ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

| Published : Aug 24 2024, 01:41 AM IST

ಸಾರಾಂಶ

ಇಳಕಲ್ಲ ನಗರ ಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾರಾಣಿ ಸಂಗಮ ಇವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಗರಸಭೆಯ ಅದ್ಯಕ್ಷರ ಕೋಠಡಿಯಲ್ಲಿ ತಮ್ಮ ಅಧಿಕಾರವನ್ನು ದೇವರ ಪೂಜೆ ಮಾಡಿಸುವದರ ಮೂಲಕ ಅಧಿಕಾರ ಸ್ವಿಕಾರ ಮಾಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಳಕಲ್ಲ ನಗರ ಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಧಾರಾಣಿ ಸಂಗಮ ಇವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಗರಸಭೆಯ ಅದ್ಯಕ್ಷರ ಕೋಠಡಿಯಲ್ಲಿ ತಮ್ಮ ಅಧಿಕಾರವನ್ನು ದೇವರ ಪೂಜೆ ಮಾಡಿಸುವದರ ಮೂಲಕ ಅಧಿಕಾರ ಸ್ವಿಕಾರ ಮಾಡಿದರು. ಇವರೊಂದಿಗೆ ಉಪಾದ್ಯಕ್ಷರಾಗಿ ಆಯ್ಕೆಯಾದ ಕಾಳಮ್ಮ ಜಕ್ಕಾ ಇವರು ಸಹ ಪೂಜೆ ಮಾಡಿಸಿ ತಮ್ಮ ಅಧಿಕಾರ ಸ್ವೀಕಾರ ಮಾಡಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಉದ್ದೇಶಿಸಿ ನಗರದ ಹಿರಿಯರಾದ ಅರುಣ ಬಿಜ್ಜಲ ಮಾತನಾಡಿ, ಕಾಂಗ್ರೆಸ್‌ ಪಕ್ಷ ನುಡಿದಂತ್ತೆ ನಡೆದ ಪಕ್ಷ. ನಮ್ಮ ಪಕ್ಷ ಇಂತಹ ದೊಡ್ಡ ನಗರದ ಆಡಳಿತವನ್ನು ಮಹಿಳೆಯರಿಗೆ ನೀಡುವುದರ ಮೂಲಕ ಈ ಪಕ್ಷ ಮಹಿಳೆಯರಿಗೆ ಉನ್ನತ ಸ್ಥಾನ ಕೊಡುತ್ತಿದೆ ಎಂದು ನುಡಿದರು.

ಈ ವೇಳೆ ಕಾಂಗ್ರೆಸ್‌ ಪಕ್ಷದ ಸದಸ್ಯರಾದ ಸುರೇಶ ಜಂಗ್ಲಿ, ಮೌಲಪ್ಪ ಬಂಡಿವಡ್ಡರ, ಅಮೃತ ಬಿಜ್ಜಲ, ಡಾ.ಸದಾಶಿವ ಕನಕೇರಿ, ಶರಣಪ್ಪ ಅಮರಾವತಿ, ಹುಸೇನಸಾಬ ಬಾಗವಾನ, ರೇಷ್ಮಾ ಮಾರನಬಸರಿ, ಲಕ್ಷ್ಮಿಬಾಯಿ ಹಾದಿಮನಿ, ಶರಣಮ್ಮ ತಿಮ್ಮಾಪುರ ಇತರರು ಇದ್ದರು.

--