ಸಾರಾಂಶ
ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವು ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ(ಒಸಿಟಿ) ಯಂತ್ರವನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಬೆಂಗಳೂರು ಹೊರತುಪಡಿಸಿದರೆ ಈ ಯಂತ್ರ ಅಳವಡಿಸಿದ ರಾಜ್ಯದ ಎರಡನೇ ಆಸ್ಪತ್ರೆ ಎಂಬ ಹೆಗ್ಗಳಿಗೆ ಎ.ಜೆ.ಆಸ್ಪತ್ರೆಯದ್ದಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಎ.ಜೆ.ಆಸ್ಪತ್ರೆ ಹೃದಯ ವಿಭಾಗದಲ್ಲಿ ರೋಗಿಗಳ ಉತ್ತಮ ರೋಗ ನಿರ್ಣಯ ಮತ್ತು ಆರೈಕೆಗೆ ಸಹಾಯ ಮಾಡುವ ಮೂರು ವಿಶಿಷ್ಟ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ. ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀಲಕ್ಷ್ಮಿಮೆಮೋರಿಯಲ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅವರು ಉದ್ಘಾಟಿಸಿದರು. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವು ಆಪ್ಟಿಕಲ್ ಕೊಹರೆನ್ಸ್ ಟೋಮೋಗ್ರಫಿ(ಒಸಿಟಿ) ಯಂತ್ರವನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಬೆಂಗಳೂರು ಹೊರತುಪಡಿಸಿದರೆ ಈ ಯಂತ್ರ ಅಳವಡಿಸಿದ ರಾಜ್ಯದ ಎರಡನೇ ಆಸ್ಪತ್ರೆ ಎಂಬ ಹೆಗ್ಗಳಿಗೆ ಎ.ಜೆ.ಆಸ್ಪತ್ರೆಯದ್ದಾಗಿದೆ. ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ನಿರ್ದೇಶಕರಾದ ಡಾ.ಅಮಿತ್ ಮಾರ್ಲ, ಡಾ.ಅಶೋಕ್ ಹೆಗ್ಡೆ, ಡಾ.ಮಂಜುನಾಥ್, ಡಾ.ಪುರುಷೋತ್ತಮ್, ಡಾ.ಪ್ರವೀಣ್ ಶೆಟ್ಟಿ, ಡಾ. ಪ್ರೇಮ್ ಆಳ್ವ ಇದ್ದರು.