ಸಾರಾಂಶ
ಕನ್ನಡಪ್ರಭ ವಾರ್ತೆ ಮೂಗೂರುಗ್ರಾಮೀಣ ಪತ್ರಕರ್ತರನ್ನು ಮೂರನೇ ದರ್ಜೆ ಪತ್ರಕರ್ತರಂತೆ ನೋಡುವ ಧೋರಣೆ ಇತ್ತು, ಇಂದು ಆ ದಿನ ಪರಿಸ್ಥಿತಿ ಮುಂದುವರಿದಿದ್ದರೆ ಚೆನ್ನಾಗಿರುತಿತ್ತು ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹೇಳಿದರು.ಪಟ್ಟಣದಲ್ಲಿ ನವೀಕರಿಸಲ್ಪಟ್ಟ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ ನೆರವೇರಿಸಿದ ನಂತರ ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕ ದಿ. ಕೆ.ಬಿ. ಗಣಪತಿ ಹಾಗೂ ಆಂದೋಲನ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕ ದಿ. ರಾಜಶೇಖರ ಕೋಟಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.ಮನುಷ್ಯನನ್ನು ಮನುಷ್ಯನಾಗಿ, ಪತ್ರಕರ್ತನನ್ನು ಪತ್ರಕರ್ತನಾಗಿ ನೋಡಬೇಕು. ನಗರ ಮತ್ತು ಗ್ರಾಮೀಣ ಪತ್ರಕರ್ತರ ನಡುವೆ ಯಾವುದೇ ತಾರತಮ್ಯ ಇರಬಾರದು. ನಗರ ಪತ್ರಕರ್ತರಿಗೆ ಸಿಗುವ ಸೌಲಭ್ಯಗಳು ಗ್ರಾಮೀಣ ಪತ್ರಕರ್ತರಿಗೂ ದೊರೆಯಬೇಕು ಅನ್ನುವ ದೃಷ್ಟಿಯಿಂದ ಕೆಲವರನ್ನು ಕೈ ಹಿಡಿದು ಕರೆದು ಕೊಂಡು ಬಂದು ಪರಿಚಯಿಸಿ ಜಿಲ್ಲಾ ಸಂಘದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ ಅವರಿಂದ ನಾವು ನಿರೀಕ್ಷೆ ಮಾಡಿದ್ದು ಏನು ಇಲ್ಲ, ಆದರೆ ಅವರು ತಾಲೂಕು ಸಂಘಗಳ ಗೌರವ ಘನತೆಯನ್ನು ಮುಂದಿನ ದಿನಗಳಲ್ಲಿ ಎತ್ತಿ ಹಿಡಿಯುತ್ತಾ ಹೋಗುತ್ತಾರೆ ಎಂದು ಭಾವಿಸಲಾಗಿತ್ತು, ಅದು ಹುಸಿ ಆಗಿದೆ ಈಗ ಜಿಲ್ಲಾ ಸಂಘಗಳಲ್ಲಿ ಹಿಂದೆ ಇದ್ದ ಪರಿಸ್ಥಿತಿ ಇದ್ದಿದ್ದರೆ ಎಲ್ಲವು ಸರಿ ಇತ್ತು ಅನ್ನಿಸುತ್ತೆ ಎಂದರು.ನರಸೀಪುರದ ಪತ್ರಕರ್ತ ಮಂಜುನಾಥ್ ಅವರ ಅಕಾಲಿಕ ಮರಣ ಹೊಂದಿದ್ದಾಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಂದಿನ ಜಿಲ್ಲಾ ಪತ್ರಕರ್ತರ ಸಂಘದ ಪರಿಶ್ರಮದಿಂದ, ಸರ್ಕಾರ ಆ ಕುಟುಂಬಕ್ಕೆ 5 ಲಕ್ಷ ರು. ಸಹಾಯಧನ ನೀಡುವಂತೆ ಮಾಡಿಸಲಾಯಿತು ಹಾಗಾಗಿ ನನಗೆ ವ್ಯಕ್ತಿಗಳಿಗಿಂತ ಸಂಘವೇ ಮುಖ್ಯ ಎಂದರು.ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ಒಗ್ಗಟ್ಟಿನ ಕೊರತೆಯಿಂದ ಇತ್ತೀಚಿನವರೆಗೂ ಟಿ. ನರಸೀಪುರದಲ್ಲಿ ಸಂಘ ರಚನೆ ಆಗಿರಲಿಲ್ಲ. ಸಂಘಕ್ಕೆ ನೆಲೆ ಕೂಡ ಇರಲಿಲ್ಲ. ಆದರೆ ಕೆ. ದೀಪಕ್ ಜಿಲ್ಲಾ ಸಂಘಕ್ಕೆ ಅಧ್ಯಕ್ಷರಾದ ನಂತರ ಅವರು ನೇತೃತ್ವದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಂಘ ರಚನೆಯಾಗಿದೆ ಮತ್ತು ಸಂಘಕ್ಕೆ ನೆಲೆ ಕೂಡ ದೊರಕಿದೆ ಎಂದು ಹೇಳಿದರು.ಗ್ರಾಮಾಂತರ ಉಪಾಧ್ಯಕ್ಷ ವೆಂಕಟಪ್ಪ ಹಾಗೂ ಗ್ರಾಮಾಂತರ ಕಾರ್ಯದರ್ಶಿ ದಾ.ರಾ. ಮಹೇಶ್ ಮಾತನಾಡಿದರು.ಹಿರಿಯ ಪತ್ರಕರ್ತರಾದ ಎಸ್.ಬಿ. ಪ್ರಕಾಶ್, ಎಂ. ನಾಗೇಂದ್ರ ಕುಮಾರ್, ಸಾಧಿಕ್ ಪಾಷ, ಎಂ.ಬಿ. ರಂಗಸ್ವಾಮಿ, ಟಿ.ಎಸ್. ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.ಟಿ. ನರಸೀಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಅಕ್ರಂಪಾಷ, ಉಪಾಧ್ಯಕ್ಷ ನಿಲಸೋಗೆ ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆಲಗೂಡು ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಬನ್ನೂರು ರಮೇಶ್, ಮುಗೂರು ರಂಗಸ್ವಾಮಿ, ಸದಸ್ಯರಾದ ಮುಗೂರು ರೇವಣ್ಣ, ಟಿ.ಎ. ಸಾದಿಕ್ ಪಾಷ, ಎನ್.ಎಸ್. ಧನುಷ್, ಕೇತಹಳ್ಳಿ ಬಸವರಾಜು, ಮಹದೇವಸ್ವಾಮಿ, ಟಿ.ಎಸ್. ಪ್ರಸನ್ನ, ಎಸ್. ರಮೇಶ್, ಎಂ. ಶಿವರಾಜು, ಬಿ.ಆರ್. ರಾಜೇಂದ್ರ ಪ್ರಭು, ಬಿ.ಆರ್. ಮಂಜುನಾಥ್ ಪ್ರಭು, ತಲಕಾಡು ವೆಂಕಟೇಶ್ ಮೂರ್ತಿ, ಜಿ.ಗುಂಡಶೆಟ್ಟಿ, ಎಸ್.ಎಂ. ವಿನೋದ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರು ಇದ್ದರು.