಮಾರ್ ಹೇಳಿದರು.

ಈ ಸಂದರ್ಭ ಕುಂಕುವ ಪ್ರಕಾಶ್, ಹಲಗೇರಿ ವಿರೇಶ್, ಎಚ್.ಎಂ.ಶಿವಮೂರ್ತಿ, ಎನ್.ಜಯರಾಮ್, ಎ.ಆನಂದಕುಮಾರ್, ಕುಮಾರ್, ದಿನೇಶ್ ಪಟೇಲ್, ರಂಗನಾಥ, ಪರಮೇಶ್ವರಪ್ಪ, ವಿಜಯ್, ರವಿಕುಮಾರ್, ಶ್ರೀನಿವಾಸ್ ಮತ್ತಿತರರಿದ್ದರು.

- - -

-ಚಿತ್ರ:

ನ್ಯಾಮತಿ ಪಟ್ಟಣದಲ್ಲಿ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಆಚರಣೆ ಮತ್ತು ನ್ಯಾಮತಿ ಶಾಖೆ ರಜತಮಹೋತ್ಸವ ಭವನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸೊಸೈಟಿಯ ಆಡಳಿತ ಮಂಡಳಿಯವರು ಬಿಡುಗಡೆಗೊಳಿಸಿದರು.