ಭಾರತ ಸೇವಾದಳ ಸಂಸ್ಥೆಯ ಶಾಖೆ ಹೆಚ್ಚಿಸಿ: ಮಹೇಶ ಪತ್ತಾರ

| Published : Jul 07 2024, 01:29 AM IST

ಸಾರಾಂಶ

ಭಾರತ ಸೇವಾದಳ ಸಂಸ್ಥೆಗೆ ನೂರು ವರ್ಷಗಳ ತುಂಬಿದ್ದು, ಇನ್ನು ಹೆಚ್ಚಿನ ಶಾಖೆಗಳನ್ನು ಮಾಡುವ ಮೂಲಕ ಸೇವಾ ದಳಕ್ಕೆ ವಿಶೇಷ ಕೊಡುಗೆ ನೀಡೋಣ ಎಂದು ಜಿಲ್ಲಾ ಸಂಘಟಕ ಮಹೇಶ ಪತ್ತಾರ ಶಿಕ್ಷಕರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಭಾರತ ಸೇವಾದಳ ಸಂಸ್ಥೆಗೆ ನೂರು ವರ್ಷಗಳ ತುಂಬಿದ್ದು, ಇನ್ನು ಹೆಚ್ಚಿನ ಶಾಖೆಗಳನ್ನು ಮಾಡುವ ಮೂಲಕ ಸೇವಾ ದಳಕ್ಕೆ ವಿಶೇಷ ಕೊಡುಗೆ ನೀಡೋಣ ಎಂದು ಜಿಲ್ಲಾ ಸಂಘಟಕ ಮಹೇಶ ಪತ್ತಾರ ಶಿಕ್ಷಕರಿಗೆ ಸಲಹೆ ನೀಡಿದರು.ರನ್ನ ಸರಕಾರಿ ಮಾದರಿ ಶಾಲೆಯಲ್ಲಿ ಜರುಗಿದ ಮುಧೋಳ ತಾಲೂಕು ಶಿಕ್ಷಕರ ಪುನಶ್ಚೇತನ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗೊಂದು ಸೇವಾದಳ ಆಗಬೇಕು ಎಂದು ತಿಳಿಸಿದರು. ವಾರ್ಷಿಕ ಕ್ರಿಯಾಯೋಜನೆ ಬಗ್ಗೆ ತಿಳಿಸಿ ವಿವಿಧ ತರಬೇತಿ ನೀಡಿದರು. ಜೂನ್ ಮಾಹೆಯಿಂದ ಮಾರ್ಚ್‌ ಮಾಹೆವರೆಗೆ ಶಾಲೆಗಳಲ್ಲಿ ನಡೆಸಬಹುದಾಗ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಜಿ.ಎನ್. ದಾಸರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾದಳ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಸ್ಥೆಯಾಗಿದ್ದು, ೨೫ ವರ್ಷಗಳ ಹಿಂದೆ ರಾಷ್ಟ್ರೀಯ ಹಬ್ಬಗಳನ್ನು ಸಡಗರದಿಂದ ಆಚರಿಸಲಾಗುತ್ತಿತ್ತು, ಇಂದು ಈ ಸಂಭ್ರಮ ಮಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬ್ಯಾಂಡ್ ವಾದನ ಮತ್ತು ಮಕ್ಕಳ ಮೇಳ ಮಾಡುವ ಬಗ್ಗೆ ವಿಶೇಷವಾಗಿ ತಿಳಿಸಿದರು.

ಕೇಂದ್ರ ಸಮಿತಿ ಸದಸ್ಯ ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ತಾಲೂಕು ದೈಹಿಕ ಪರಿವೀಕ್ಷಕ ಎಸ್.ಎಂ.ಕುರಣಿ ಶಾಲೆಗಳಲ್ಲಿ ಸೇವಾದಳದ ಪಾತ್ರ ತಿಳಿಸಿದರು. ವೈ.ಆರ್. ದಾಸಪ್ಪನವರ, ಎಸ್.ಆರ್. ಮಿರ್ಜಿ, ಎಚ್.ಆರ್. ದಾಸನಗೌಡರ, ಮಂಜುನಾಥ ಪಾಟೀಲ ಇತರರು ಇದ್ದರು.