ಸಾರಾಂಶ
ಮನುಷ್ಯನ ಆರ್ಥಿಕ ಬೆಳವಣಿಗೆಗೆ ಸಹಕಾರ ಸಂಘಗಳು ಹೆಮ್ಮರವಾಗಿ ನಿಂತು ಸಹಾಯ ಮಾಡುತ್ತಿವೆ. ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಣೆಗೊಳಿಸುವಲ್ಲಿ ಸಹಕಾರಿ ಸಂಘಗಳು ಅತ್ಯಂತ ಮಹತ್ವವಾದ ಪಾತ್ರ ವಹಿಸುತ್ತವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ಸೌಹಾರ್ದ ಸಹಕಾರ ಸಂಘಗಳು ಸರ್ವರಿಗೂ ಸಮಪಾಲನ್ನು ದೊರಕಿಸಿಕೊಡುವುದರಲ್ಲಿ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಅನಿತಾ ಹೇಳಿದರು.ತಾಲೂಕಿನ ಭಾರತೀನಗರದಲ್ಲಿ ವಂಶಿ ಸೌಹಾರ್ದ ಸಹಕಾರ ಸಂಘ ನಿಯಮಿತ (ರಿ) ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರ್ಥಿಕ ಬೆಳವಣಿಗೆಗೆ ಸಹಕಾರ ಸಂಘಗಳು ಹೆಮ್ಮರವಾಗಿ ನಿಂತು ಸಹಾಯ ಮಾಡುತ್ತಿವೆ. ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಣೆಗೊಳಿಸುವಲ್ಲಿ ಸಹಕಾರಿ ಸಂಘಗಳು ಅತ್ಯಂತ ಮಹತ್ವವಾದ ಪಾತ್ರ ವಹಿಸುತ್ತವೆ ಎಂದರು.
ಸಂಘದ ಅಧ್ಯಕ್ಷ ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೆಕ್ಕಪರಿಶೋಧಕ ಎನ್.ರವಿಕುಮಾರ್ ಗಣಕಯಂತ್ರ ಉದ್ಘಾಟಿಸಿದರು. ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಜೆ.ಗುರುರಾಜ್, ಷೇರುದಾರರಾದ ಎಂ. ಮಾಯಪ್ಪ, ಟಿ.ಎಸ್.ಮೋಹನ್ ಕುಮಾರ್ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.25 ರಂದು ವೀರಶೈವ ಮಹಾಸಭಾ ಸಾಮಾನ್ಯ ಸದಸ್ಯರ ಚುನಾವಣೆಮಂಡ್ಯ: ಅಖಿಲ ಭಾರತ ವೀರಶೈವ ಮಹಾಸಭಾ, ಕರ್ನಾಟಕ ರಾಜ್ಯ ಘಟಕದ ಸಾಮಾನ್ಯ ಸದಸ್ಯರ ಚುನಾವಣೆ ಆ.25 ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಜಿಲ್ಲೆಯ ಎಲ್ಲಾ ಏಳೂ ತಾಲೂಕುಗಳ ಮತದಾನ ನಗರದ ಮೈಸೂರು- ಬೆಂಗಳೂರು ಹೆದ್ದಾರಿಯ ಗಿರಿಜಾ ಚಿತ್ರಮಂದಿರದ ಪಕ್ಕದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿದೆ. ಕಾರ್‍ಯನಿರ್ವಾಹಕ ಸಮಿತಿ 27 ಸ್ಥಾನಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 57 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮಹಾಸಭೆಯ ಉಪ ಫೋಷಕ (2500/-) ಹಾಗೂ ಮೇಲ್ಹಂತದ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಒಬ್ಬರು 27 ಜನರಿಗೆ ಗರಿಷ್ಠ ಮತ ಚಲಾಯಿಸಲು ಹಕ್ಕುಳ್ಳವರಾಗಿದ್ದಾರೆ. ಅದೇ ದಿನ ಮತಗಳ ಎಣಿಕೆ ಕಾರ್‍ಯವೂ ನಡೆಯಲಿದೆ. ಎಲ್ಲಾ ಜಿಲ್ಲಾ ಮತ ಕೇಂದ್ರಗಳಿಂದ ವರದಿಗಳನ್ನು ಪಡೆದು ಅಂತಿಮವಾಗಿ ಮತ ಕೇಂದ್ರಗಳಿಂದ ಸ್ವೀಕರಿಸಿದ ಮತಗಳನ್ನು ಕ್ರೋಢೀಕರಿಸಿ ವಿಜಯಶಾಲಿ ಅಭ್ಯರ್ಥಿಗಳ ಹೆಸರನ್ನು ಬೆಂಗಳೂರಿನಲ್ಲಿರುವ ಮಹಾಸಭೆ ಕಚೇರಿಯಲ್ಲಿ ಘೋಷಿಸಲಾಗುತ್ತದೆ. ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸುವಂತೆ ಮಹಾಸಭಾದ ಜಿಲ್ಲಾ ಘಟಕದ ಚುನಾವಣಾಧಿಕಾರಿ ಟಿ.ಕೆ. ಶಿವಪ್ರಕಾಶ್, (ಮೊ 9900622281, ಆನಂದ್ ತಾಳಶಾಸನ ಮೊ-94499119999 ತಿಳಿಸಿದ್ದಾರೆ.