ಇಲ್ಲಿನ ಕಲ್ಯಾಣಪುರದ ಮಿಲಾಗ್ರಿಸ್ ಪಪೂ ಕಾಲೇಜಿನ 2026 - 27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತಿನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮುಕ್ತಾ ಬಾಯಿ ಉದ್ಘಾಟಿಸಿದರು.
ಉಡುಪಿ: ಇಲ್ಲಿನ ಕಲ್ಯಾಣಪುರದ ಮಿಲಾಗ್ರಿಸ್ ಪಪೂ ಕಾಲೇಜಿನ 2026 - 27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತಿನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮುಕ್ತಾ ಬಾಯಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ವಂ. ಫ್ರಾನ್ಸಿಸ್ ಲುವಿಸ್ ಅವರು, ‘ನಾಯಕತ್ವವೆಂದರೆ ಅಧಿಕಾರವಲ್ಲ, ಜವಾಬ್ದಾರಿಯಿಂದ ಮುನ್ನಡೆಸುವ ಗುಣವಾಗಿದೆ. ಕಾಲೇಜು ಎಂಬ ಹಡಗನ್ನು ಯಶಸ್ವಿಯಾಗಿ ಮುನ್ನಡೆಸುವ ಹೊಣೆ ವಿದ್ಯಾರ್ಥಿ ನಾಯಕರ ಮೇಲಿದೆ ಎಂದರು.ವಿದ್ಯಾರ್ಥಿ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಟಿಯಾನ ರೇಚಲ್ ಡಿಸೋಜ, ಉಪಾಧ್ಯಕ್ಷರಾದ ಅಲೀಜಾ ಫಾತಿಮಾ, ಪ್ರತ್ವೀಶ್ ಮೈಂದನ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಹರ್ಷಿತಾ ಪಿ., ರಾಜ್‌ಮಿನ್ ಅಲಿಶಾ, ಕ್ರೀಡಾಕಾರ್ಯದರ್ಶಿಗಳಾದ ಆದಿತ್ಯ, ಚೈತಾ ಪೂಜಾರಿ ಅವರಿಗೆ ಪ್ರಾಂಶುಪಾಲರಾದ ರೆ.ಫಾ. ಮೆಲ್ವಿನ್ ಮೆಂಡೊನ್ಸಾ ಎಸ್.ಜೆ. ಪ್ರಮಾಣವಚನ ನಡೆಸಿದರು.
ವಿದ್ಯಾರ್ಥಿ ಪರಿಷತ್ತಿನ ನಿರ್ದೇಶಕ ಸುರೇಶ್ ಹೆಗ್ಡೆ, ರೀನಾ ಫೆರ್ನಾಂಡಿಸ್ ಹಾಗೂ ಉಪಸ್ಥಿತರಿದ್ದರು. ಪ್ರೀಯಾಲ್ ಲಸ್ರಾದೊ ಕಾಯಕ್ರಮ ನಿರೂಪಿಸಿ, ಟೀಯಾನ ರೇಚಲ್ ಡಿಸೋಜ ವಂದಿಸಿದರು.