ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಯ ಗ್ರಾಮ ಪಂಚಾಯಿತಿಯ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ಕುಪ್ಪೋಟು ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಂಗಳವಾರ ಸಂಜೆ ಉದ್ಘಾಟನೆ ಮಾಡಿದರು.ಅಭಿವೃದ್ಧಿ ಕಾಣದ ಈ ರಸ್ತೆಯನ್ನು ಶಾಸಕರು ಇತ್ತೀಚೆಗೆ ಬಿಡುಗಡೆ ಮಾಡಿದ 60 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಶಾಸಕರು ಕಾಮಗಾರಿ ವೀಕ್ಷಿಸಿ ಕೆಲಸ ನಿರ್ವಹಿಸುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಬಳಿಕ ಕೊಳಕೇರಿ ಗ್ರಾಮದ ತೊತ್ತಿಯಂಡ ಬಾರಿಕೆ ಕಡೆ ತೆರಳುವ ರಸ್ತೆಗೆ 13 ಲಕ್ಷ ರು. ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 65 ಲಕ್ಷ ರು. ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣ ಜನರ ಬೇಡಿಕೆ ಮತ್ತು ನಿರೀಕ್ಷೆಯಂತೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಿಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ರವರಿಗೂ ಕೊಳಕೇರಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್, ಕಾಂಗ್ರೆಸ್ ವಲಯ ಅಧ್ಯಕ್ಷರಾದ ಮಾಚೇಟಿರ ಕುಸು ಕುಶಾಲಪ್ಪ, ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಹೇಮಾ ಅರುಣ್, ಅಶ್ರಫ್ ಕೆ. ವೈ, ಇಬ್ರಾಹಿಂ, ಆಮಿನ, ಎಮ್ ಎ ಮೊಯಿದು, ಬಿ ಆರ್ ಗಂಗಮ್ಮ ಎಲ್ತಂಡ ಶಾಂತಿ, ನಾಯಕಂಡ ಕುಞ್ಞಣ್ಣ ಮತ್ತು ಜಮಾಹತ್ ಅಧ್ಯಕ್ಷರಾದ ಅಶ್ರಫ್ ಎ. ಎ, ಹಾರಿಸ್ ಎ.ಕೆ. ಕಾದರ್, ಗ್ರಾಮಸ್ಥರಾದ ಎಮ್. ಎಮ್ ಮಹಮ್ಮದ್ , ಹಾರಿಸ್ ಪಿ. ಎಮ್, ರಝಕ್ ಎಮ್. ಎಮ್, ಗಫೂರ್ ಸಿ. ವೈ, ಮಜೀದ್ ಹಾಜಿ ಪಿ, ರಹೀಮ್ ಎಮ್. ಎಮ್, ಬಷೀರ್ ಕೋಕೇರಿ ಗ್ರಾಮಸ್ಥರಾದ ಚೆಂನಂಡ ಗಿರೀಶ್ ಪೂನಚ್ಚ, ಚೆಂನಂಡ ಜೆಪ್ಪು ದೇವಯ್ಯ, ಪೊನ್ನಚಂಡ ಟೀನ ಡಿವಿನ್ ಮತ್ತು ಗ್ರಾಮಸ್ಥರು ಹಾಜರಿದ್ದರು.