ಕೈಗಾರಿಕಾ ಉದ್ಯಮದವರಿಗೆ ಸಿಗುವಂಥ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೈಗಾರಿಕಾ ವಲಯದ ಬೆಳವಣಿಗೆಗೆ ಪ್ರಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅವಶ್ಯಕವಾಗಿದೆ.

ಹುಬ್ಬಳ್ಳಿ:

ಕೈಗಾರಿಕಾಗಳ ಉತ್ಪಾದನೆ ಸಾಮರ್ಥ್ಯ ಹೆಚ್ಚಳವಾಗಬೇಕಿದೆ. ವಸ್ತುಗಳ ಸಾಗಾಟ ಮಾಡಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ್ ಪಾಟೀಲ್ ಅಭಿಪ್ರಾಯಪಟ್ಟರು.

ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಕೈಗಾರಿಕೆ ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಜಿಲ್ಲೆಯ ಎಂಎಸ್ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ರ್ಯಾಂಪ್‌ (ಆರ್‌‌ಎಎಂಪಿ) ಯೋಜನೆಯಡಿ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ (ಟಿಆರ್‌‌ಇಡಿಎಸ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕಾ ಉದ್ಯಮಿಗಳಿಗೆ ಸಹಾಯವಾಗುವಂತೆ ರಫ್ತು ಪ್ರೋತ್ಸಾಹ ಮತ್ತು ಅನುಕೂಲತೆ (ಟಿಆರ್‌‌ಇಡಿಎಸ್) ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಮಾತನಾಡಿ, ಕೈಗಾರಿಕಾ ಉದ್ಯಮದವರಿಗೆ ಸಿಗುವಂಥ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೈಗಾರಿಕಾ ವಲಯದ ಬೆಳವಣಿಗೆಗೆ ಪ್ರಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು.

ಎಚ್‌ಇಎಫ್‌ನ ಅಧ್ಯಕ್ಷ ವಿಜೇಶ್ ಸೈಗಲ್ ಮಾತನಾಡಿ, ವಿದೇಶದ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿವೆ. ಆದರೆ, ಭಾರತದ ಕಂಪನಿಗಳು ಅಭಿವೃದ್ಧಿ ಹೊಂದುತ್ತಿವೆ. ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಾಣವಾಗಬೇಕಿದ್ದು ಕೈಗಾರಿಕೋದ್ಯಮಿಗಳಿಗೆ ಸೂಕ್ತ‌ ತರಬೇತಿಯ ಅವಶ್ಯಕತೆಯಿದೆ ಎಂದರು

ಬ್ಯಾಂಕ್ ಆಫ್ ಬರೋಡಾದ ಎಲ್‌ಡಿಎಂ ಬಸವರಾಜ ಗಡಾದವರ, ಎಸ್.ಎಸ್. ಮೂರ್ತಿ, ಅಶೋಕ‌ ಕುನ್ನೂರ, ನಾಗೇಶ ರಿತ್ತಿ, ಪ್ರಶಾಂತ ಅಚಲಕರ, ಸಂದೀಪ ಬಿಡಸಾರಿಯಾ, ಮೈಕಲ್ ಮದಕಟ್ಟಿ, ವಿಶ್ವನಾಥ ಗೌಡರ, ಶಿವಾನಂದ ಕಮ್ಮಾರ, ಸುಧಾ ಪವಾರ, ಶ್ರೀಪತಿ ಭಟ್‌, ಪ್ರದೀಪ ಶೆಟ್ಟಿ, ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಇತರರು ಭಾಗವಹಿಸಿದ್ದರು.