ರೈತರ ಫಸಲು ನಾಶ ತಡೆಗಟ್ಟಲು ಅರಣ್ಯ ಇಲಾಖೆ ಹೆಚ್ಚು ಗಮನ

| Published : Aug 22 2024, 12:47 AM IST

ಸಾರಾಂಶ

ಕಾಡಾಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ರೈತರ ಫಸಲುಗಳನ್ನು ನಾಶ ಪಡಿಸುತ್ತಿದ್ದು

ಕನ್ನಡಪ್ರಭ ವಾರ್ತೆ ನಂಜನಗೂಡುಗ್ರಾಮೀಣ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿ ರೈತರ ಫಸಲುಗಳನ್ನು ನಾಶವಪಡಿಸುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ಸಮೀಪದ ಹೆಡಿಯಾಲ ಗ್ರಾಮದಲ್ಲಿ ಆನೆ ಕಾರ್ಯಪಡೆ ವಸತಿ ಗೃಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಡಾಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ರೈತರ ಫಸಲುಗಳನ್ನು ನಾಶ ಪಡಿಸುತ್ತಿದ್ದು, ಸರ್ಕಾರ ರೈತರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಹೆಡಿಯಾಲ ಅರಣ್ಯ ಭಾಗಕ್ಕೆ 45 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಕಾಡಾಂಚಿ ಗ್ರಾಮಗಳಲ್ಲಿ ಮಹಿಳೆಯರಿಗೆ ರುಡ್ ಸೆಟ್ ಸಂಸ್ಥೆ ಯಿಂದ ಹೊಲಿಗೆ ತರಬೇತಿ ನೀಡಿ ಮಹಳೆಯರಿಗೆ ಸ್ವಾವಲಂಬನೆ ಜೀವನ ನಡೆಸಲು ಅವಕಾಶ ಸಿಕ್ಕಿದೆ ಪ್ರತಿಯೊಬ್ಬರು ಇಂತಹ ತರಬೇತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಆನೆ ತಡೆಗಟ್ಟಲು ಈಗಾಗಲೇ ರೇಲ್ವೆ ಕಂಬಿಗಳನ್ನು ಅಳವಡಿಸಲಾಗಿದೆ, ಒಂದು ಕಿ.ಮೀ. ದೂರ ಮೆಸ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದ ಜೊತೆ ಚರ್ಚೆ ಮಾಡಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿ, ಅರಣ್ಯ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ವಿಶ್ವಾಸ ಪಡೆದು ರೈತರ ಪರ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಇದೇ ವೇಳೆ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ, ಹಾಡಿ ವಿದ್ಯಾರ್ಥಿಗಳಿಗೆ ಸೋಲಾರ್ ವಿತರಿಸಲಾಯಿತು.ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಅರಣ್ಯ ಅಧಿಕಾರಿ ಪ್ರಭಾಕರ್, ಸತೀಶ್, ಆರ್.ಎಫ್.ಓ ನಾರಾಯಣ್, ಗ್ರಾಪಂ ಮಾಜಿ ಅಧ್ಯಕ್ಷ ನೆಹಮತ್ ಉಲ್ಲಾ ಖಾನ್, ಗ್ರಾಪಂ ಸದಸ್ಯ ಅರ್ಸಫ್ ಅಲಿ, ನಾಗರಾಜೇ ಗೌಡ, ರುಡ್ ಸೆಟ್ ಸಂಸ್ಥೆಯ ಸರೀತ, ಅರಣ್ಯ ಸಿಬ್ಬಂದಿಗಳಾದ ಮಹಾಂತೇಶ್, ರಘುನಾಥ್ ಇದ್ದರು.