ಸಾರಾಂಶ
- ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನ ಮಂಟಪ ಇನ್ನೂ ಜಲಾವೃತ
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ಮಳೆಯ ಆರ್ಭಟ ಗುರುವಾರವೂ ಮುಂದುವರಿದು ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ರಸ್ತೆ ಸಂಪರ್ಕಗಳು ಕಡಿತ, ಗುಡ್ಡ ಕುಸಿತ, ಮರ ಬಿದ್ದ ಘಟನೆಗಳು ಹೆಚ್ಚಾಗಿ ವರದಿಯಾಗಿದೆ.
ಗುರುವಾರವೂ ಮಳೆ ಬಂದಿದ್ದು, ತುಂಗಾ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಕೆವಿಆರ್ ವೃತ್ತ ಭಾರತೀ ಬೀದಿ ಸಂಪರ್ಕ ಬೈಪಾಸ್ ರಸ್ತೆಯ ಮೇಲೆ ತುಂಗೆಯ ಪ್ರವಾಹ ಇಳಿದಿರಲಿಲ್ಲ. ಶ್ರೀ ಮಠದ ತುಂಗಾ ನದಿ ತೀರದಲ್ಲಿದ್ದ ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನ ಮಂಟಪ ಇನ್ನೂ ಜಲಾವೃತಗೊಂಡಿತ್ತು.ಭಾರೀ ಮಳೆಯಿಂದ ಮಂಗಳೂರು ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಮೀಪದ ನೆಮ್ಮಾರು ಎಸ್ಟೇಟ್ ಮದ್ಯ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ರಸ್ತೆ ಬಿರುಕು ಬಿಟ್ಟಿರುವುದರಿಂದ ಪ್ರಯಾಣಿಕರಲ್ಲಿ ಭೀತಿ ಎದುರಾಗಿದೆ. ಸಮೀಪದಲ್ಲಿಯೇ ತುಂಗಾ ನದಿಯ ಪ್ರವಾಹ ಉಕ್ಕಿ ಹರಿಯುತ್ತಿದ್ಜು ಇದು ಇನ್ನಷ್ಟು ಅಪಾಯಕಾರಿ ವಲಯವಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ತ್ಯಾವಣ ಬಳಿಯೂ ಗುಡ್ಡಕುಸಿಯುತ್ತಿದ್ದು, ಮರಗಳು ರಸ್ತೆಗುರುಳಿ ಬೀಳುತ್ತಿವೆ. ಮಳೆ ನಿರಂತರವಾಗಿರುವುದರಿಂದ ಗುಡ್ಡಕುಸಿತದ ಮಣ್ಣು ರಸ್ತೆ ಮೇಲೆ ಬೀಳುತ್ತಿದೆ.ಮರಗಳು ಬೀಳುತ್ತಿದ್ದು ಸಂಚಾರಕ್ಕೆ ಅಡಚಣೆ ಯಾಗುತ್ತಿದೆ.ಮಳೆ ಗಾಳಿ ಮುಂದುವರಿದಿತ್ತು.ತಗ್ಗು ಪ್ರದೇಶಗಳೆಲ್ಲ ಮುಳುಗಡೆಯಾಗಿದ್ದು ಹೊಲಗದ್ದೆ, ಜಮೀನುಗಳು ಇನ್ನೂ ಪ್ರವಾಹದಲ್ಲಿ ಮುಳುಗಡೆಯಾಗಿಯೇ ಇತ್ತು. ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹದ ಮಟ್ಟ ಏರಿಳಿತವಾಗುತ್ತಿದೆ. ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತಿದೆ.
18 ಶ್ರೀ ಚಿತ್ರ 2-ಶೃಂಗೇರಿಯಲ್ಲಿ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಎಸ್ಟೇಟ್ ಬಳಿ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದು.
18 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನ ರಾ.ಹೆ.169 ರ ತ್ಯಾವಣ ಬಳಿ ಮಳೆಯಿಂದ ಗುಡ್ಡಕುಸಿಯುತ್ತಿರುವುದು.