ಉಡುಪಿ: ನಗರಸಭೆಯ ಕಲ್ಮಾಡಿ ವಾರ್ಡಿನಲ್ಲಿ ಸುಮಾರು 13 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಕಲ್ಮಾಡಿ ಪಾದೆ ಬಬ್ಬುಸ್ವಾಮಿ ಸಂಪರ್ಕ ರಸ್ತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಕಳೆದ ಬಾರಿ ಬಬ್ಬುಸ್ವಾಮಿ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರದ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರ ಮನವಿಯಂತೆ ಈ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕಲ್ಮಾಡಿ ವಾರ್ಡಿನ ಅಭಿವೃದ್ದಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಸುಂದರ ಜೆ. ಕಲ್ಮಾಡಿ, ಮಾಧವ ಗುರಿಕಾರ, ಪ್ರಮುಖರಾದ ಜಯರಾಮ್ ಕಲ್ಮಾಡಿ, ರಮೇಶ್ ಮಾಸ್ಟರ್ ಕಲ್ಮಾಡಿ, ಜಯಶ್ರೀ ಅಶೋಕ್, ಸುರೇಶ್ ಕಲ್ಮಾಡಿ, ರೋಹಿತ್ ಕಲ್ಮಾಡಿ, ಅಶೋಕ್ ಸುವರ್ಣ, ವಿನೋದರ, ಮನೋಜ್ ಕುಮಾರ್ ಕಲ್ಮಾಡಿ, ಅಶೋಕ್ ಕುಮಾರ್, ಕಿಶೋರ್ ಮಲ್ಪೆ, ಸ್ಥಳೀಯ ಮುಖಂಡರಾದ ಲಕ್ಷ್ಮೀಶ, ವಿವೇಕ್ ಇದ್ದರು.