ಸಾರಾಂಶ
ಬೆಂಗಳೂರು : ಸ್ಪರ್ಶ್ ಆಸ್ಪತ್ರೆ ಸಮೂಹದ ರಾಜರಾಜೇಶ್ವರಿ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ತಾಯಿ ಮತ್ತು ಮಗು ಆರೈಕೆ ವಿಭಾಗ ಆರಂಭವಾಗಿದೆ. ಗುರುವಾರ ನೂತನ ವಿಭಾಗ ಉದ್ಘಾಟಿಸಿದ ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ, ಮಹಿಳೆಯರು ಕುಟುಂಬದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬ ಮಗುವಿನ ಜೀವನದ ಪಯಣದ ಆರಂಭವೂ ಉತ್ತಮವಾದ ಅಡಿಪಾಯದೊಂದಿಗೆ ಆರಂಭಗೊಳ್ಳಬೇಕು ಎಂದರು.
ಸ್ಪರ್ಶ್ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಡಾ.ಶರಣ ಪಾಟೀಲ್ ಮಾತನಾಡಿ, ಮಗುವಿಗೆ ಜನ್ಮ ನೀಡುವುದು ಮಹಿಳೆಯರ ಆರೋಗ್ಯದ ಅತ್ಯಂತ ಪ್ರಮುಖ ಘಟ್ಟ. ಗರ್ಭಾವಸ್ಥೆಯಲ್ಲಿ ಉಂಟಾಗುವ ಸಂಕೀರ್ಣ ವೈದ್ಯಕೀಯ ಸವಾಲನ್ನು ನಿರ್ವಹಿಸಲು ನಮ್ಮ ತಾಯಿ ಮತ್ತು ಮಕ್ಕಳ ಆರೈಕೆ ಸೌಲಭ್ಯವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ವಿವರಿಸಿದರು.
ಮಕ್ಕಳ ಜನನ ಸಂದರ್ಭದಲ್ಲಿ ಹಲವು ವಿಭಾಗಗಳಲ್ಲಿ ಚಿಕಿತ್ಸೆಯ ಅಗತ್ಯತೆಗಳು ಹೆಚ್ಚುತ್ತಿವೆ. ಸಮಗ್ರ ಚಿಕಿತ್ಸೆ ಒಂದೇ ಸೂರಿನಡಿ ಸಿಗುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದರು. ಆರ್.ಆರ್. ನಗರದ ಸ್ಪರ್ಶ್ ಆಸ್ಪತ್ರೆ 400 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.