ಶ್ರೀಕ್ಷೇತ್ರ ಕಬ್ಬಳಿ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನ. ೧೪ರಿಂದ ನ.೧೬ರವರೆಗೆ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲದ ಲೋಕಾರ್ಪಣೆ, ಮಹಾ ಕುಂಭಾಭಿಷೇಕ ಹಾಗೂ ನ. ೨೧ರಿಂದ ನ.೨೫ ರವರಿಗೆ ಬೃಹತ್ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದರು.ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಕೃಪಾಶೀರ್ವಾದದೊಂದಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ದೇಗುಲ ಲೋಕಾರ್ಪಣೆ ಹಾಗೂ ಬೃಹತ್ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕನಸು ಹಾಗೂ ಆಶಯದಂತೆ ಭಕ್ತರ ಸಹಕಾರದೊಂದಿಗೆ ಶ್ರೀಕ್ಷೇತ್ರದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ಆದಿಚುಂಚನಗಿರಿ ಹಾಸನ-ಕೊಡಗು ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನ. ೧೪ರಿಂದ ನ.೧೬ರವರೆಗೆ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲದ ಲೋಕಾರ್ಪಣೆ, ಮಹಾ ಕುಂಭಾಭಿಷೇಕ ಹಾಗೂ ನ. ೨೧ರಿಂದ ನ.೨೫ ರವರಿಗೆ ಬೃಹತ್ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದರು. ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಕೃಪಾಶೀರ್ವಾದದೊಂದಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ದೇಗುಲ ಲೋಕಾರ್ಪಣೆ ಹಾಗೂ ಬೃಹತ್ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು. ನ.14ನೇ ಶನಿವಾರ ಸಾಯಂಕಾಲ 5 ಗಂಟೆಗೆ ಸಲ್ಲುವ ಗೋದೋಳಿ ಲಗ್ನದಲ್ಲಿ ಮಂಗಳವಾದ್ಯ, ಗುರು ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಶ್ರೀ ಸ್ವಾಮಿಯವರ ಅನುಜ್ಞಾ ಪೂಜೆ, ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾವಾಚನ, ಪಂಚಗವ್ಯ, ಮಹಾಸಂಕಲ್ಪ, ವಾಸ್ತು ಶಾಂತಿ, ವಾಸ್ತು ಪರ್ಯಾಯಂಗೀಕರಣ, ವಾಸ್ತು ಬಲಿ, ಗ್ರಾಮ ಶಾಂತಿ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ವಿನಿಯೋಗ ನಡೆಯಲಿದೆ ಎಂದರು.ನವೆಂಬರ್ ೧೫ನೇ ಭಾನುವಾರ ಸಾಯಂಕಾಲ ೪ ಗಂಟೆಗೆ ಮಂಗಳವಾದ್ಯ, ವೇದ ಪಾರಾಯಣ, ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ವಿಶೇಷ ಸಂಧಿ, ಭೂತ ಶುದ್ದಿ, ಅಂಕುರಾರ್ಪಣ, ರಕ್ಷಾ ಬಂಧನ, ಕುಂಭಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು ರಾತ್ರಿ ೧೦.೩೦ಕ್ಕೆ ವಿಗ್ರಹಗಳಿಗೆ ನವರತ್ನ ನ್ಯಾಸ ಪೂರ್ವಕ ಯಂತ್ರ ಸ್ಥಾಪನೆ, ರಜತಾ ಹಾಗೂ ಸುವರ್ಣ ಚಕ್ರ ಸ್ಥಾಪನೆ, ಅಷ್ಟ ಬಂಧನ ಸಮರ್ಪಣೆ ಕಾರ್ಯ ಜರುಗಲಿದೆ ಎಂದು ತಿಳಿಸಿದರು. ನ. ೧೬ನೇ ಸೋಮವಾರ ಬೆಳಗ್ಗೆ ೫.೩೦ ಕ್ಕೆ ವಾದ್ಯ, ವೇದ ಪಾರಾಯಣ, ರುದ್ರ ಪಾರಾಯಣ, ಗಣಪತಿ ಪೂಜೆ ಪುಣ್ಯಹ, ಪಂಚಗವ್ಯ, ಬಿಂಬಶುದ್ದಿ, ಯೋಗ ಶಾಲಾ ಪೂಜೆಗಳು, ಶ್ರೀ ಬಸವೇಶ್ವರ ಸ್ವಾಮಿಯವರ ಮೂಲ ಮಂತ್ರ ಹೋಮ ಹಾಗೂ ೮.೩೦ ಕ್ಕೆ ದ್ರವ್ಯಾಹುತಿ, ಮಹಾಪೂರ್ಣಾಹುತಿ, ಕಳಶ ಉದ್ವಾಸನೆ, ದೇವಾಲಯ ಪ್ರದಕ್ಷಿಣ ಪೂರ್ವಕ ಕಾರ್ಯ ಕೈಗೊಳ್ಳಲಾಗುವುದು ಎಂದರು. ಬೆಳಗ್ಗೆ ೯.೩೦ರಿಂದ ೧೦ ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರಿಗೆ ಮಹಾ ಕುಂಭಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಅಲಂಕಾರ ಮಂತ್ರ ಪುಷ್ಪ, ಅಷ್ಟಾವಧಾನ ಸೇವೆ, ಕೂಂಡ ಕದಳಿ, ಛೇದನ, ಧಾನ್ಯ, ದೇನು, ದರ್ಪಣ, ದರ್ಶನ, ಬಲಿ ಪೂಜೆ, ಮಹಾ ಮಂಗಳಾರತಿ ನಂತರ ಅನ್ನದಾಸೋಹ ನಡೆಯಲಿದೆ. ನ. ೨೧ರಿಂದ ನ.೨೫ ರವರಿಗೆ ಶ್ರೀ ಬಸವೇಶ್ವರ ಸ್ವಾಮಿಯ ಬೃಹತ್ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಆಗಮನದೊಂದಿಗೆ ಎಂದಿನಂತೆಯೇ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಿಯ ಉತ್ಸವ, ಸರ್ಪೋತ್ಸವ, ಚುಂಚಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ಜರುಗಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಯತಿವರೇಣ್ಯರು ಮತ್ತು ಧಾರ್ಮಿಕ ಮುಖಂಡರು ಜನಪ್ರತಿನಿಧಿಗಳು ಹಾಗೂ ಶ್ರೀಮಠದ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.