ಸಾರಾಂಶ
ಈ ಘಟಕದಲ್ಲಿ ೧ ರು.ಗೆ ೧ ಲೀ, ೫ ರು.ಗೆ ೫ ಲೀಟರ್, ೧೦ ರು. ನಾಣ್ಯ ಹಾಕಿ ೨೦ ಲೀ. ಶುದ್ಧ ಕುಡಿಯುವ ನೀರನ್ನು ಪಡೆಯಬಹುದು.
ಕನ್ನಡಪ್ರಭ ವಾರ್ತೆ ಮಂಗಳೂರು
ಇಲ್ಲಿನ ಕಾರ್‌ಸ್ಟ್ರೀಟ್‌ನ ಸ್ಥಳೀಯ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ವತಿಯಿಂದ ಬ್ಯಾಂಕ್ ಆವರಣದಲ್ಲಿ ಅಳವಡಿಸಿದ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ಸಂಸ್ಥೆಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎ.ಎಸ್. ವೆಂಕಟೇಶ್ ಉದ್ಘಾಟಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಗೆ ಈ ಘಟಕ ಪೂರಕವಾಗಿದೆ ಎಂದರು.ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಶೇಟ್, ದ.ಕ ಜಿಲ್ಲಾ ಕೋಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್, ಜನತಾ ಬಜಾರ್ ಅಧ್ಯಕ್ಷ ಪುರುಷೋತ್ತಮ ಭಟ್, ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್ ಆಚಾರ್ಯ, ಕಾಳಿಕಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಸಿದ್ಧಕಟ್ಟೆ ಇದ್ದರು. ಕಡಿಮೆ ಖರ್ಚಿನಲ್ಲಿ ಶುದ್ಧ ನೀರುಈ ಘಟಕದಲ್ಲಿ ೧ ರು.ಗೆ ೧ ಲೀ, ೫ ರು.ಗೆ ೫ ಲೀಟರ್, ೧೦ ರು. ನಾಣ್ಯ ಹಾಕಿ ೨೦ ಲೀ. ಶುದ್ಧ ಕುಡಿಯುವ ನೀರನ್ನು ಪಡೆಯಬಹುದು. ವಾಣಿಜ್ಯ ಸಂಸ್ಥೆಗಳು, ಸೇವಾ ಸಂಸ್ಥೆಗಳು ತಮ್ಮ ಬ್ರಾಂಡ್ ಹೆಚ್ಚಿಸುವ ನಿಟ್ಟಿನಲ್ಲಿ ಜಾಹಿರಾತು ಅಳವಡಿಕೆಗೂ ಈ ಘಟಕಗಳಲ್ಲಿ ಅವಕಾಶವಿರುವುದರಿಂದ ತಮ್ಮ ಸಂಸ್ಥೆಯ ವತಿಯಿಂದ ಕೊಡುಗೆಯಾಗಿಯೂ ಜನವಸತಿ ಪ್ರದೇಶಗಳಲ್ಲಿ ಅಳವಡಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.