ಕುಣಿತ ಭಜನಾ ತರಬೇತಿ ಕಾರ್ಯಾಗಾರ ಉದ್ಘಾಟನೆ

| Published : Oct 29 2025, 11:15 PM IST

ಸಾರಾಂಶ

ಕುಶಾಲನಗರದಲ್ಲಿ ಕುಣಿತ ಭಜನಾ ತರಬೇತಿ ಕಾರ್ಯಾಗಾರದ ಉದ್ಘಾಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರದಲ್ಲಿ ಕುಣಿತ ಭಜನಾ ತರಬೇತಿ ಕಾರ್ಯಾಗಾರದ ಉದ್ಘಾಟನೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಕುಶಾಲನಗರದ ರಂಗಭಾರತಿ, ಸಮಸ್ತ ಭಜನಾ ಮಂಡಳಿ, ಬಾಲಗೋಕುಲ ಬಳಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ ದಿನೇಶ್ ಉದ್ಘಾಟಿಸಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ತಿಳಿಸಿದರು. ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ವಿ ಡಿ ಪುಂಡರಿಕಾಕ್ಷ, ಸದಸ್ಯರಾದ ಎಸ್ ಕೆ ಸತೀಶ್, ಕೆ ಎಸ್ ರಾಜಶೇಖರ್, ಎಂ ಎನ್ ಚಂದ್ರಮೋಹನ್, ಡಾ ಶ್ರೀರಾಮ್, ಬಾಲ ಗೋಕುಲದ ಪ್ರಮುಖರಾದ ನವ್ಯ, ರಂಗಮಂದಿರದ ಜನಾರ್ದನ್, ಸಮಸ್ತ ಭಜನಾ ಮಂಡಳಿಯ ಪದ್ಮ ಪುರುಷೋತ್ತಮ್, ತರಬೇತುದಾರ ಸಂದೇಶ್, ಧರ್ಮಸ್ಥಳ ಕ್ಷೇತ್ರ ಯೋಜನೆಯ ಸೋಮವಾರಪೇಟೆ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಸ್ಥಳೀಯ ಮೇಲ್ವಿಚಾರಕರಾದ ನಾಗರಾಜ ಮತ್ತಿತರರು ಇದ್ದರು.