ಸಾರಾಂಶ
ಬಾಳೆಹೊನ್ನೂರು ಸಮೀಪದ ಸೀಗೋಡು ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸೋಮವಾರ ಪತಂಗಗಳ ಉದ್ಯಾನವನ ಉದ್ಘಾಟನೆ ಮಾಡಲಾಯಿತು.
ಸೀಗೋಡು ನವೋದಯ ಶಾಲೆಯಲ್ಲಿ ಪ್ರಾರಂಭ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಮೀಪದ ಸೀಗೋಡು ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸೋಮವಾರ ಪತಂಗಗಳ ಉದ್ಯಾನವನ ಉದ್ಘಾಟನೆ ಮಾಡಲಾಯಿತು.ವಿದ್ಯಾಲಯದ ಪ್ರಾಚಾರ್ಯ ಆರ್. ಪ್ರೇಮ್‌ಕುಮಾರ್ ಮಾತನಾಡಿ, 1997-2004ನೇ ಬ್ಯಾಚಿನ ವಿದ್ಯಾರ್ಥಿಗಳ ನೆರವು ಮತ್ತು ಕಾರ್ಕಳದ ಸಮ್ಮಿಲನ್ ಶೆಟ್ಟಿಯವರ ಸಲಹೆ, ಸಹಕಾರಗಳೊಂದಿಗೆ ಪತಂಗಗಳ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಪತಂಗಗಳನ್ನು ಆಕರ್ಷಿಸಲು ವಿವಿಧ ಜಾತಿಯ ಸಸ್ಯ ವರ್ಗಗಳನ್ನು ಬೆಳೆಸಲಾಗಿದೆ ಎಂದು ತಿಳಿಸಿದರು.
ವಿದ್ಯಾಲಯದ ಪತಂಗಗಳ ಉದ್ಯಾನವನದಲ್ಲಿ ಪತಂಗ ವೀಕ್ಷಣಾ ತಂಡವು 112 ಜಾತಿಯ ಪತಂಗಗಳನ್ನು ಪತ್ತೆ ಹಚ್ಚಿದ್ದು, ಇನ್ನೂ ಹೆಚ್ಚಿನ ಜಾತಿಯ ಪತಂಗಗಳನ್ನು ಇಲ್ಲಿ ನಿರೀಕ್ಷಿಸಬಹುದಾಗಿದೆ. ಈ ಉದ್ಯಾನವನವು ಚಿಕ್ಕ ಜೀವ ವೈವಿಧ್ಯತೆಯ ಉದ್ಯಾನವನವಾಗಿದ್ದು, ಸಸ್ಯಗಳು, ಕೀಟಗಳು, ಪತಂಗಗಳು ಮತ್ತು ಪಕ್ಷಿಗಳ ಬಗೆಗಿನ ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದರು.ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಾದ ಡಾ.ಪುಟ್ಟಮ್ಮ, ಸನ್ನಿ ಜೋಸೆಫ್ ಉದ್ಯಾನವನವನ್ನು ಉದ್ಘಾಟಿಸಿದರು. ವಿದ್ಯಾಲಯದ ಉಪ ಪ್ರಾಚಾರ್ಯರಾದ ಶ್ರೀಕಲಾ ಮತ್ತಿತರರು ಹಾಜರಿದ್ದರು.
-------------------೩೦ಬಿಹೆಚ್‌ಆರ್ ೧ಬಾಳೆಹೊನ್ನೂರು ಸಮೀಪದ ಸೀಗೋಡಿನ ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪತಂಗಗಳ ಉದ್ಯಾನವನವನ್ನು ಉದ್ಘಾಟಿಸಲಾಯಿತು. ಪ್ರಾಚಾರ್ಯರಾದ ಪ್ರೇಮ್‌ಕುಮಾರ್, ಉಪ ಪ್ರಾಚಾರ್ಯರಾದ ಶ್ರೀಕಲಾ, ಪುಟ್ಟಮ್ಮ, ಸನ್ನಿಜೋಸೆಫ್ ಇದ್ದರು.