ಪುಸ್ತಕ ಓದುವ ಹವ್ಯಾಸ ಹೆಚ್ಚಲಿ

| Published : Nov 18 2024, 12:04 AM IST

ಸಾರಾಂಶ

ಗ್ರಾಮದ ಜನರು ಇದರ ಬಳಕೆ ಮಾಡಿಕೊಳ್ಳಬೇಕು.

ಕುರುಗೋಡು: ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳು ಹೊರಬಂದು ಪುಸ್ತಕ ಓದುವ ಹವ್ಯಾಸ ಮೂಡಲಿ ಇಒ ಕೆ.ವಿ. ನಿರ್ಮಲಾ ಹೇಳಿದರು.ತಾಲೂಕಿನ ಸಮೀಪದ ಗೆಣಿಕೆಹಾಳು ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ‘ಪುಸ್ತಕದ ಗೂಡು’ ಶೀರ್ಷಿಕೆಯ ವಿನೂತನ ಗ್ರಂಥಾಲಯವನ್ನು, ಅಕ್ಷರ, ಪ್ರೀತಿ ಜನರಲ್ಲಿ ಒಂದಷ್ಟು ಶಿಕ್ಷಣದ ಬದಲಾವಣೆ ಸಾಧ್ಯವಾಗುತ್ತದೆ. ತಾಪಂ ಇಒ ಕೆ.ವಿ. ನಿರ್ಮಲಾ ಉದ್ಘಾಟಿಸಿದರು.

ಪಿಡಿಒ ಜಯಲಕ್ಷ್ಮಿ ಮಾತನಾಡಿ, ಈ ಪುಸ್ತಕ ಗೂಡು ಮಕ್ಕಳು, ಸಾರ್ವಜನಿಕರು ಬಸ್ ಗಾಗಿ ಕಾಯುವ ಸಮಯದಲ್ಲಿ ಪುಸ್ತಕದ ಗೂಡಿನಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕಥೆ, ಕಾದಂಬರಿ ಮತ್ತು ಮಹತ್ವಪೂರ್ಣ ಕೆಲವು ಪುಸ್ತಕಗಳ ಸಂಗ್ರಹವಿರುತ್ತದೆ. ದಿನದ ೨೪ ತಾಸು ತೆರೆದಿರುತ್ತದೆ. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಾಮದ ಜನರು ಇದರ ಬಳಕೆ ಮಾಡಿಕೊಳ್ಳಬೇಕು ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ, ಪೂಜಾರಿ ಯಲ್ಲೇಶ, ಮಾತನಾಡಿ ಸಾರ್ವಜನಿಕ ಕಚೇರಿಗಳಲ್ಲಿ, ಮಠ, ಮಂದಿರಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಪುಸ್ತಕ ಗೂಡುಗಳನ್ನು ಪುಸ್ತಕದ ಗೂಡಿನಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕಥೆ, ಕಾದಂಬರಿ ಮತ್ತು ಮಹತ್ವಪೂರ್ಣ ಕೆಲವು ಪುಸ್ತಕಗಳ ಸಂಗ್ರಹವಿರುತ್ತದೆ. ದಿನದ ೨೪ ತಾಸು ತೆರೆದಿರುತ್ತದೆ. ಸಮುದಾಯದವರಲ್ಲಿ ಓದುವ ಹವ್ಯಾಸ ಮೂಡಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಭೇಟಿ ನೀಡಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ನಾಗವೇಣಿ ದೊಡ್ಡಬಸಪ್ಪ, ಗ್ರಾಪಂ ಸದಸ್ಯ ಬಸವರಾಜ ದೊಡ್ಡಬಸಪ್ಪ, ಪೂಜಾ, ಹೇಮಾವತಿ, ದೊಡ್ಡ ರುದ್ರಪ್ಪ ಬಸೀರ್ ಸಾಬ್, ಮುಖ್ಯಗುರು ಹುಸೇನ್ ಬಾಷಾ, ಶಿಕ್ಷಕ ದೊಡ್ಡ ಬಸವನಗೌಡ, ಶಾಲಾ ಮಕ್ಕಳು ಇದ್ದರು.

ಕುರುಗೋಡು ತಾಲೂಕಿನ ಸಮೀಪದ ಸಮೀಪದ ಗೆಣಿಕೆಹಾಳು ಗ್ರಾಮದ ಬಸ್ ನಿಲ್ದಾಣದಲ್ಲಿ ಪುಸ್ತಕದ ಗೂಡು ಶೀರ್ಷಿಕೆಯ ಗ್ರಂಥಾಲಯ ಉದ್ಘಾಟನೆಗೊಂಡಿತು.