ನಾಳೆ ನೂತನ ಬಂಟರ ಭವನ ಲೋಕಾರ್ಪಣೆ

| Published : Feb 09 2024, 01:45 AM IST

ಸಾರಾಂಶ

ಸುಮಾರು 25 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಿಸಲಾಗಿರುವ ಬಂಟರ ಭವನದಲ್ಲಿ ಸುಮಾರು 800 ಆಸನವುಳ್ಳ ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣವಿದೆ ಎಂದು ಸಂಘದ ಅಧ್ಯಕ್ಷ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಂಟರ ಸಂಘದಿಂದ ಗೋಪಾಲಗೌಡ ಬಡಾವಣೆಯ ನೂರಡಿ ರಸ್ತೆಯಲ್ಲಿ 10 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಂಟರ ಭವನದ ಲೋಕಾರ್ಪಣೆ ಸಮಾರಂಭವು ಫೆ.10ರಂದು ಸಂಜೆ 4ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2006ರಲ್ಲಿ ಬಂಟರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈಗ ಸಂಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಸುಮಾರು 25 ಸಾವಿರ ಚದರ ಅಡಿ ಜಾಗದಲ್ಲಿ ಭವನ ನಿರ್ಮಿಸಿದ್ದು, 800 ಆಸನವುಳ್ಳ ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣವಿದ್ದು, 12 ಕೊಠಡಿಗಳಿವೆ. 400 ಜನ ಕುಳಿತು ಊಟ ಮಾಡುವ ಭೋಜನಾಲಯವಿದೆ. ಸಂಸದರು ಸೇರಿದಂತೆ ಸ್ಥಳೀಯ ಶಾಸಕರಿಂದ 4.50 ಕೋಟಿ. ರು. ಅನುದಾನ ಬಂದಿದ್ದು, ಉಳಿದ ಹಣವನ್ನು ಸಮಾಜದ ಮುಖಂಡರು ಭರಿಸಿದ್ದಾರೆ. ಬೆಂಗಳೂರಿನ ಎಂಆರ್‌ಜಿ ಗ್ರೂಫ್‌ನ ಕೆ.ಪ್ರಕಾಶ್‌ಶೆಟ್ಟಿ 50 ಲಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ 50 ಲಕ್ಷ ರು. ದೇಣಿಗೆ ನೀಡಿದ್ದಾರೆ ಎಂದು ಮಾಹಿತಿ ಹೇಳಿದರು,ಸಭಾಭವನವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಭೋಜನಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ, ದಾನಿಗಳ ಪೋಟೋ ಗ್ಯಾಲರಿಯನ್ನು ಬೆಂಗಳೂರಿನ ಎಂ.ಆರ್.ಜಿ. ಗ್ರೂಫ್‌ನ ಕೆ.ಪ್ರಕಾಶ್‌ಶೆಟ್ಟಿ , ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ಆಡಳಿತ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜಶೆಟ್ಟಿ ಗಂಟಿಹೊಳೆ, ಹರೀಶ್ ಪೂಂಜಾ, ಅಶೋಕ್ ರೈ, ಭಾರತಿ ಶೆಟ್ಟಿ, ಮುಂಬೈನ ಕೈಗಾರಿಕೋದ್ಯಮಿ ಮಂಡಗದ್ದೆ ಅಡ್ಡಮನೆ ಪ್ರಕಾಶ್‌ಶೆಟ್ಟಿ, ಚಿಕ್ಕಮಗಳೂರಿನ ಲೈಪ್‌ಲೈನ್ ಫೀಡ್ಸ್ ಪ್ರೈ.ಲಿ., ಛೇರ್‍ಮನ್ ಕಿಶೋರ್‌ಕುಮಾರ್ ಹೆಗಡೆ ಸೇರಿದಂತೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಕೆ.ಸುರೇಶ್ ಕುಮಾರ್, ಸಿಮ್ಸ್ ಮಾಜಿ ಸದಸ್ಯ ದಿವಾಕರ್ ಶೆಟ್ಟಿ, ಉಪಾಧ್ಯಕ್ಷ ವೈ.ವಿ.ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಖಜಾಂಚಿ ಸುರೇಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸಹ ಕಾರ್ಯದರ್ಶಿ ರಾಜೀವ್ ಶೆಟ್ಟಿ, ಪುಷ್ಪ ಎಸ್.ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಾಜ್ ಮೋಹನ್ ಹೆಗ್ಡೆ, ರಮೇಶ ಶೆಟ್ಟಿ, ಕುಶಾಲ್ ಶೆಟ್ಟಿ, ಪರಮೇಶ್ವರ ಶೆಟ್ಟಿ ಮಂಜುನಾಥ ಶೆಟ್ಟಿ ಇದ್ದರು.