ಶಂಕರಪುರ: ರೋಟರಿ ಕಾರ್ಯಾಗಾರ ಮೊದಲ ಹೆಜ್ಜೆ ಉದ್ಘಾಟನೆ

| Published : Mar 19 2024, 12:51 AM IST

ಶಂಕರಪುರ: ರೋಟರಿ ಕಾರ್ಯಾಗಾರ ಮೊದಲ ಹೆಜ್ಜೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಟರಿ ಸಂಸ್ಥೆ ಅತ್ಯಂತ ಕಿರಿಯ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಸೇವಾ ಕಾರ್ಯಯೋಜನೆಗಳನ್ನು ರೂಪಿಸಿ ವಿಶ್ವಮಾನ್ಯ ಸಂಸ್ಥೆಯಾಗಿ ಬೆಳೆದಿದೆ.

ಕನ್ನಡಪ್ರಭ ವಾರ್ತೆ ಕಾಪು119 ವರ್ಷಗಳ ಸೇವಾ ಇತಿಹಾಸವನ್ನು ಹೊಂದಿದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಇಂದು ಜಗತ್ತಿನಲ್ಲಿ ಅತ್ಯಂತ ಹಿರಿಯ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಆರೋಗ್ಯ, ಹಸಿವು, ಶಿಕ್ಷಣ ಹಾಗೂ ಮಾನವೀಯ ನೆಲೆಯಲ್ಲಿ ವಿಶ್ವದಾದ್ಯಂತ ಸೇವಾ ಕಾರ್ಯಯೋಜನೆಗಳನ್ನು ರೂಪಿಸಿ ವಿಶ್ವಮಾನ್ಯ ಸಂಸ್ಥೆಯಾಗಿ ಬೆಳೆದಿದೆ. ರೋಟರಿ ಪ್ರತಿಷ್ಠಾನದ ಮೂಲಕ ಅತ್ಯಂತ ಪಾರದರ್ಶಕವಾಗಿ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರೋಟರಿ ಅ.ಜಿ.3180 ಇದರ ಮಾಜಿ ಗವರ್ನರ್ ಡಾ.ಎ.ಭರತೇಶ್ ನುಡಿದರು.

ಅವರು ಇಲ್ಲಿನ ಶಂಕರಪುರ ರೋಟರಿ ಆಶ್ರಯದಲ್ಲಿ ರೋಟರಿ ಸಭಾಭವನದಲ್ಲಿ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ವಲಯ 5ರ 2024-25ನೇ ಸಾಲಿನ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಏರ್ಪಡಿಸಿದ ರೋಟರಿ ವಲಯ ತರಬೇತಿ ಕಾರ್ಯಾಗಾರ ‘ಮೊದಲ ಹೆಜ್ಜೆ’ಯನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳು ಕಾರ್ಯಾಗಾರದ ಪೂರ್ಣ ಪ್ರಯೋಜನವನ್ನು ಪಡೆದು ಹೊಸತನದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವಂತೆ ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್, ಸೂರ್ಯಕಾಂತ್ ಶೆಟ್ಟಿ ಬೆಳ್ಮಣ್ ಭಾಗವಹಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಪುಂಡಲೀಕ ಮರಾಠೆ ಶಿರ್ವ, ಡಾ.ಅರುಣ್ ಹೆಗ್ಡೆ, ನವೀನ್ ಅಮೀನ್, ಶೈಲೇಂದ್ರ ರಾವ್, ವೇಣುಗೋಪಾಲ್ ನಿಟ್ಟೆ, ಜೈಕಿಶನ್ ಬ್ರಹ್ಮಾವರ ಭಾಗವಹಿಸಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಕಾರ್ಕಳ, ರೋಕ್‌ಸಿಟಿ, ನಿಟ್ಟೆ, ಬೆಳ್ಮಣ್ ಪಡುಬಿದ್ರಿ, ಉಚ್ಚಿಲ, ಕಾಪು, ಮಣಿಪುರ, ಶಂಕರಪುರ, ಶಿರ್ವ ರೋಟರಿ ಕ್ಲಬ್‌ಗಳಿಂದ ನೂತನ ಅಧ್ಯಕ್ಷ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರಪುರ ರೋಟರಿ ಅಧ್ಯಕ್ಷ ಜೋರ್ಜ್ ಡಿ.ಸಿಲ್ವ ವಹಿಸಿ ಸ್ವಾಗತಿಸಿದರು. ನಿಯೋಜಿತ ಸಹಾಯ ಗವರ್ನರ್ ಅನಿಲ್ ಡೇಸಾ ಶಂಕರಪುರ ಪ್ರಾಸ್ತಾವಿಕ ಮಾಹಿತಿ ನೀಡಿದರು. ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ಸಹಕರಿಸಿದರು. ಮಾಜಿ ಸಹಾಯಕ ಗವರ್ನರ್ ನವೀನ್ ಅಮೀನ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ವಿನ್ಸೆಂಟ್ ಸಲ್ಡಾನ್ಹಾ ವಂದಿಸಿದರು.